ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣ ಕೈಗಾರಿಕೆಗಳಿಗೆ ಸಾಲ; ಮರುಪಾವತಿಗೆ 4 ವರ್ಷ ಅವಕಾಶ

|
Google Oneindia Kannada News

ನವದೆಹಲಿ, ಮೇ 13 : "ಲಾಕ್ ಡೌನ್ ಅವಧಿಯಲ್ಲಿ ಆರ್ಥಿಕ ನಷ್ಟವಾಗಿದೆ ಎಂದು ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಚಿಂತಿಸುವುದು ಬೇಡ. ಈಗ ಎಂಎಸ್‌ಎಂಇಯ ವ್ಯಾಖ್ಯಾನವೇ ಬದಲಾಗಿದೆ" ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

Recommended Video

20 ಲಕ್ಷ ಕೋಟಿಯಲ್ಲಿ ಯಾರಿಗೆ ಎಷ್ಟು ಎಂದು ವಿವರಿಸಿದ ನಿರ್ಮಲ ಸೀತಾರಾಮನ್ | Nirmala Sitharaman

ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ನಿರ್ಮಲಾ ಸೀತಾರಾಮನ್ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನ ವಿವರಗಳನ್ನು ನೀಡಿದರು. ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ. ಸಾಲ ನೀಡುವುದಾಗಿ ಘೋಷಣೆ ಮಾಡಿದರು.

ಕುಸಿದ ವಾಹನ ಉದ್ಯಮ ಚೇತರಿಕೆಗೆ ನಿರ್ಮಲಾ ಸೀತಾರಾಮನ್ ಮದ್ದುಕುಸಿದ ವಾಹನ ಉದ್ಯಮ ಚೇತರಿಕೆಗೆ ನಿರ್ಮಲಾ ಸೀತಾರಾಮನ್ ಮದ್ದು

"ಅಕ್ಟೋಬರ್ 31ರ ತನಕ ಸಣ್ಣ, ಮಧ್ಯಮ ಕೈಗಾರಿಕೆಗಳು ಸಾಲವನ್ನು ಪಡೆಯಬಹುದಾಗಿದೆ. ಬ್ಯಾಂಕ್‌ಗಳು ನೀಡುವ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ ನೀಡಲಿದೆ. ಈ ತೀರ್ಮಾನದಿಂದ ಸುಮಾರು 45 ಲಕ್ಷ ಸಣ್ಣ ಕೈಗಾರಿಕೆಗಳಿಗೆ ಲಾಭವಾಗಲಿದೆ" ಎಂದು ಹಣಕಾಸು ಸಚಿವರು ವಿವರಿಸಿದರು.

ಸಾಲದ ಸುಳಿ: ಕನ್ನಡಿಗರು ಉದ್ಯಮ ಕಟ್ಟಲು ಹೆದರುತ್ತಾರೇಕೆ? ಸಾಲದ ಸುಳಿ: ಕನ್ನಡಿಗರು ಉದ್ಯಮ ಕಟ್ಟಲು ಹೆದರುತ್ತಾರೇಕೆ?

 Govt Announces Rs 3 Lakh Crore Loans For Small Businesses

"25 ರಿಂದ 100 ಕೋಟಿ ವ್ಯವಹಾರ ಇರುವ ಕೈಗಾರಿಕೆಗಳಿಗೆ ಇದರಿಂದ ಅನುಕೂಲವಾಗಲಿದೆ. ಅಲ್ಲದೇ ಪಡೆದ ಸಾಲವನ್ನು ಮರುಪಾವತಿ ಮಾಡಲು 4 ವರ್ಷದ ತನಕ ಕಾಲಾವಕಾಶವನ್ನು ನೀಡಲಾಗುತ್ತದೆ" ಎಂದು ಸಚಿವರು ತಿಳಿಸಿದರು.

ಉದ್ಯಮ ಸ್ನೇಹಿ ಸೂಚ್ಯಂಕದಲ್ಲಿ 23 ಸ್ಥಾನಗಳ ಜಿಗಿತ ಕಂಡ ಭಾರತಉದ್ಯಮ ಸ್ನೇಹಿ ಸೂಚ್ಯಂಕದಲ್ಲಿ 23 ಸ್ಥಾನಗಳ ಜಿಗಿತ ಕಂಡ ಭಾರತ

"ಸಾಲವನ್ನು ಪಡೆದ ಸಣ್ಣ ಕೈಗಾರಿಕೆಗಳು ಮೊದಲ 12 ತಿಂಗಳು ಸಾಲವನ್ನು ಮರುಪಾವತಿ ಮಾಡುವ ಅಗತ್ಯವಿಲ್ಲ. ಸಣ್ಣ ಕೈಗಾರಿಕೆಗಳಿಗೆ ಸಂಬಳ ಪಾವತಿಗೆ ಹಣ ಅವಶ್ಯಕತೆ ಇದ್ದರೆ ಸಾಲ ನೀಡಲಾಗುತ್ತದೆ" ಎಂದು ಸಚಿವರು ಹೇಳಿದರು.

"ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದಂತೆ ಭಾರತ ಸ್ವಾವಲಂಬಿಯಾಗಲು ಉಪಕ್ರಮಗಳು ನೆರವು ನೀಡಲಿವೆ. ಸ್ಥಳೀಯ ಬ್ರಾಂಡ್‌ ಅನ್ನು ಜಾಗತಿಕವಾಗಿ ಬೆಳೆಸುತ್ತೇವೆ. ಪ್ರಧಾನಿಗಳು ಹೇಳಿದಂತೆ ದೇಶ ಕಟ್ಟಲು ಇವೆಲ್ಲಾ ಸಹಕಾರಿಯಾಗಲಿವೆ" ಎಂದರು.

English summary
Finance Minister Nirmala Sitharaman announced that businesses including MSMEs and SMEs will get a Rs 3 lakh crore collateral-free automatic loans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X