ಸೋಮವಾರದ ಪ್ರಮುಖ ಘಟನೆಗಳ ಚಿತ್ರ ಸಹಿತ ಸುದ್ದಿ
ಬೆಂಗಳೂರು,
ಫೆ. 9: ದೇಶ ಹಾಗೂ ವಿದೇಶದಲ್ಲಿ ಸೋಮವಾರ ನಡೆಯುತ್ತಿರುವ ಹಲವು ಘಟನಾವಳಿಗಳ ಚಿತ್ರ ಸಹಿತ ಸಂಕ್ಷಿಪ್ತ ಸುದ್ದಿಯನ್ನು ಇಲ್ಲಿ ನೀಡಲಾಗಿದೆ. id="toptextpromo"> id='are-slot-1' class='oiad oi-axt oiadv'>ಭಾರತ
ಪ್ರವಾಸದಲ್ಲಿರುವ ಸಿಂಗಪುರ ಅಧ್ಯಕ್ಷರು ಪತ್ನಿ ಸಮೇತ ರಾಜ್‌ಘಾಟ್‌ನಲ್ಲಿರುವ ಮಹಾತ್ಮಾ ಗಾಂಧಿ ಸಮಾಧಿಗೆ ನಮಿಸಿದರು. ಲಂಡನ್‌ನ ರಾಯಲ್ ಒಪೆರಾ ಹೌಸ್‌ನಲ್ಲಿ ನಡೆದ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಆ್ಯಂಡ್ ಟೆಲಿವಿಶನ್ ಪ್ರಶಸ್ತಿ ವಿತರಿಸಲಾಯಿತು. ಬರಾಕ್ ಒಬಾಮ ವಿರುದ್ಧ ಬೆಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸ್ವಿಟ್ಜರ್ಲೆಂಡ್‌ನ ಸೇಂಟ್ ಮಾರಿಷಸ್‌ನಲ್ಲಿ ಮಂಜುಗಡ್ಡೆಯಾಗಿರುವ ಸರೋವರ ಸೇಂಟ್ ಮೊರಿಟ್ಜ್ ಮೇಲೆ ಕುದುರೆ ರೇಸ್ ನಡೆಯಿತು. ಇನ್ನಷ್ಟು ಸುದ್ದಿಗಳನ್ನು ಚಿತ್ರ ಸಹಿತ ನೀಡಲಾಗಿದೆ. id='are-slot-2' class='oiad oi-axt oiadv'>
ಒಬಾಮ ವಿರುದ್ಧ ಪ್ರತಿಭಟನೆ
ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ವಿರುದ್ಧ ಹಿಂದೂ ಪರ ಕಾರ್ಯಕರ್ತರು ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಸ್ವಾಗತ
ಸಿಂಗಪುರದ ಅಧ್ಯಕ್ಷ ಟೋನಿ ಟಾನ್ ಕೆಂಗ್ ಯಾಮ್ ತಮ್ಮ ಪತ್ನಿ ಮೇರಿ ಛೀ ಬೀ ಕಿಯಾಂಗ್ ಅವರನ್ನು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು.

ಗಾಂಧಿಗೆ ನಮನ
ಸಿಂಗಪುರದ ಅಧ್ಯಕ್ಷ ಟೋನಿ ಟಾನ್ ಕೆಂಗ್ ತಮ್ಮ ಪತ್ನಿ ಮೇರಿ ಛೀ ಬೀ ಕಿಯಾಂಗ್ ಜೊತೆ ರಾಜಘಾಟ್‌ನಲ್ಲಿರುವ ಮಹಾತ್ಮಾ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು.

ಗಾರ್ಡ್ ಆಫ್ ಹಾನರ್
ಭಾರತ ಪ್ರವಾಸಕ್ಕೆ ಬಂದಿರುವ ಸಿಂಗಪುರದ ಅಧ್ಯಕ್ಷ ಟೋನಿ ಟಾನ್ ಕೆಂಗ್ ಯಾಮ್ ಅವರಿಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಗಾರ್ಡ್ ಆಫ್ ಹಾನರ್ ನೀಡಲಾಯಿತು.

ಪ್ರಶಸ್ತಿಯ ಸಂಭ್ರಮ
ಲಂಡನ್‌ನ ರಾಯಲ್ ಒಪೆರಾ ಹೌಸ್‌ನಲ್ಲಿ ನಡೆದ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಆ್ಯಂಡ್ ಟೆಲಿವಿಶನ್ ಅವಾರ್ಡ್ಸ್ 2015 ವಿಜೇತರು ವೇದಿಕೆಯಲ್ಲಿ ಸಂಭ್ರಮದಿಂದ ಕಂಡುಬಂದಿದ್ದು ಹೀಗೆ.

ಮಂಜುಗಡ್ಡೆ ಮೇಲೆ ಕುದುರೆ ರೇಸ್
ಸ್ವಿಟ್ಜರ್ಲೆಂಡ್‌ನ ಸೇಂಟ್ ಮಾರಿಷಸ್‌ನಲ್ಲಿ ಮಂಜುಗಡ್ಡೆಯಾಗಿರುವ ಸರೋವರ ಸೇಂಟ್ ಮೊರಿಟ್ಜ್ ಮೇಲೆ ಕುದುರೆ ರೇಸ್ ನಡೆಯಿತು.












Click it and Unblock the Notifications