Himachal Snowfall: ಹಿಮಾಚಲದ 216 ಮಾರ್ಗಗಳಲ್ಲಿ ಸಂಚಾರ ಸ್ಥಗಿತ- ಸಿಕ್ಕಿಬಿದ್ದ ಪ್ರವಾಸಿಗರು!
ಹಿಮಾಚಲ ಪ್ರದೇಶದಲ್ಲಿ ಅಧಿಕ ಹಿಮಪಾತವಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಮಾರ್ಗಗಳನ್ನು ನಿರ್ಬಂಧಿಸಲಾಗಿದ್ದು ಪ್ರವಾಸಿಗರು ಹಿಮಪಾತದಲ್ಲಿ ಸಿಕ್ಕಿಕೊಂಡಿರುವುದು ವರದಿಯಾಗಿದೆ.
ಈ ವಾರ ಹಿಮಾಚಲ ಪ್ರದೇಶದಲ್ಲಿ ತಾಪಮಾನ ತೀವ್ರವಾಗಿ ಕುಸಿದಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆ ಮತ್ತು ಹಿಮಪಾತವಾಗಿದೆ. ಹೀಗಾಗಿ ಹಲವು ಮಾರ್ಗಗಳನ್ನು ನಿರ್ಬಂಧಿಸಲಾಗಿದೆ. ನೂರಾರು ಪ್ರವಾಸಿಗರು ಹಿಮಪಾತದಲ್ಲಿ ಸಿಕ್ಕಿಕೊಂಡಿರುವುದು ವರದಿಯಾಗಿದೆ. ರಸ್ತೆ ಮೇಲೆ ಬಿದ್ದ ಹಿಮವನ್ನು ತೆಗೆಯಲು ಸಾಧ್ಯವಾಗದೆ ಗಂಟೆಗಟ್ಟಲೆ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ. ಹಿಮಪಾತದೊಂದಿಗೆ ಮಳೆ ಕೂಡ ಮುಂದುದಿದ್ದು ಪ್ರವಾಸಿಗರು ಆತಂಕದಲ್ಲಿದ್ದಾರೆ. ರಸ್ತೆಯುದ್ದಕ್ಕೂ ವಾಹನಗಳ ಸಾಲುಗಟ್ಟಿನಿಂತಿದ್ದು ಹಿಮ ವಾಹನನಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ.
ಹಿಮಾಚಲದ ಮೇಲ್ಭಾಗದಲ್ಲಿ ಅಂದರೆ ಪರ್ವತಗಳಲ್ಲಿ ಹಿಮಪಾತವು ಮುಂದುವರಿಯುತ್ತದೆ. ಕಳೆದ 24 ಗಂಟೆಗಳಲ್ಲಿ ಲಾಹೌಲ್, ಸ್ಪಿತಿ, ಶಿಮ್ಲಾ, ಕುಲು ಮತ್ತು ಕಿನ್ನೌರ್ ಜಿಲ್ಲೆಗಳಲ್ಲಿ ಅಧಿಕ ಹಿಮಪಾತ ದಾಖಲಾಗಿದೆ. ಹಾಗೂ ತಗ್ಗು ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಇದರಿಂದ ತಾಪಮಾನ ಕಡಿಮೆಯಾಗುತ್ತಿದೆ.


ಹಿಮಾಚಲದಲ್ಲಿ ಸಂಚಾರಕ್ಕೆ ಹಿಮದ ಅಡ್ಡಿ
ಹಿಮಾಚಲದಲ್ಲಿ ಹಿಮಪಾತದಿಂದಾಗಿ ಹಲವು ಮಾರ್ಗಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ. ರಾಜ್ಯದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಒಟ್ಟು 216 ರಸ್ತೆಗಳನ್ನು ಬಂದ್ ಮಾಡಲಾಗಿದೆ. ಲಾಹೌಲ್ ಮತ್ತು ಸ್ಪಿತಿಯಲ್ಲಿ ಹೆಚ್ಚಿನ ಮಾರ್ಗಗಳನ್ನು ನಿರ್ಬಂಧಿಸಲಾಗಿದೆ. ಲಾಹೌಲ್ ಮತ್ತು ಸ್ಪಿತಿಯಲ್ಲಿ 148, ಕಿನ್ನೌರ್‌ನಲ್ಲಿ 25, ಕುಲುವಿನಲ್ಲಿ 12, ಚಂಬಾದಲ್ಲಿ 7, ಕಂಗ್ರಾದಲ್ಲಿ 2, ಮಂಡಿ ಮತ್ತು ಶಿಮ್ಲಾ ಜಿಲ್ಲೆಗಳಲ್ಲಿ ತಲಾ ಒಂದು ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ. ಇದಲ್ಲದೇ ಹಲವೆಡೆ ವಿದ್ಯುತ್ ಪೂರೈಕೆಯೂ ಸ್ಥಗಿತಗೊಂಡಿದೆ. ಇದರಿಂದಾಗಿ ರಾಜ್ಯದಲ್ಲಿ ಸುಮಾರು 150 ಟ್ರಾನ್ಸ್‌ಫಾರ್ಮರ್‌ಗಳು ಮತ್ತು 10 ನೀರಿನ ಯೋಜನೆಗಳ ಕಾಮಗಾರಿಗೆ ತೊಂದರೆಯಾಗಿದೆ.

ಹಿಮಾಚಲ ಹಿಮಪಾತದಲ್ಲಿ ಸಿಕ್ಕಿಬಿದ್ದ ಪ್ರವಾಸಿಗರು
ರಾಜ್ಯದಲ್ಲಿ ಅಧಿಕ ಹಿಮಪಾತದಿಂದಾಗಿ ಪ್ರವಾಸಿಗರಲ್ಲಿ ಆತಂಕವನ್ನು ಹೆಚ್ಚಿಸಿದೆ. ವರದಿಗಳ ಪ್ರಕಾರ, NH-03 (ಮನಾಲಿ-ಲೇಹ್ ರಾಷ್ಟ್ರೀಯ ಹೆದ್ದಾರಿ), ಕಾಜಾ ರಸ್ತೆ (NH-505) ಮುಚ್ಚಲಾಗಿದೆ. ತಿಂಡಿ ಬಳಿ ಹಿಮಕುಸಿತದ ನಂತರ ಪಾಂಗಿ-ಕಿಲ್ಲರ್ ರಾಜ್ಯ ಹೆದ್ದಾರಿ (SH-26) ಅನ್ನು ಸಹ ಮುಚ್ಚಲಾಗಿದೆ. ಇದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಆದರೆ, ಮಾರ್ಗದ ಅಡೆತಡೆ ತೆರವು ಕಾರ್ಯ ನಡೆಯುತ್ತಿದ್ದರೆ ಭಾರೀ ಹಿಮಪಾತ ವಾಹನ ಸಂಚಾರ ಸುಗಮಗೊಳಿಸಲು ಅಡ್ಡಿಯನ್ನುಂಟು ಮಾಡುತ್ತಿದೆ. ಹೀಗಾಗಿ ಕೆಲ ಮಾರ್ಗಗಳಲ್ಲಿ ಸಂಚಾರ ಮಾಡದಂತೆ ಸೂಚಿಸಲಾಗಿದೆ. ಹವಾಮಾನದ ದೃಷ್ಟಿಯಿಂದ ಮಲೆನಾಡಿನ ಪಕ್ಕದಲ್ಲಿರುವ ಜೇನುಗೂಡಿಗೆ ಹೋಗದಂತೆ ಸೂಚಿಸಲಾಗಿದೆ.

ಎಲ್ಲಿ ಎಷ್ಟು ಮಳೆ?
ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಡಬಿಡದೆ ಮಳೆಯಾಗುತ್ತಿದೆ. ಮನಾಲಿಯಲ್ಲಿ 36 ಮಿಮೀ, ಸಿಯೋಬಾಗ್‌ನಲ್ಲಿ 17 ಮಿಮೀ, ಭುಂತರ್‌ನಲ್ಲಿ 15 ಮಿಮೀ, ರೆಕಾಂಗ್ ಪಿಯೋ ಮತ್ತು ಸರಹನ್‌ನಲ್ಲಿ 13 ಮಿಮೀ, ಚಂಬಾ 10 ಮಿಮೀ, ಬಾಜುರಾ 7 ಮಿಮೀ, ರಾಂಪುರ 6 ಮಿಮೀ, ಜಾಂಝೇಲಿ ಮತ್ತು ರೋಹ್ರು ತಲಾ 4 ಮಿಮೀ ಮಳೆ ದಾಖಲಾಗಿದೆ. ಆದರೆ ಇತರ ಪ್ರದೇಶಗಳಲ್ಲಿ ಕಡಿಮೆ ಮಳೆಯಾಗಿದೆ.

ಹಿಮಾಚಲದಲ್ಲಿ ಹಿಮಪಾತ
ಮಳೆ ಮತ್ತು ಹಿಮಪಾತದ ನಡುವೆ, ಹಿಮಾಚಲದ ಹಲವು ಪ್ರದೇಶಗಳಲ್ಲಿ ತಾಪಮಾನ ಭಾರೀ ಕುಸಿಯುತ್ತಿದೆ. ಇಡೀ ರಾಜ್ಯದಲ್ಲಿ ಚಳಿಯ ಅಬ್ಬರ ಕಂಡು ಬರುತ್ತಿದೆ. ಹವಾಮಾನ ಇಲಾಖೆ ಪ್ರಕಾರ ಮುಂದಿನ ನಾಲ್ಕು ದಿನಗಳ ಕಾಲ ಹಿಮಾಚಲದ ಹವಾಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಹಿಮಾಚಲದ ಕೀಲಾಂಗ್ ಕಳೆದ ರಾತ್ರಿಯಲ್ಲಿ ಅತ್ಯಂತ ಚಳಿಯನ್ನು ದಾಖಲಿಸಿತ್ತು. ಇಲ್ಲಿ ಕನಿಷ್ಠ ತಾಪಮಾನ ಮೈನಸ್ -4.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.












Click it and Unblock the Notifications