ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿರಾಗಿತ್ತೆ ನೆಹರೂ ಸೆಕ್ರೆಟರಿ ಜೊತೆ ಸೀಕ್ರೆಟ್ ಸಂಬಂಧ?

By ನಿಹಾರಿಕಾ
|
Google Oneindia Kannada News

"ಸುರಕ್ಷತೆಯ ಕೊರತೆ ಅನುಭವಿಸುತ್ತಿರುವ ಮಗಳು, ಮೋಸಕ್ಕೊಳಗಾದ ಹೆಂಡತಿ, ರಾಷ್ಟ್ರೀಯ ಹೀರೋಯಿನ್, ಖಡಕ್ ಡಿಕ್ಟೇಟರ್!" ಇದು ಭಾರತ ಕಂಡ ಅತ್ಯಂತ ಪ್ರಭಾವಶಾಲಿ, ಅತ್ಯಂತ ವಿವಾದಾತ್ಮಕ ರಾಜಕಾರಣಿ, ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ (1917-1984) ಅವರ ಬಗ್ಗೆ ಬರೆಯಲಾಗಿರುವ ಪುಸ್ತಕದ ಒಕ್ಕಣೆ!

ಖ್ಯಾತ ಪತ್ರಕರ್ತೆ ಸಾಗರಿಕಾ ಘೋಷ್ ಬರೆದಿರುವ 'ಇಂದಿರಾ : ಇಂಡಿಯಾಸ್ ಮೋಸ್ ಪವರ್ ಫುಲ್ ಪ್ರೈಮ್ ಮಿನಿಸ್ಟರ್' ಪುಸ್ತಕದಲ್ಲಿ 'ಐರನ್ ಲೇಡಿ' ಎಂದೇ ಖ್ಯಾತರಾಗಿದ್ದ ಇಂದಿರಾ ಗಾಂಧಿಯವರ 'ಮುಖವಾಡ'ವನ್ನು ಕಳಚುವಂಥ, ಇಂದಿರಾ ಬಗ್ಗೆ ಅವರ ಅಭಿಮಾನಿಗಳಿಗೆ ಇದ್ದ ನಂಬಿಕೆಗೆ ಧಕ್ಕೆಯಾಗುವಂಥ ಹಲವಾರು ವಿವರಗಳನ್ನು ಈ ಪುಸ್ತಕ ಹೊಂದಿದೆ.

ಈ ವಿವಾದಾತ್ಮಕ ಪುಸ್ತಕದ ಆಯ್ದ ಪುಟ ಎನ್‌ಡಿಟಿವಿಯಲ್ಲಿ ಪ್ರಕಟವಾಗಿದ್ದು, ಅದರಲ್ಲಿ ನೆಹರೂ ಅತ್ಯಾಪ್ತನೊಂದಿಗೆ ಇಂದಿರಾ ಗಾಂಧಿಯವರ ಅನೈತಿಕ ಸಂಬಂಧ, ಅವರ ಹಸಿಬಿಸಿ ಪ್ರೇಮಕಥೆ, ಅವರ ಗಂಡ ರಾಜಕಾರಣಿ ಫಿರೋಜ್ ಗಾಂಧಿಗೆ ನೆಹರೂ ಕುಟುಂಬದೊಡನಿದ್ದ ಎಣ್ಣೆಸೀಗೇಕಾಯಿ ಸಂಬಂಧಗಳನ್ನು ಸಾಗರಿಕಾ ಘೋಷ್ ಬರಿದುಬೆತ್ತಲೆ ಮಾಡಿದ್ದಾರೆ.

ಆ ಪುಸ್ತಕದ ಪುಟದಲ್ಲಿನ ಕೆಲವೊಂದಿಷ್ಟು ರೋಚಕ ಸಂಗತಿಗಳು ಕೆಳಗಿನಂತಿವೆ.

ಸಲುಗೆ, ಪ್ರೀತಿಗಿಂತ ಹೆಚ್ಚಾಗಿ ದೈಹಿಕ ಸಂಬಂಧ

ಸಲುಗೆ, ಪ್ರೀತಿಗಿಂತ ಹೆಚ್ಚಾಗಿ ದೈಹಿಕ ಸಂಬಂಧ

ಜವಾಹರಲಾಲ್ ನೆಹರೂ ಅವರ ವೈಯಕ್ತಿಕ ಕಾರ್ಯದರ್ಶಿಯಾಗಿದ್ದ, 1946ರಿಂದ 1959ರವರೆಗೆ ಹದಿಮೂರು ವರ್ಷಗಳ ಕಾಲ ನೆಹರೂ ಅವರ ನೆರಳಿನಂತಿದ್ದ, ಲೈವ್ಲಿ ಮಾತುಗಾರ, ಉತ್ಸಾಹದ ಬುಗ್ಗೆ, ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ, 'ಮ್ಯಾಕ್' ಎಂದು ಕರೆಯಿಸಿಕೊಳ್ಳುತ್ತಿದ್ದ ಎಂಓ ಮಥಾಯಿ ಎಂಬುವವರೊಡನೆ ಇಂದಿರಾಗೆ ಸಲುಗೆಗಿಂತ ಹೆಚ್ಚಾಗಿ, ಪ್ರೀತಿ ಪ್ರೇಮಕ್ಕಿಂತ ವಿಭಿನ್ನವಾಗಿ ದೈಹಿಕ ಸಂಬಂಧವೂ ಇತ್ತು.

'She' ಎಂಬ ಒಂದು ಅಧ್ಯಾಯ

'She' ಎಂಬ ಒಂದು ಅಧ್ಯಾಯ

ಮಥಾಯಿ ಅವರೇ ಬರೆದಿರುವ 'ರೆಮಿನಿಸೆನ್ಸರ್ ಆಫ್ ನೆಹರೂ ಏಜ್' ಎಂಬ ಆತ್ಮಕಥೆಯಲ್ಲಿ 'She' ಎಂಬ ಒಂದು ಅಧ್ಯಾಯ ಬರುತ್ತದೆ. ಅದರಲ್ಲಿ ಮಥಾಯಿ ಅವರು ಹನ್ನೆರಡು ವರ್ಷಗಳ ಕಾಲ ಅತ್ಯಂತ 'ಪ್ಯಾಷನೇಟ್' ಆಗಿದ್ದ ಇಂದಿರಾ ಗಾಂಧಿ ಅವರೊಂದಿಗೆ ತಮಗಿದ್ದ ಪ್ರೀತಿಗೀತಿ, ಪ್ರೇಮಕಾಮ, ವಾಂಛೆ, ಸಲುಗೆಯ ಬಗ್ಗೆ ಅತ್ಯಂತ ಸ್ವಚ್ಛಂದವಾಗಿ ಬರೆದುಕೊಂಡಿದ್ದಾರೆ.

ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದಾರೆ

ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದಾರೆ

'She' ಎಂಬ ಆ ಅಧ್ಯಾಯ ಆತ್ಮಕಥೆಯಿಂದ ಕಿತ್ತುಹಾಕಲಾಗಿದೆಯಾದರೂ, ನೆಹರೂ ಕುಟುಂಬವನ್ನು ದ್ವೇಷಿಸುತ್ತಿದ್ದವರು, ಬಲಪಂಥೀಯರು ರಸವತ್ತಾದ ಆ ಅಧ್ಯಾಯವನ್ನು ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದಾರೆ. ಈಗಲೂ ಆ ಕಥೆಗಳು ಇಂಟರ್ನೆಟ್ಟಿನಲ್ಲಿ ಲಭ್ಯವಿವೆ. ಅದರಲ್ಲಿ ಮಥಾಯಿ ಅವರು ಇಂದಿರಾ ಹೇಗಿದ್ದರೆಂದು ಕೆಳಗಿನಂತೆ ಬಣ್ಣಿಸುತ್ತಾರೆ.

'ಆಕೆಗೆ' ಕ್ರಿಯೋಪಾತ್ರಾಳಂಥ ಮೂಗಿದೆ

'ಆಕೆಗೆ' ಕ್ರಿಯೋಪಾತ್ರಾಳಂಥ ಮೂಗಿದೆ

'ಆಕೆಗೆ' ಕ್ರಿಯೋಪಾತ್ರಾಳಂಥ ಮೂಗಿದೆ, ಪೌಲೀನ್ ಬೊನಾಪಾರ್ಟಿಯಂಥ ಕಣ್ಣುಗಳಿವೆ, ವೀನಸ್ ಳಂಥ ಸ್ತನಗಳಿವೆ... ಮುಂದುವರಿಯುತ್ತ... ಅವರು ಹಾಸಿಗೆಯಲ್ಲಿ ಅದ್ಭುತವಾಗಿದ್ದರು, ಲೈಂಗಿಕತೆಯಲ್ಲಿ ಒಬ್ಬ ಫ್ರೆಂಚ್ ಮಹಿಳೆ ಮತ್ತು ಕೇರಳದ ನಾಯರ್ ಮಹಿಳೆಗಿದ್ದ ಕಲೆಗಾರಿಕೆ ಇಂದಿರಾಗಿತ್ತು. ಅವರು ಸುದೀರ್ಘ ಚುಂಬನವನ್ನು ತುಂಬಾ ಇಷ್ಟಪಡುತ್ತಿದ್ದರು. ಅವರಿಬ್ಬರ ಸಂಗಮದಿಂದ ಒಂದು ಬಾರಿ ಗರ್ಭಪಾತ ಕೂಡ ಇಂದಿರಾ ಮಾಡಿಸಿಕೊಳ್ಳಬೇಕಾಯಿತು.

ಆಕಾಶದಲ್ಲಿ ಪ್ರೇಮಿಸಲು ಇಚ್ಛಿಸುತ್ತೇನೆ

ಆಕಾಶದಲ್ಲಿ ಪ್ರೇಮಿಸಲು ಇಚ್ಛಿಸುತ್ತೇನೆ

ಎಡಿಟ್ ಮಾಡಿಲ್ಲದ She ಅಧ್ಯಾಯದಲ್ಲಿ, ಇಂದಿರಾ ಗಾಂಧಿಯವರು ತಾವು ಹಿಂದೂವನ್ನು ಮದುವೆಯಾಗಲು ಎಂದೂ ಇಚ್ಛಿಸಿದ್ದಿಲ್ಲ. ತಾವು ಒಂದು ರಾಣಿ ಜೇನಿನಂತೆ. ಅತೀ ಎತ್ತರದಲ್ಲಿ ಆಕಾಶದಲ್ಲಿ ಪ್ರೇಮಿಸಲು ಇಚ್ಛಿಸುತ್ತೇನೆ ಎಂದು ಹೇಳಿರುವುದಾಗಿ ಬರೆಯಲಾಗಿದೆ. ಆ ಅಧ್ಯಾಯದ ಕೊನೆಯಲ್ಲಿ ಆ ಮಹಿಳೆಯನ್ನು ತುಂಬಾ ಪ್ರೀತಿಸುತ್ತಿದ್ದೆ ಎಂದು ಮಥಾಯಿಸ್ ಬರೆದಿದ್ದಾರೆ.

ನೆಹರೂ ಬಗ್ಗೆ ಗುಪ್ತ ಮಾಹಿತಿ ನೀಡುತ್ತಿದ್ದರು

ನೆಹರೂ ಬಗ್ಗೆ ಗುಪ್ತ ಮಾಹಿತಿ ನೀಡುತ್ತಿದ್ದರು

ನೆಹರೂ ಮತ್ತು ಇಂದಿರಾ ಜೊತೆ ಅಷ್ಟೊಂದು ಆತ್ಮೀಯರಾಗಿದ್ದ ಮಥಾಯಿ ಅವರು, ಅದೇ ಆತ್ಮೀಯತೆಯನ್ನು ದುರ್ಬಳಕೆ ಮಾಡಿಕೊಂಡು ಕುಟುಂಬಕ್ಕೆ ಭಾರೀ ಆಘಾತ ಉಂಟು ಮಾಡಿದರು. ಕೇಂದ್ರ ಗುಪ್ತದಳ ಸಂಸ್ಥೆಯ ಜೊತೆ ಸಂಪರ್ಕ ಹೊಂದಿದ್ದ ಮಥಾಯಿ ಅವರು ನಂತರ, ನೆಹರೂ ಅವರಿಗೆ ಸಂಬಂಧಿಸಿದ ಹಲವಾರು ಗುಪ್ತ ದಾಖಲೆಗಳನ್ನು ಗುಪ್ತದಳಕ್ಕೆ ನೀಡಿದರು ಎಂದು ನಟವರ್ ಸಿಂಗ್ ಅವರು ಹೇಳಿದ್ದಾರೆ.

ಗಂಡನಿಗೇ ವಿರುದ್ಧವಾಗಿ ನಿಂತ ಇಂದಿರಾ

ಗಂಡನಿಗೇ ವಿರುದ್ಧವಾಗಿ ನಿಂತ ಇಂದಿರಾ

ಇಂದಿರಾ ಅವರ ಗಂಡನಾಗಿದ್ದ ಫಿರೋಜ್ ಗಾಂಧಿಯವರು ಕಾಂಗ್ರೆಸ್ ಸೇರಿಕೊಂಡು, ಮಂತ್ರಿಯಾಗಿ ಸಾಕಷ್ಟು ಯಶಸ್ಸು ಕಂಡಿದ್ದು ಇಂದಿರಾಗೆ ಸಾಕಷ್ಟು ಮುಜುಗರ ಉಂಟು ಮಾಡಿತ್ತು. ಎಮರ್ಜೆನ್ಸಿ ಸಮಯದಲ್ಲಿ ತಮ್ಮ ಗಂಡನೇ ರೂಪಿಸಿದ ಕಾನೂನುಗಳನ್ನು ಇಂದಿರಾ ರದ್ದುಪಡಿಸಿದ್ದರು. ನೆಹರೂ ಮತ್ತು ಇಂದಿರಾರನ್ನು ಉರಿಸಲೆಂದೇ ಫಿರೋಜ್ ಅವರು ಹಲವಾರು ಸುಂದರಿಯರ ಜೊತೆ ಸಖ್ಯ ಕೂಡ ಬೆಳೆಸಿದ್ದರು. ಒಟ್ಟಿನಲ್ಲಿ ಇಬ್ಬರ ಮಧ್ಯೆ ಸಾಮರಸ್ಯ ಮೊದಲಿನಿಂದಲೂ ಇರಲೇ ಇಲ್ಲ.

English summary
Journalist Sagarika Ghose has written a book on Indira Gandhi - Indira : India's Most Powerful Prime Minister. In this book she has written about Indira's political life, love affair with Mathai, hate relationship with Feroze Gandhi etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X