ಚಂದ್ರನ ಮೇಲೆ ಇಳಿಯಲು ಸಮತಟ್ಟಾದ ಜಾಗ ಹುಡುಕಿದ್ದು ಹೇಗೆ ಇಸ್ರೋ?

ಭಾರತದ ಚಂದ್ರಯಾನ-3 ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದೆ. 2019ರ ಸೋಲಿನ ಸೇಡನ್ನು ಭಾರತ ಈ ಮೂಲಕ ತೀರಿಸಿಕೊಂಡಿದೆ. ಯಾವುದೇ ತಪ್ಪು ಮಾಡದೆ, ಪ್ರತಿಯೊಂದು ಹಂತದಲ್ಲೂ ಗೆದ್ದು ಬೀಗಿದೆ ಭಾರತದ ಇಸ್ರೋ. ಹಾಗಾದರೆ ಇಸ್ರೋ ಇಷ್ಟು ಖಡಕ್ ಆಗಿ ತನ್ನ ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ಗೆದ್ದಿದ್ದು ಹೇಗೆ? ಇಸ್ರೋಗೆ ನೆರವಾಗಿರುವ ತಂತ್ರಜ್ಞಾನ ಯಾವುದು? ಸಂಪೂರ್ಣ ಮಾಹಿತಿ ಇಲ್ಲಿದೆ.

ಇಸ್ರೋಗೆ ಇವತ್ತು ನಿಜವಾಗೂ ಯುಗಾದಿ ಹಬ್ಬ, ಯಾಕಂದ್ರೆ ತಾನು ಅಂದುಕೊಂಡ ಗುರಿ ಸಾಧಿಸಿದೆ. ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದ ಯೋಜನೆಯಲ್ಲಿ ಇಸ್ರೋಗೆ ಇಂದು ದೊಡ್ಡ ಸಕ್ಸಸ್ ಸಿಕ್ಕಿದೆ. ಹೀಗೆ ಇಸ್ರೋ ಕಳೆದ ಬಾರಿಗಿಂತ ಅಂದರೆ ಚಂದ್ರಯಾನ 2ಕ್ಕಿಂತ ಚಂದ್ರಯಾನ-3ರಲ್ಲಿ ತುಂಬಾ ಖಡಕ್ ಆಗಿ ಕಾರ್ಯನಿರ್ವಹಿಸಿದೆ. ಕಳೆದ ಬಾರಿಯ ತಪ್ಪುಗಳನ್ನ ಸರಿ ಮಾಡಿಕೊಂಡಿರುವ ಇಸ್ರೋ, ಈ ಬಾರಿ ಯಾವುದೇ ತಪ್ಪು ನಡೆಯದಂತೆ ಮೊದಲೇ ಎಚ್ಚರಿಕೆ ವಹಿಸಿತ್ತು. ಹೀಗಾಗಿ ಯಾವುದೇ ತಪ್ಪು ಆಗದಂತೆ ಪ್ರತಿ ಹಂತದಲ್ಲೂ ಇಸ್ರೋಗೆ ಜಯ ಸಿಕ್ಕಿದೆ. ಹಾಗಾದರೆ ಇಲ್ಲಿ ಬಳಿಸಿದ್ದ ತಂತ್ರಜ್ಞಾನ ಎಂತಹದ್ದು? ಮುಂದೆ ಓದಿ.

How ISRO found flat landing site on Moon surface to land Vikram lander


ಕ್ಯಾಮೆರಾ ಮೂಲಕ ಎಲ್ಲಾ ಗಮನಿಸಿತ್ತು!

ಇಸ್ರೋ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚಂದ್ರನ ಯೋಜನೆಗಾಗಿ ಸಿದ್ಧತೆ ನಡೆಸಿತ್ತು. ಹೀಗಾಗಿ 'ಚಂದ್ರಯಾನ-3' ಲ್ಯಾಂಡರ್ ಹೈಫೈ ಆಗಿದ್ದು, ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ಕೂಡ ಅತ್ಯಾಧುನಿಕ ತಂತ್ರಜ್ಞಾನವೇ ಆಗಿದೆ. ಇದು ವಿಕ್ರಮ್ ಲ್ಯಾಂಡರ್‌ಗೆ ಸರಿಯಾದ ಹಾಗೂ ಸಮತಟ್ಟು ಲ್ಯಾಂಡಿಂಗ್ ಸ್ಥಳ ಹುಡುಕಲು ಸಹಾಯ ಮಾಡಿತ್ತು.

ಕ್ಯಾಮೆರಾದ ಸಹಾಯದಿಂದ ವಿಕ್ರಮ್ ಲ್ಯಾಂಡರ್ ಎಲ್ಲಿ ಇಳಿಯುತ್ತಿದೆ? ಹೇಗೆ ಇಳಿಯುತ್ತಿದೆ? ಅನ್ನೋದನ್ನ ನೋಡಬಹುದಾಗಿತ್ತು. ಇದು ಅಪಾಯದ ಮುನ್ಸೂಚನೆ ನೀಡಿ ಇಸ್ರೋಗೆ ಸಹಕಾರಿಯಾಗಿ ಕೆಲಸ ಮಾಡಿತ್ತು. ಹೀಗೆ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ ಇಸ್ರೋ ಯಶಸ್ಸಿನ ಹಿಂದೆ ದೊಡ್ಡ ಸಹಾಯ ಮಾಡಿದೆ.

How ISRO found flat landing site on Moon surface to land Vikram lander

ಅತ್ಯಾಧುನಿಕ ತಂತ್ರಜ್ಞಾನ ಬಳಸಿದ್ದ ಇಸ್ರೋ

ಕಳೆದ ಬಾರಿ ಭಾರತ ಚಂದ್ರನ ಮೇಲೆ ಲ್ಯಾಂಡರ್ ಇಳಿಸುವಾಗಲೆ ಸ್ವಲ್ಪ ಎಡವಟ್ಟಾಗಿತ್ತು. ಹೀಗೆ ಸಣ್ಣ ಸಮಸ್ಯೆ ಯೋಜನೆ ಹಾಳು ಮಾಡಿತ್ತು. ಹೀಗಾಗಿ ಎಚ್ಚರಿಕೆ ವಹಿಸಿ, ಲ್ಯಾಂಡರ್ ಇಳಿಸುವ ಪ್ರತಿಕ್ಷಣವೂ ಇಸ್ರೋಗೆ ಗೊತ್ತಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ವಿಕ್ರಮ್‌ಗೆ ಸರಿಯಾದ ಲ್ಯಾಂಡಿಂಗ್ ಸ್ಥಳ ತೋರಿಸುತ್ತೆ. ಹಾಗೂ ಲ್ಯಾಂಡರ್‌ನ ಅಪಾಯ ಪತ್ತೆ & ಅಪಾಯ ತಪ್ಪಿಸುವ ಕ್ಯಾಮರಾ (LHDAC) ಕೂಡ ಇದರಲ್ಲಿತ್ತು.

LPDC ಹಾಗೂ LHDAC ಜೊತೆಗೆ ಲೇಸರ್ ಆಲ್ಟಿಮೀಟರ್ (LASA) ಹಾಗೂ ಲೇಸರ್ ಡಾಪ್ಲರ್ ವೆಲಾಸಿಟಿಮೀಟರ್ (LDV) & ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (LHVC) ಪೇಲೋಡ್‌ ಜತೆ ಕೆಲಸ ಮಾಡಿವೆ. ಈ ಮೂಲಕ ಸಮತಟ್ಟಾದ ಜಾಗದ ಮೇಲೆ, ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ ಅನ್ನ ಇಳಿಸಿದೆ ಇಸ್ರೋ. ಭಾರತದ ಈ ಸಾಧನೆಯನ್ನ ಇಡೀ ಜಗತ್ತಿನಲ್ಲೇ ಇದುವರೆಗೂ ಯಾವುದೇ ರಾಷ್ಟ್ರವೂ ಮಾಡಿಲ್ಲ. ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತವೇ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದೆ.

ಹಾಗೇ ಈ ಬಾರಿ ನಾಸಾ ಮತ್ತು ಯುರೋಪ್ ಬಾಹ್ಯಾಕಾಶ ಸಂಸ್ಥೆ ಕೂಡ ಇಸ್ರೋ ಜೊತೆ ಸಾಥ್ ಕೊಟ್ಟು ನಿಂತಿದ್ದವು. ಗ್ರೌಂಡ್‌ ಸ್ಟೇಷನ್‌ ನೆರವಿಲ್ಲದೆ ನೌಕೆಯ ಮಾಹಿತಿ ಪಡೆಯುವುದು ಅಸಾಧ್ಯ. ಈ ಸ್ಥಿತಿಯಲ್ಲಿ ಭೂಮಿ ಮೇಲಿನ ನಿಯಂತ್ರಣ ಕೇಂದ್ರದೊಂದಿಗೆ ನೌಕೆ ನಿರಂತರ ಸಂಪರ್ಕ ಹೊಂದಿದರೆ ಅನಿರೀಕ್ಷಿತ ಅಪಾಯ ತಪ್ಪಿಸುವ ಅವಕಾಶ ಇರಲಿದೆ. ಇದೇ ಕಾರಣಕ್ಕೆ ಅಮೆರಿಕದ ನಾಸಾ ಹಾಗೂ ಯುರೋಪ್‌ನ ಬಾಹ್ಯಾಕಾಶ ಸಂಸ್ಥೆ ಕೂಡ ಇಸ್ರೋಗೆ ಸಾಥ್ ನೀಡಿ ನಿಂತಿದ್ದವು.

How ISRO found flat landing site on Moon surface to land Vikram lander

ನಾಸಾ ಮತ್ತು ಯುರೋಪ್ ಬಾಹ್ಯಾಕಾಶ ಸಂಸ್ಥೆಯ ಸಾಥ್ ಕೂಡ ಒಂದಷ್ಟು ಸಹಾಯ ಮಾಡಿದೆ. ಆದರೆ ಇಸ್ರೋ ವಿಜ್ಞಾನಿಗಳ ಕಾರ್ಯವೇ ಯೋಜನೆಯ ಯಶಸ್ಸಿನಲ್ಲಿ ಪ್ರಮುಖ ವಿಚಾರ. ಹಗಲು, ರಾತ್ರಿ ಲೆಕ್ಕಿಸದೇ ಈ ಸಾಧಕರು ಭಾರತಕ್ಕೆ ಹೆಮ್ಮೆ ತಂದಿದ್ದಾರೆ, ಇಸ್ರೋ ಮತ್ತೊಮ್ಮೆ ಭಾರತದ ಹೆಸರನ್ನ ಬಾಹ್ಯಾಕಾಶಕ್ಕೆ ಹರಡಿಸಿದೆ. ಮುಂದೆ ಭಾರತದ ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ನಡೆಸುವ ಅಧ್ಯಯನ ಮಾನವನ ಭವಿಷ್ಯ ರೂಪಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+