ಮೋದಿ ಡಿಗ್ರಿ ವರದಿ ನೀಡಲು ಸೂಚಿಸಿದ್ದ ಅಧಿಕಾರಿ ಎತ್ತಂಗಡಿ

Posted By:
Subscribe to Oneindia Kannada

ನವದೆಹಲಿ, ಜನವರಿ 12: ದೆಹಲಿ ವಿಶ್ವವಿದ್ಯಾಲಯದಿಂದ ಪ್ರಧಾನಿ ಮೋದಿಯವರು 1978ರಲ್ಲಿ ಪಡೆದಿದ್ದರೆನ್ನಲಾದ ಕಲಾ ವಿಭಾಗದ ಪದವಿಯ ಬಗ್ಗೆ ಪರೋಕ್ಷವಾಗಿ ತನಿಖೆ ಮಾಡುತ್ತಿದ್ದವರಿಗೆ ನೆರವಾಗಿದ್ದ ಮಾನವ ಸಂಪನ್ಮೂಲ ಸಚಿವಾಲಯದ ಮಾಹಿತಿ ಅಧಿಕಾರಿ ಎಂ.ಎಸ್. ಆಚಾರ್ಯುಲು ಅವರನ್ನು ವರ್ಗಾವಣೆ ಮಾಡಲಾಗಿದೆ.

ಕಳೆದ ವರ್ಷ ಡಿಸೆಂಬರ್ 12ರಂದು ಆಚಾರ್ಯುಲು ಅವರು, 1978ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಎಲ್ಲಾ ವಿದ್ಯಾರ್ಥಿಗಳ ವಿವರಗಳನ್ನು ದಾಖಲೆಯ ರೂಪದಲ್ಲಿ ನೀಡುವಂತೆ ದೆಹಲಿ ವಿವಿಗೆ ಸೂಚಿಸಿದ್ದರು.

HRD official, who allowed inspection of degree records, loses his post

ಹಿನ್ನೆಲೆ: ಕಳೆದ ವರ್ಷ ವ್ಯಕ್ತಿಯೊಬ್ಬರು ದೆಹಲಿ ವಿಶ್ವವಿದ್ಯಾಲಯಕ್ಕೆ ಮಾಹಿತಿ ಹಕ್ಕು ನಿಯಮದಡಿ ಅರ್ಜಿ ಸಲ್ಲಿಸಿ, 1978ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದವರ ವಿವರ ನೀಡುವಂತೆ ಕೋರಿದ್ದರು. ಆದರೆ, ದೆಹಲಿ ವಿವಿಯು ಪ್ರತಿಯೊಬ್ಬ ವಿದ್ಯಾರ್ಥಿಯ ಮಾಹಿತಿ ಗೌಪ್ಯವಾಗಿಡುವ ನಿಯಮ ಇರುವುದರಿಂದ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿತ್ತು.

ಆನಂತರ, ಈ ವಿಚಾರ ಅಚ್ಯುತನ್ ಅವರಿಗೆ ಮುಟ್ಟಿತ್ತು. ತಕ್ಷಣವೇ ದೆಹಲಿ ವಿಶ್ವವಿದ್ಯಾಲಯಕ್ಕೆ ಸೂಚನೆ ರವಾನಿಸಿದ್ದ ಅವರು, ಅರ್ಜಿದಾರರು ಕೇಳುತ್ತಿರುವ ಮಾಹಿತಿಯನ್ನು ಸವಿವರವಾಗಿ ನೀಡುವಂತೆ ಆಗ್ರಹಿಸಿದ್ದರು.

ಅವರ ಆ ಸೂಚನೆಯೇ ಇಂದು ಅವರು ವರ್ಗಾವಣೆಯಾಗಲು ಕಾರಣ ಎಂದು ಕೆಲವು ಮೂಲಗಳು ಹೇಳಿದರೆ, ಮತ್ತೂ ಕೆಲವು ಮೂಲಗಳು, ಇದೊಂದು ಸಹಜ ವರ್ಗಾವಣೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
HR ministry Information Commissioner MS Acharyulu who had ordered the inspection of the DU degree records of 1978 has got transfered.
Please Wait while comments are loading...