'ಕೃಷಿ ಕಾನೂನು ವಾಪಸ್ ತರುವ ಬಗ್ಗೆ ಎಂದಿಗೂ ಹೇಳಿಲ್ಲ' : ತೋಮರ್
ನವದೆಹಲಿ, ಡಿಸೆಂಬರ್ 26: ಕೇಂದ್ರ ಸರಕಾರ ಕೃಷಿ ಕಾನೂನನ್ನು ಪರಿಷ್ಕೃತ ರೂಪದಲ್ಲಿ ಮತ್ತೆ ಜಾರಿಗೆ ತರುವುದಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಯೂಟರ್ನ್ ಹೊಡೆದಿದ್ದಾರೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ, ಕೃಷಿ ಕಾಯ್ದೆಯನ್ನು ಮತ್ತೆ ತರಲು ಸರ್ಕಾರ ಯೋಚಿಸುತ್ತಿಲ್ಲ ಎಂದು ಹೇಳಿದ್ದಾರೆ. ಈಗ ರದ್ದಾದ ಕಾನೂನನ್ನು ಮರಳಿ ತರಲು ಸರ್ಕಾರ ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ನರೇಂದ್ರ ಸಿಂಗ್ ತೋಮರ್ ಮಾತನಾಡಿ, ''ಕೃಷಿ ಕಾನೂನು ಮತ್ತೆ ಬರಲಿದೆ ಎಂದು ನಾನು ಹೇಳಿಲ್ಲ. ನನ್ನ ಹೇಳಿಕೆಗಳನ್ನು ಕಾಂಗ್ರೆಸ್ ತಪ್ಪಾಗಿ ಬಿಂಬಿಸುತ್ತಿದೆ'' ಎಂದು ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ತೋಮರ್, ಮತ್ತೆ ತಿದ್ದುಪಡಿಗಳೊಂದಿಗೆ ಕೃಷಿ ಕಾಯ್ದೆಯನ್ನು ತರುತ್ತೇವೆ ಎಂದು ಹೇಳಿದ್ದರು. 'ಕೃಷಿ ಕಾನೂನುಗಳ ರದ್ದತಿಗೆ "ಕೆಲವು ಜನರು ಕಾರಣ". ಸಂಸತ್ತಿನಲ್ಲಿ ಚರ್ಚೆಯ ಕೊರತೆಯೊಂದಿಗೆ ಆ ಮಹತ್ವದ ಕಾಯ್ದೆಗಳನ್ನು ರದ್ದುಗೊಳಿಸಲಾಯಿತು. ದೇಶಕ್ಕೆ ಸ್ವತಂತ್ರ್ಯ ಬಂದ 70 ವರ್ಷಗಳ ಬಳಿಕ ಕೃಷಿ ವಿಭಾಗದ ಸರ್ವತೋಮುಖ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಕ್ರಾಂತಿಕಾರಿ ಕಾನೂನು ತರಲು ಮುಂದಾಗಿತ್ತು. ಇದು ಕೆಲ ಪಟ್ಟಭದ್ರ ಹಿತಾಸಕ್ತಿಗಳಿಗೆ ಹಿಡಿಸಲಿಲ್ಲ. ಹೀಗಾಗಿ ಕಾಯ್ದೆಗಳ ಕುರಿತು ಅಪಪ್ರಚಾರ ಮಾಡಿ ಅವುಗಳ ವಿರುದ್ಧ ಪ್ರತಿಭಟಿಸುವಂತೆ ಮಾಡಿದರು. ಆದರೆ ಅವರಿಗೆ ನೆನಪಿರಲಿ. ಸರ್ಕಾರ ಇದರಿಂದ ನಿರಾಶೆಗೊಂಡಿಲ್ಲ. ನಾವು ಒಂದು ಹೆಜ್ಜೆ ಹಿಂದಕ್ಕೆ ಹೋಗಿರಬಹುದು. ಆದರೆ ಅದಕ್ಕಿಂತ ವೇಗದಲ್ಲಿ ಮತ್ತೆ ಮುನ್ನುಗ್ಗುತ್ತೇವೆ. ನಾವು ಖಂಡಿತಾ ಮತ್ತೆ ಮುಂದುವರಿಯುತ್ತೇವೆ ಏಕೆಂದರೆ ರೈತರು ದೇಶದ ಬೆನ್ನೆಲುಬು ಎಂದು ಹೇಳಿದ್ದರು.
ಶುಕ್ರವಾರ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನರೇಂದ್ರ ಸಿಂಗ್ ತೋಮರ್ ಅವರು ಹಾಗೆ ಹೇಳಿದ್ದೀರಾ ಎಂದು ಕೇಳಿದಾಗ?, "ನಾನು ಹಾಗೆ ಹೇಳಿಲ್ಲ. ಸರ್ಕಾರ ಉತ್ತಮ (ಕೃಷಿ) ಕಾನೂನುಗಳನ್ನು ಮಾಡಿದೆ ಎಂದು ನಾನು ಹೇಳಿದೆ. ಕಾರಣಾಂತರದಿಂದ ನಾವು ಅವುಗಳನ್ನು ಹಿಂದಕ್ಕೆ ತೆಗೆದುಕೊಂಡಿದ್ದೇವೆ. ಸರ್ಕಾರವು ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ" ಎಂದು ಹೇಳಿದರು.

ರೈತರು ದೆಹಲಿ ಮತ್ತು ದೇಶದ ಇತರ ಭಾಗಗಳ ಗಡಿಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರು 19 ನವೆಂಬರ್ 2021 ರಂದು ದೇಶದ ರೈತರಿಗೆ ಕ್ಷಮೆಯಾಚಿಸಿದರು. ಮೂರು ಕಾನೂನುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದರು. ಕೃಷಿ ಕಾನೂನುಗಳ ರದ್ದತಿ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳು ನವೆಂಬರ್ 29 ರಂದು ಅಂಗೀಕರಿಸಿದವು.
ಬಳಿಕ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿ, "ಮತ್ತೆ ತಿದ್ದುಪಡಿಗಳೊಂದಿಗೆ ಕೃಷಿ ಕಾಯ್ದೆಯನ್ನು ತರುತ್ತೇವೆ ಎಂದು ಹೇಳಿದ್ದರು. ನಾವು ಒಂದು ಹೆಜ್ಜೆ ಹಿಂದೆ ಹೋಗಿರಬಹುದು. ಆದರೆ ನಾವು ಮತ್ತೆ ಮುಂದುವರಿಯುತ್ತೇವೆ. ರೈತರು ಭಾರತದ ಬೆನ್ನೆಲುಬು ಮತ್ತು ಬೆನ್ನೆಲುಬು ಬಲಿಷ್ಠವಾಗಿದ್ದರೆ ದೇಶವು ಬಲವಾಗಿರುತ್ತದೆ" ಎಂದಿದ್ದರು.
ಪ್ರಧಾನಿ ಮೋದಿಯವರ ಕ್ಷಮೆಯಾಚನೆಯನ್ನು ನರೇಂದ್ರ ಸಿಂಗ್ ತೋಮರ್ ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ರಾಹುಲ್ ಗಾಂಧಿ ಟ್ವೀಟ್ ಮಾಡಿ, "ಕೃಷಿ ಸಚಿವರು ಮೋದಿಯವರ ಕ್ಷಮೆಯಾಚನೆಯನ್ನು ಅವಮಾನಿಸಿದ್ದಾರೆ.ಇದು ಅತ್ಯಂತ ಖಂಡನೀಯ. ಮತ್ತೆ ಕೃಷಿ ವಿರೋಧಿ ಕ್ರಮ ಕೈಗೊಂಡರೆ ಅನ್ನದಾತರ ಸತ್ಯಾಗ್ರಹ ಖಚಿತ'' ಎಂದಿದ್ದರು. ಆದರೀಗ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಾವು ಕೇಂದ್ರ ಸರಕಾರ ಕೃಷಿ ಕಾನೂನನ್ನು ಪರಿಷ್ಕೃತ ರೂಪದಲ್ಲಿ ಮತ್ತೆ ಜಾರಿಗೆ ತರುವುದಿಲ್ಲ ಉಲ್ಟಾ ಹೊಡೆದಿದ್ದಾರೆ.
#WATCH | "I never said that," said Union Agriculture Minister Narendra Singh Tomar on his reported remarks alluding that Govt will again bring farm laws (25.12) pic.twitter.com/kHNt9xrYXF
— ANI (@ANI) December 26, 2021












Click it and Unblock the Notifications