400 ಕೋಟಿ ರೂ. ವನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಿಸಿದ್ದಾರಾ ಮಲ್ಯ?
ಮದ್ಯದ ದೊರೆ ವಿಜಯ ಮಲ್ಯ ಬ್ಯಾಂಕಿನಿಂದ ತೆಗೆದುಕೊಂಡಿದ್ದ 900 ಕೋಟಿ ರೂ. ಸಾಲದಲ್ಲಿ 400 ಕೋಟಿ ರೂ.ಗಳನ್ನು ಅಕ್ರಮವಾಗಿ ವಿದೇಶಕ್ಕೆ ರವಾನಿಸಿಟ್ಟಿದ್ದಾರಾ? ತನಿಖೆಯೊಂದರ ಪ್ರಕಾರ ಈ ಸುದ್ದಿ ನಿಜ! ಐಡಿಬಿಐ ಬ್ಯಾಂಕ್ ಲಿ.ನಿಂದ ಮಲ್ಯ ತೆಗೆದುಕೊಂಡಿದ್ದ 900 ಕೋಟಿ ರೂ.ಗಳಲ್ಲಿ ಅವರು ಉಪಾಯವಾಗಿ, 400 ಕೋಟಿ ರೂ.ಗಳನ್ನು ವಿದೇಶಕ್ಕೆ ರವಾನಿಸಿಟ್ಟಿದ್ದರು!
ಏರ್ ಕ್ರಾಫ್ಟ್ ರೆಂಟಿಂಗ್, ಲೀಸಿಂಗ್ ನೆಪದಲ್ಲಿ ವಿದೇಶಕ್ಕೆ ಹಣ ರವಾನಿಸಿದ್ದ ಮಲ್ಯ, ಬ್ಯಾಂಕ್ ಯಾವುದಕ್ಕಾಗಿ ಸಾಲ ನೀಡಿತ್ತೊ, ಆ ಉದ್ದೇಶಕ್ಕಾಗಿ ಹಣವನ್ನು ಉಪಯೋಗಿಸಿಲ್ಲ ಎಂಬುದು ತನಿಖೆಯ ಮೂಲಕ ತಿಳಿದುಬಂದಿದೆ.

ಎಸ್ ಬಿಐ, ಪಂಜಾಬ್ ನ್ಯಾಶನಲ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ ಗಳಿಗೆ ಕಿಂಗ್ ಫಿಶರ್ ಕಂಪೆನಿಯ ಕಡೆಯಿಂದ 9000 ಕೋಟಿ ರೂ. ಸಂದಾಯವಾಗಬೇಕಿದೆ! ಇಷ್ಟು ಬೃಹತ್ ಮೊತ್ತದ ಸಾಲವನ್ನು ಹೊತ್ತು, ಸದ್ಯಕ್ಕೆ ವಿದೇಶದಲ್ಲಿ ತಂಗಿರುವ ಮಲ್ಯ ಅವರನ್ನು ಭಾರತಕ್ಕೆ ಕರೆತರುವ ಕುರಿತು ಭಾರತೀಯ ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ.












Click it and Unblock the Notifications