ಶೀಘ್ರದಲ್ಲೇ ರೈಲ್ವೇ ನೌಕರರ ಕೈಸೇರಲಿದೆ ದಸರಾ ಉಡುಗೊರೆ!

Written By: Ramesh
Subscribe to Oneindia Kannada

ನವದೆಹಲಿ, ಸೆ. 26 : ಕೇಂದ್ರ ರೈಲ್ವೇ ನೌಕರರಿಗೆ ನೌಕರರಿಗೆ ಕೇಂದ್ರ ಸರ್ಕಾರ ಸದ್ಯದಲ್ಲೇ ಸಿಹಿ ಸುದ್ದಿ ನೀಡುವ ಸಾಧ್ಯತೆ ಕಂಡುಬಂದಿದೆ. ರೈಲ್ವೇ ನೌಕರರಿಗೆ 78 ದಿನಗಳ ವೇತನವನ್ನು ಬೋನಸ್ ರೂಪದಲ್ಲಿ ನೀಡಲು ರೈಲ್ವೇ ಇಲಾಖೆ ಮುಂದಾಗಿದೆ.

ಇದರಿಂದ ಸುಮಾರು12 ಲಕ್ಷ ನೌಕರರು ದಸರಾ ಉಡುಗೊರೆಯನ್ನು ಪಡೆಯಲಿದ್ದಾರೆ. ಕಳೆದ 4 ವರ್ಷಗಳಿಂದ ರೈಲ್ವೇ ನೌಕರರಿಗೆ ಬೋನಸ್ ನೀಡುತ್ತಾ ಬಂದಿದೆ, ಈ ವರ್ಷವೂ ಬೋನಸ್ ನೀಡಬೇಕೆಂದು ನೌಕರರು ಮನವಿ ಮಾಡಿಕೊಂಡಿದ್ದರು.

Railway

ಇದಕ್ಕೆ ಸರ್ಕಾರ ಬೋನಸ್ ನೀಡಲು ಒಪ್ಪಿಗೆ ಸೂಚಿಸಿದ್ದು. ಮುಂದಿನ ವಾರ ಅಧಿಕೃತ ಘೋಷಣೆಯಾಗಲಿದೆ ಎಂದು ರೈಲ್ವೇ ಇಲಾಖೆ ನೌಕರರ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ. ರಾಘವಯ್ಯ ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಪ್ರತಿ ನೌಕರ 8,975 ರುಗಳನ್ನು ಪಡೆದುಕೊಂಡಿದ್ದರು. ಆದರೆ ಈ ವರ್ಷ ರೈಲ್ವೇ ಇಲಾಖೆ ಸುಮಾರು 10,000 ಕೋಟಿ ರೂ. ಆದಾಯ ಕೊರತೆ ಎದುರಿಸುತ್ತಿದೆ. ಆದರೂ ನೌಕರರಿಗೆ ಬೋನಸ್ ನೀಡಲು ಮುಂದಾಗಿದ್ದು. ಇದರಿಂದಇಲಾಖೆಗೆ ಸುಮಾರು 2,000 ಕೋಟಿ ರುಗಳು ಹೆಚ್ಚಿನ ಹೊರೆಬೀಳಲಿದೆ.

(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ahead of the festive season, railway employees are likely to get 78-day wages as bonus this year, the same as in the last four years despite the financial crunch.
Please Wait while comments are loading...