ವೆಂಕಯ್ಯ, ಸ್ಮಾರ್ಟ್ ಸಿಟಿಗಳು ಇನ್ನೂ ಬೇಕಯ್ಯ!

Posted By:
Subscribe to Oneindia Kannada

ನವದೆಹಲಿ, ಮೇ 24: ಸ್ಮಾರ್ಟ್ ಸಿಟಿ ಆಯ್ಕೆಗಾಗಿ ನಡೆಸಲಾದ 'ಫಾಸ್ಟ್ ಟ್ರ್ಯಾಕ್ ಸ್ಮಾರ್ಟ್ ಸಿಟಿ' ಸ್ಪರ್ಧೆ ವಿಜೇತ 13 ನಗರಗಳ ಪಟ್ಟಿಯನ್ನು ಕೇಂದ್ರ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಎಂ. ವೆಂಕಯ್ಯನಾಯ್ಡು ಅವರು ಮಂಗಳವಾರ ಪ್ರಕಟಿಸಿದ್ದಾರೆ. ಪಟ್ಟಿಯಲ್ಲಿ ಲಕ್ನೋ ಮೊದಲ ಸ್ಥಾನದಲ್ಲಿದೆ.

ಜನವರಿ 28ರಂದು ಮೊದಲ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆದರೆ, ಬಿಜೆಪಿಯೇತರ ರಾಜ್ಯಗಳ ನಗರಗಳಿಗೆ ಹೆಚ್ಚಿನ ಆದ್ಯತೆ ಸಿಕ್ಕಿಲ್ಲ ಎಂಬ ಆಕ್ಷೇಪ ಕೇಳಿ ಬಂದಿತ್ತು. ಹೀಗಾಗಿ 'ಫಾಸ್ಟ್ ಟ್ರ್ಯಾಕ್ ಸ್ಮಾರ್ಟ್ ಸಿಟಿ' ಸ್ಪರ್ಧೆ ಏರ್ಪಡಿಸಲಾಗಿತ್ತು. ಆಯಾ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ನಗರಗಳನ್ನು ಆಯ್ಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಕಳಿಸಿದ ನಂತರ, ಸ್ಪರ್ಧೆ ನಡೆಸಿ ಅಂತಿಮವಾಗಿ ಸ್ಮಾರ್ಟ್ ಸಿಟಿ ಹೆಸರುಗಳನ್ನು ಪ್ರಕಟಿಸಲಾಗುತ್ತದೆ.[20 ಸ್ಮಾರ್ಟ್ ಸಿಟಿಗಳ ಮೊದಲ ಪಟ್ಟಿಯಲ್ಲಿ ದಾವಣಗೆರೆ, ಬೆಳಗಾವಿ]

Govt announces 13 winners of Fast track Smart City competition; Lucknow tops list

ಒಟ್ಟು 98 ನಗರಗಳನ್ನು ಸ್ಮಾರ್ಟ್ ಸಿಟಿ ದರ್ಜೆಗೇರಿಸಲು ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಯೋಜನೆ ಹಾಕಿಕೊಂಡಿದೆ. ಈಗ ಆಯ್ಕೆಯಾಗಿರುವ ಮೊದಲ ಪಟ್ಟಿಯಲ್ಲಿ 20 ನಗರಗಳು ಆಯ್ಕೆ ಮಾಡಲಾಗಿತ್ತು. ಮುಂದಿನ ಎರಡು ವರ್ಷಗಳಲ್ಲಿ ಇನ್ನು 40 ಹಾಗೂ 38 ನಗರಗಳನ್ನು ಆಯ್ಕೆ ಮಾಡಿ ಪ್ರಕಟಿಸಲಾಗುತ್ತದೆ.[ಸ್ಮಾರ್ಟ್ ಸಿಟಿಯಾಗಲಿರುವ 98 ನಗರಗಳ ಪಟ್ಟಿ]

ಒಟ್ಟಾರೆ 3ಲಕ್ಷ ಕೋಟಿ ರು ಅನುದಾನ ಈ ಮಹತ್ವದ ಯೋಜನೆಗೆ ಸಿಗಲಿದೆ. ಐದು ವರ್ಷದ ಅವಧಿಗೆ ಪ್ರತಿ ಸ್ಮಾರ್ಟ್ ಸಿಟಿಗೆ ಕೇಂದ್ರದಿಂದ 500 ಕೋಟಿ ರು ಅನುದಾನ ಸಿಗಲಿದೆ. [ಸ್ಮಾರ್ಟ್ ಸಿಟಿಗೆ ಕನ್ನಡದ ಹೆಸರು ಸಮರ್ಥ ನಗರ]

ಈ ಬಾರಿ ಆಯ್ಕೆಯಾದ 13 ನಗರಗಳು:
1. ಲಕ್ನೋ
2. ವಾರಂಗಲ್
3. ಧರ್ಮಶಾಲ
4. ಚಂದೀಗಢ
5. ರಾಯ್ ಪುರ್
6. ನ್ಯೂಟೌನ್ ಕೋಲ್ಕತ್ತಾ
7. ಭಗಲ್ ಪುರ್
8. ಪಣಜಿ
9. ಪೋರ್ಟ್ ಬ್ಲೇರ್
10. ಇಂಫಾಲ್
11. ರಾಂಚಿ
12. ಅಗರ್ತಲ
13 ಫರೀದಾಬಾದ್

ಸ್ಮಾರ್ಟ್ ಸಿಟಿ : ಡಿಜಿಟಲ್ ಮತ್ತು ಮಾಹಿತಿ ತಂತ್ರಜ್ಞಾನ(ಐಸಿಟಿ) ವನ್ನು ಬಳಸಿಕೊಂಡು ನಗರದ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವುದು. ನೀರು, ವಿದ್ಯುತ್ ಪೂರೈಕೆ, ಒಳಚರಂಡಿ ವ್ಯವಸ್ಥೆ, ಘನ ತ್ಯಾಜ್ಯ ನಿರ್ವಹಣೆ, ಸಾರಿಗೆ ಸಂಪರ್ಕ, ಮಾಹಿತಿ ಮತ್ತು ತಂತ್ರಜ್ಞಾನ ಸಂಪರ್ಕ, ಇ ಆಡಳಿತ, ನಾಗರಿಕರ ಪಾಲ್ಗೊಳ್ಳುವಿಕೆ, ಸುರಕ್ಷತೆ ಹಾಗೂ ಭದ್ರತೆ ಒದಗಿಸುವುದು. ಸರ್ಕಾರದ ಸೌಲಭ್ಯಗಳು ಎಲ್ಲಾ ನಾಗರಿಕರಿಗೂ ಸುಲಭವಾಗಿ ತಲುಪಿಸುವುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union Minister Venkaiah Naidu on Tuesday announced 13 winners of Fast track Smart City competition which was topped by Lucknow. The 13 winners of Fast track Smart City competition
Please Wait while comments are loading...