ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ದಿನದಲ್ಲಿ ಪಾಸ್ ಪೋರ್ಟ್ ಪಡೆಯುವುದು ಹೇಗೆ?

|
Google Oneindia Kannada News

ಬೆಂಗಳೂರು, ಫೆ. 23 : ಆಧಾರ್ ಕಾರ್ಡ್ ಹೊಂದಿರುವವರಿಗೆ ಮತ್ತೊಂದು ಶುಭ ಸುದ್ದಿ ಇದೆ. ಕೇವಲ 10 ದಿನಗಳಲ್ಲಿ ಆಧಾರ್ ಕಾರ್ಡ್ ಹೊಂದಿರುವವರು ಪಾಸ್ ಪೋರ್ಟ್ ಪಡೆಯಬಹುದು.

ಪಾಸ್ ಪೋರ್ಟ್ ನೀಡಿಕೆ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಧಾರ್ ಕಾರ್ಡ್ ನೀಡಿದರೆ ಕೇವಲ 10 ದಿನದಲ್ಲಿ ಪಾಸ್ ಪೋರ್ಟ್ ಪ್ರಕ್ರಿಯೆ ಪೂರ್ಣಮಾಡಬಹುದು ಎಂದು ಹೇಳಿದೆ.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

passport

ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಯ ಆಧಾರ್ ಕಾರ್ಡ್ ಇಟ್ಟುಕೊಂಡು ಅಪರಾಧ ಹಿನ್ನಲೆಯನ್ನು ಲೆಕ್ಕ ಹಾಕಬಹುದು. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಗೆ ಆತನ ಅಥವಾ ಅವಳ ಬೆರಳಚ್ಚು ಸೇರಿದಂತೆ ಎಲ್ಲ ಮಾಹಿತಿ ಆಧಾರ್ ಕಾರ್ಡ್ ನಲ್ಲಿ ಲಭ್ಯವಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಅಭ್ಯರ್ಥಿಯ ಸ್ವಯಂ ಘೋಷಣೆಯನ್ನು ಅಂದರೆ ನಾಗರಿಕತ್ವ, ಅಪರಾಧ ಪ್ರಕರಣ, ವಾರೆಂಟ್, ಸಮನ್ಸ್ ಮುಂತಾದವುಗಳನ್ನು ಆಧಾರವಾಗಿಟ್ಟುಕೊಳ್ಳಲಾಗುತ್ತದೆ. ಅಲ್ಲದೇ ಪೊಲೀಸ್ ಇಲಾಖೆ ಸಹ ಪರಿಶೀಲನೆ ನಡೆಸಿ ವರದಿ ನೀಡಬೇಕಾಗುತ್ತದೆ. ಆದರೆ ತತ್ಕಾಲ ಸೇವೆಯಡಿ ಸರ್ಕಾರ ಹೊಸದಾಗಿ ಪಾಸ್ ಪೋರ್ಟ್ ನೀಡಿಕೆ ಮಾಡುತ್ತಿದ್ದು ವಿತರಣೆ ನಂತರ ಪೊಲೀಸ್ ಪರಿಶೀಲನೆ ಮಾಡುವಂತೆ ತಿಳಿಸುತ್ತದೆ.[ಪಾಸ್ ಪೋರ್ಟ್ ಪಡೆಯಲು ಆಧಾರ್ ಕಡ್ಡಾಯ?]

ಆದರೆ ಹೊಸ ವಿಧಾನ ಸಂಪೂರ್ಣ ಭಿನ್ನವಾಗಿದ್ದು ಅಭ್ಯರ್ಥಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವಿಳಾಸ ದಾಖಲೆಯೊಂದಿಗೆ ಆಧಾರ್ ಕಾರ್ಡ್ ಪ್ರತಿ ದಾಖಲಿಸಬೇಕು. ಅರ್ಜಿ ಸಲ್ಲಿಸಿ 3 ದಿನಗಳೊಳಗಾಗಿ ಅಭ್ಯರ್ಥಿಗೆ ಸಚಿವಾಲಯದೊಂದಿಗೆ ಮಾತನಾಡಲು ಅವಕಾಶ ದೊರೆಯುತ್ತದೆ. ಉಳಿದ 7 ದಿನಗಳಲ್ಲಿ ಪಾಸ್ ಪೋರ್ಟ್ ಕೈ ಸೇರುತ್ತದೆ.

ಪ್ರಧಾನಿ ನರೇಂದ್ರ ಮೋದಿ ನಿರ್ದೇಶನದಂತೆ ಗೃಹ ಮತ್ತು ವಿದೇಶಾಂಗ ಕಾರ್ಯಗಳ ಸಚಿವಾಲಯ ಪಾಸ್ ಪೋರ್ಟ್ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡುವ ತೀರ್ಮಾನಕ್ಕೆ ಬಂದಿದೆ. ಈ ಬಗ್ಗೆ ಯುಐಡಿಎಐ ಜತೆಗೂ ಮಾತುತೆ ನಡೆಸಲಾಗಿದೆ. ಒಂದು ವೇಳೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಯ ಬಳಿ ಆಧಾರ್ ಕಾರ್ಡ್ ಇಲ್ಲದಿದ್ದರೆ ಆಧಾರ್ ಎನ್ ರೊಲ್ ಮೆಂಟ್ ನಂಬರ್ ನೀಡಬಹುದು.[ಏನಿದು ಇ ಪಾಸ್ ಪೋರ್ಟ್? ಏನು ಪ್ರಯೋಜನ?]

ಅಭ್ಯರ್ಥಿ ತಪ್ಪು ವಿಳಾಸ ಮತ್ತು ಮಾಹಿತಿ ನೀಡಿದ್ದರೂ ಇಲ್ಲಿ ಗೊತ್ತಾಗುತ್ತದೆ. ಈ ಕ್ರಮ ಸಮರ್ಪಕ ಜಾರಿಯಾದರೆ ಪಾಸ್ ಪೋರ್ಟ್ ನೀಡಿಕೆ ಮತ್ತಷ್ಟು ಸುಲಭವಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

English summary
Good news, for owners of Aadhaar card only!. If you have Aadhaar you can now get your passport in just 10 days, skipping the time-consuming police verification process, which will be done later.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X