Haryana Assembly Election 2024: ಅ.8ರಂದು ಚುನಾವಣೆ ಫಲಿತಾಂಶ ತಿಳಿಯಲು ಹೀಗೆ ಮಾಡಿ
ನವದೆಹಲಿ, ಸೆಪ್ಟಂಬರ್ 24: ಹರಿಯಾಣ ಸೇರಿದಂತೆ ನಾಲ್ಕು ರಾಜ್ಯಗಳ ವಿಧಾನಸಭೆಗೆ ಚುಣಾವಣೆಗೆ ಘೋಷಣೆ ಆಗಿದೆ.ಅಕ್ಟೋಬರ್ 5 ರಂದು ಹರಿಯಾಣ ರಾಜ್ಯದಲ್ಲಿ ಒಂದೇ ಹಂತದಲ್ಲಿ ಎಲ್ಲ 90 ಕ್ಷೇತ್ರಗಳಿಗೆ ಮತದಾನ ಜರುಗಲಿದೆ. ಅಕ್ಟೋಬರ್ 08ರಂದು ಈ ಎಲ್ಲ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳ ಹಣಬರಹ ಗೊತ್ತಾಗಲಿದೆ. ಹಾಗಾದರೆ ನೀವು ಹೇಗೆ ಈ ರಾಜ್ಯಗಳ ಫಲಿತಾಂಶ, ಇನ್ನಿತರ ಮಾಹಿತಿ ತಿಳಿಯಬೇಕು? ಅದಕ್ಕೆ ಉತ್ತರ ಇಲ್ಲಿದೆ.
ಹರಿಯಾಣದಲ್ಲಿ 90 ಕ್ಷೇತ್ರಗಳ ರಾಜಕೀಯ ಭವಿಷ್ಯ ರಾಜ್ಯದ ಮುಂದಿನ ಐದು ವರ್ಷ ಯಾವ ಪಕ್ಷ ಆಡಳಿತ ನೀಡಲಿದೆ ಎಂದು ಚುನಾವಣೆಯ ಫಲಿತಾಂಶ ದಿನ ಅಕ್ಟೋಬರ್ 8ಕ್ಕೆ ತಿಳಿಯಲಿದೆ. ಅಂದೇ ಜಮ್ಮು ಕಾಶ್ಮೀರ, ಜಾರ್ಖಂಡ, ಮಹಾರಾಷ್ಟ್ರ ಹಾಗೂ ಹರಿಯಾಣದ ಫಲಿತಾಂಶ ಪ್ರಕಟವಾಗಲಿದೆ.

ನಿಮ್ಮ ಕ್ಷೇತ್ರದ ಫಲಿತಾಂಶ ಪರಿಶೀಲಿಸುವುದು ಹೇಗೆ?
* ಕೇಂದ್ರ ಚುನಾವಣಾ ಆಯೋಗದ (ಇಸಿಐ) ಅಧಿಕೃತ ವೆಬ್‌ಸೈಟ್‌ಗೆ https://www.eci.gov.in/ ನೀವು ಮೊದಲು ಭೇಟಿ ನೀಡಬೇಕು.
* ಬಳಿಕ ವೆಬ್‌ಸೈಟ್‌ನಲ್ಲಿ ನಿಮಗೆ ಕಾಣುವ ಹರಿಯಾಣ ಸೇರಿ ನಾಲ್ಕು ರಾಜ್ಯಗಳ ವಿಭಾಗಗಳಲ್ಲಿ ನಿಮ್ಮ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು
* ನಂತರ ವಿಧಾನಸಭಾ ಚುನಾವಣಾ ಫಲಿತಾಂಶಗಳ ಮೇಲೆ ಕ್ಲಿಕ್ ಮಾಡಬೇಕು.
* ಇದಾದ ಬಳಿಕ ತೆರೆ ಮೇಲೆ ಕಾಣುವ ನಿಗದಿತ ಕಾಲಂ ನಲ್ಲಿ ನಿಮ್ಮ ವಿಧಾನಸಭಾ ಕ್ಷೇತ್ರ ಯಾವುದು ಎಂದು ಆಯ್ಕೆ ಮಾಡಿಕೊಳ್ಳಬೇಕು.
* ಅಕ್ಟೋಬರ್ 08ರಂದು ನೀವು ಬೆಳಗ್ಗೆ ಈ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಫಲಿತಾಂಶವು ಕ್ರಮೇಣವಾಗಿ ಇಲ್ಲಿ ಅಪ್ಲೋಡ್ ಆಗುತ್ತಿರುತ್ತದೆ
* ವಿಧಾನಸಭಾ ಕ್ಷೇತ್ರ, ಅಭ್ಯರ್ಥಿ, ಪಕ್ಷ, ಪಡೆದ ಮತಗಳು ಫಲಿತಾಂಶಗಳ, ಸುತ್ತುಗಳ ಎಣಿಕೆ ಅಪ್ಲೋಡ್ ಆಗುತ್ತದೆ. ನೀವು ರಿಫ್ರೆಶ್ ಮಾಡಿಕೊಂಡು ನೋಡಬೇಕಿದೆ.
51 ಮಂದಿ ಮಹಿಳಾ ಅಭ್ಯರ್ಥಿಗಳು ಕಣದಲ್ಲಿ
ಹರಿಯಾಣದಲ್ಲಿ ಹರಿಯಾಣದಲ್ಲಿ ಇದುವರೆಗೆ ಒಟ್ಟು 87ಮಂದಿ ಮಹಿಳೆಯರು ಮಾತ್ರವೇ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. ಈ ಬಾರಿ 51 ಮಂದಿ ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ ಒಲಂಪಿಕ್ ಕುಸ್ತಿಪಟು ವಿನೇಶ್ ಪೂಗಟ್ ಅವರು ಇದ್ದಾರೆ. ಜೊತೆಗೆ ದೇಶದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರು ಒಳಗೊಂಡಂತೆ ಹಲವು ಮಹಿಳೆಯರು ವಿವಿಧ ಕ್ಷೇತ್ರಗಳ ಟಿಕೆಟ್ ಪಡೆದಿದ್ದಾರೆ. ಕೆಲವರು ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದಾರೆ.
ವಿವಿಧ ಪಕ್ಷಗಳಿಂದ ಮಹಿಳಾ ಅಭ್ಯರ್ಥಿಗಳು ಕಣಕ್ಕೆ
ಪುರುಷ ಪ್ರಧಾನ ರಾಜಕೀಯದಲ್ಲಿ ಮಹಿಳೆಯರು ಅದರಲ್ಲೂ ಹರಿಯಾಣದಲ್ಲಿ ಈವರೆಗೆ ಒಬ್ಬೆ ಒಬ್ಬರು ಮಹಿಳೆ ಸಿಎಂ ಆಗಿಲ್ಲ. ಈ ಬಾರಿ ಅದಕ್ಕೆ ಅವಕಾಶ ಇದಿಯಾ ಎಂಬ ಕಾತರ ಜನರಲ್ಲಿದೆ. ಇನ್ನೂ ಕಾಂಗ್ರೆಸ್ ಪಕ್ಷ ಈ ಬಾರಿ ಹೆಚ್ಚಿನ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ, ಎಎಪಿ, ಬಿಎಸ್‌ಪಿ ಪಕ್ಷಗಳು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ.
ಚುನಾವಣೆ ನಿಮಿತ್ತ ಹರಿಯಾಣಕ್ಕೆ ಸಮೀಪವಿರುವ ಉತ್ತರ ಪ್ರದೇಶದ ಗಡಿಯಲ್ಲಿ ಮೂರು ದಿನ ಮದ್ಯದಂಗಡಿಗಳನ್ನು ಮುಚ್ಚಲು ತೀರ್ಮಾನಿಸಲಾಗಿದೆ. ಮತದಾನ ದಿನ 48 ಮೊದಲೇ ಇಲ್ಲಿನ ಮದ್ಯದ ಅಂಗಡಿ, ಬಾರ್‌ಗಳು ಬಂದಾಗಿರಲಿವೆ.












Click it and Unblock the Notifications