ಅದಾನಿ ವಿದ್ಯಾ ಮಂದಿರದ ಮಕ್ಕಳಿಗೆ ಸ್ಫೂರ್ತಿದಾಯಕ ಸಂದೇಶ ಕೊಟ್ಟ ರಾಜ್ಯಪಾಲ ದೇವವ್ರತ್
ಅಹಮದಾಬಾದ್‌ನ ಅದಾನಿ ವಿದ್ಯಾ ಮಂದಿರ (ಎವಿಎಂ) ಕ್ಯಾಂಪಸ್‌ನಲ್ಲಿ ನಡೆದ ಚೇಂಜ್ ಮೇಕರ್ ಸರಣಿ ಸಮಾರಂಭದಲ್ಲಿ ಗುಜರಾತ್‌ನ ಗೌರವಾನ್ವಿತ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ಫೂರ್ತಿಯ ಮಾತನಾಡಿದರು. ಅದಾನಿ ಫೌಂಡೇಶನ್‌ನ ಅಧ್ಯಕ್ಷೆ ಡಾ.ಪ್ರೀತಿ ಅದಾನಿ ಮತ್ತು ಟ್ರಸ್ಟಿ ಶ್ರೀಮತಿ ಶಿಲಿನ್ ಅದಾನಿ ಅವರು ರಾಜ್ಯಪಾಲರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳು ಅವರಿಗೆ ಗಾರ್ಡ್ ಆಫ್ ಹಾನರ್ ಮತ್ತು ಸಾಂಪ್ರದಾಯಿಕ ಸಮಾರಂಭದೊಂದಿಗೆ ಮೆರುಗು ತಂದರು.
"ಚಿಕ್ಕ ವಯಸ್ಸಿನಿಂದಲೇ ಕಷ್ಟಪಟ್ಟು ದುಡಿದು, ದುರ್ಗುಣಗಳಿಂದ ಮುಕ್ತರಾಗಿ, ಮುಂದುವರಿಯಲು ನಿರ್ಧರಿಸುವ ಮಕ್ಕಳು - ಜಗತ್ತಿನ ಯಾವುದೇ ಶಕ್ತಿ ಅವರನ್ನು ತಡೆಯಲು ಸಾಧ್ಯವಿಲ್ಲ. ಅಂತಹ ಮಕ್ಕಳಿಗೆ, ಹೊಸ ಬಾಗಿಲುಗಳು ಯಾವಾಗಲೂ ತೆರೆದಿರುತ್ತವೆ" ಎಂದು ರಾಜ್ಯಪಾಲರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಪ್ರಯತ್ನ ಮತ್ತು ಸಮಗ್ರತೆಯನ್ನು ಆಯ್ಕೆ ಮಾಡುವವರಿಗೆ ಸವಾಲಿನ ಹಿನ್ನೆಲೆಯಿಂದ ಬರುವುದು ಎಂದಿಗೂ ಅಡ್ಡಿಯಾಗುವುದಿಲ್ಲ. ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಮತ್ತು ಭಾರತದ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರಂತಹ ಮಹಾನ್ ನಾಯಕರ ಜೀವನ ಪ್ರಯಾಣಗಳು ಇಂದಿಗೂ ವಿಶ್ವದಲ್ಲಿ ಕಷ್ಟಗಳನ್ನು ಮೀರಿ ಬೆಳೆದ ವ್ಯಕ್ತಿಗಳ ಪ್ರಮುಖ ಉದಾಹರಣೆಗಳು ಎಂದು ಉಲ್ಲೇಖಿಸಿದರು.

ಮಕ್ಕಳು ಸರಳತೆ ಮತ್ತು ಜವಾಬ್ದಾರಿಯಿಂದ ಬದುಕುವಂತೆ ರಾಜ್ಯಪಾಲರು ಕಿವಿಮಾತು ಹೇಳಿದರು. ಆರೋಗ್ಯಕರವಾಗಿ ತಿನ್ನಲು, ಪ್ರಾಮಾಣಿಕವಾಗಿರಲು ಮತ್ತು ಅನುಮಾನ, ಅವಮಾನ ಅಥವಾ ಭಯವನ್ನು ತರುವ ಆಯ್ಕೆಗಳನ್ನು ತಪ್ಪಿಸಬೇಕು ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು. ಎವಿಎಂನ ಉಚಿತ, ಮೌಲ್ಯಾಧಾರಿತ ಶಿಕ್ಷಣದ ವಿಶಿಷ್ಟ ಮಾದರಿಯನ್ನು ಶ್ಲಾಘಿಸಿದ ಆಚಾರ್ಯ ದೇವವ್ರತ್, ಐಐಟಿ ಹಾಗೂ ಐಐಎಂ, ಎಐಐಎಂಗಳವರೆಗೆ ಭಾರತದ ಉನ್ನತ ಸಂಸ್ಥೆಗಳನ್ನು ತಲುಪಲು ಅದಾನಿ ಫೌಂಡೇಶನ್ ಪ್ರಮುಖ ಪಾತ್ರ ವಹಿಸಿದೆ ಎಂದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ಅವರ ಜೀವನ ಪಯಣದಲ್ಲಿ ಪ್ರೇರೇಪಿಸಲು ಗಣ್ಯ ವ್ಯಕ್ತಿಗಳನ್ನು ಕರೆತರುವ ಎವಿಎಂನ ಚೇಂಜ್ ಮೇಕರ್ ಸರಣಿಯ ಭಾಗವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ, ಶಾಲೆಯು ನಿಶ್ಚಲ್ ನಾರಾಯಣ (ಗಣಿತದ ಪ್ರತಿಭೆ, ಭಾರತದ ಕಿರಿಯ ಸಿ.ಎ., ಜೂನ್ 2024), ಜಾನ್ ಅಬ್ರಹಾಂ (ನಟ, ನಿರ್ಮಾಪಕ ಮತ್ತು ಸಮಾಜ ಸೇವಕ, ಏಪ್ರಿಲ್ 2024), ಶ್ರೀ ನಿಲೇಶ್ ದೇಸಾಯಿ (ನಿರ್ದೇಶಕರು-SAC/ISRO, ಜುಲೈ 2023), ಸಿಂಥಿಯಾ ಮೆಕ್‌ಕ್ಯಾಫ್ರಿ (ದೇಶ ಮುಖ್ಯಸ್ಥರು, UNICEF, ಜುಲೈ 2023), ಮತ್ತು ಸಫಿನ್ ಹಸನ್ (ಭಾರತದ ಅತ್ಯಂತ ಕಿರಿಯ IPS ಅಧಿಕಾರಿ, ಡಿಸೆಂಬರ್ 2022) ಅವರನ್ನು ಈ ಸರಣಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕರೆಸಲಾಗಿದೆ.
2008ರಲ್ಲಿ ಸ್ಥಾಪನೆಯಾದ ಎವಿಎಂ, ಮೊದಲ ತಲೆಮಾರಿನ ವಿದ್ಯಾರ್ಥಿಗಳಿಗೆ ಬೋಧನೆ, ಪುಸ್ತಕಗಳು, ಸಮವಸ್ತ್ರಗಳು, ಊಟ, ಪಠ್ಯೇತರ ಅವಕಾಶಗಳು ಮತ್ತು ಸಾರಿಗೆ ಸೌಲಭ್ಯಗಳು ಸೇರಿದಂತೆ ಉಚಿತ, ಸಮಗ್ರ ಶಿಕ್ಷಣವನ್ನು ಒದಗಿಸುತ್ತಿದೆ. ಇದು ಭರವಸೆಯ ದಾರಿದೀಪವಾಗಿ ನಿಂತಿದೆ. ಶೈಕ್ಷಣಿಕ ಶ್ರೇಷ್ಠತೆಯನ್ನು ನೈತಿಕತೆ, ಮೌಲ್ಯಗಳು, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ ಸಂಯೋಜಿಸುತ್ತಿದೆ. ಅದಾನಿ ಫೌಂಡೇಶನ್ ಅಹಮದಾಬಾದ್ ಮತ್ತು ಗುಜರಾತ್‌ನ ಭದ್ರೇಶ್ವರ, ಆಂಧ್ರಪ್ರದೇಶದ ಕೃಷ್ಣಪಟ್ಟಣ ಮತ್ತು ಛತ್ತೀಸ್‌ಗಢದ ಸುರ್ಗುಜಾದಲ್ಲಿ ಇಂತಹ ನಾಲ್ಕು ಅದಾನಿ ವಿದ್ಯಾ ಮಂದಿರ ಶಾಲೆಗಳನ್ನು ಮುನ್ನಡೆಸುತ್ತಿದೆ.
ರಾಜ್ಯಪಾಲರ ಸ್ಪೂರ್ತಿದಾಯಕ ಮಾತುಗಳು ಎವಿಎಂ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದೆ. ಮೌಲ್ಯಗಳಲ್ಲಿ ಬೇರೂರಿರುವ ಶಿಕ್ಷಣವು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ನಾಯಕರನ್ನು ಸೃಷ್ಟಿಸುತ್ತದೆ ಎಂಬ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ.












Click it and Unblock the Notifications