Gautam Adani: ಮಹಾಕುಂಭ ಮೇಳದಲ್ಲಿ ಪಾಲ್ಗೊಂಡ ಉದ್ಯಮಿ ಗೌತಮ್‌ ಅದಾನಿ

ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ನಿಮಿತ್ತ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರು ಇಂದು ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದರು. ಅದಾನಿ ಅವರು ಈ ಬಾರಿ ಮಹಾಕುಂಭ ಮೇಳಕ್ಕೆ ವಿಶೇಷ ಸೇವೆ ಸಲ್ಲಿಸುತ್ತಿದ್ದಾರೆ. ಅದಾನಿ ಗ್ರೂಪ್‌ ಇಸ್ಕಾನ್ ಸಹಯೋಗದೊಂದಿಗೆ "ಮಹಾಪ್ರಸಾದ ಸೇವೆ"ಯ ಮೂಲಕ ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಉಚಿತ ಆಹಾರವನ್ನು ವಿತರಿಸುವ ಕೆಲಸ ಮಾಡುತ್ತಿದೆ.

ಈ ಹಿನ್ನೆಲೆ ಗೌತಮ್‌ ಅದಾನಿ ಅವರು ಮಹಾಕುಂಭ ಮೇಳ ಪ್ರದೇಶದಲ್ಲಿ ಇಸ್ಕಾನ್‌ನ ಸೇವಾ ಶಿಬಿರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದರು. ಬಳಿಕ ಅಲ್ಲಿ ಮಹಾಪ್ರಸಾದವನ್ನು ಸಿದ್ಧಪಡಿಸುವ ಅಡುಗೆಮನೆಯನ್ನು ಪರಿಶೀಲಿಸಿದರು. ಈ ವೇಳೆ ಅದಾನಿ ಅವರು ಭಕ್ತರಿಗೆ ಸೇವೆ ಸಲ್ಲಿಸುವುದು ಗಂಗಾಮಾತೆಯ ಸೇವೆಗೆ ಸಮಾನ ಎಂದು ಹೇಳಿದರು. ಅಲ್ಲದೆ ಸೇವಾ ಕಾರ್ಯಗಳನ್ನು ಶುದ್ಧ ಹೃದಯದಿಂದ ನಿರ್ವಹಿಸಿದಾಗ ಅದು ದೇವರನ್ನು ತಲುಪುತ್ತದೆ ಎಂದು ಹೇಳಿದರು.

Gautam Adani s Visit to Prayagraj and ISKCON Service Meets Spirituality

ಇಸ್ಕಾನ್‌ಗೆ ಭೇಟಿ ನೀಡಿದ ನಂತರ ಗೌತಮ್ ಅದಾನಿ ಅವರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಈ ಪವಿತ್ರ ಸ್ಥಳದಲ್ಲಿ ಅದಾನಿ ಅವರು ತನ್ನ ಕುಟುಂಬ ಮತ್ತು ದೇಶದ ಯೋಗಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು. ತೀರ್ಥರಾಜ್ ಎಂದು ಕರೆಯಲ್ಪಡುವ ಪ್ರಯಾಗರಾಜ್ ಅಪಾರ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದೆ ಎಂದು ಅದಾನಿ ಅವರು ಶ್ಲಾಘಿಸಿದರು.

ಬಳಿಕ ಅದಾನಿ ಅವರು ಭಾರತದ 16 ಪ್ರಸಿದ್ಧ ಹನುಮಾನ್ ದೇವಾಲಯಗಳಲ್ಲಿ ಒಂದಾದ ಹೆಸರಾಂತ ಲೇಟೆ ಹನುಮಾನ್ ದೇವಾಲಯಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ಈ ಮೂಲಕ ಅವರು ಪ್ರಯಾಗರ್‌ರಾಜ್‌ನ ಶ್ರೀಮಂತ ಆಧ್ಯಾತ್ಮಿಕ ಪರಂಪರೆಗೆ ಗೌರವ ಸಲ್ಲಿಸಿದರು. ಇಂದಿನ ಭೇಟಿ ವೇಳೆ ಗೌತಮ್ ಅದಾನಿ ಅವರು ಮಹಾಕುಂಭ ಮೇಳದ ನಿಮಿತ್ತ ಒಂದು ಕೋಟಿ ಉಚಿತ ಆರತಿ ಸಂಗ್ರಹ ಪುಸ್ತಕಗಳನ್ನು ವಿತರಿಸುತ್ತಿರುವ ಗೀತಾ ಪತ್ರಿಕಾ ಶಿಬಿರಗಳಿಗೂ ಭೇಟಿ ನೀಡಿ ಪರಿಶೀಲಿಸಿದರು. ಸನಾತನ ಸಾಹಿತ್ಯಕ್ಕೆ ಪತ್ರಿಕಾ ಶತಮಾನಗಳ ಸೇವೆ ಮತ್ತು ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಗೆ ಅಪ್ರತಿಮ ಕೊಡುಗೆಗಳನ್ನು ನೀಡಿದೆ ಎಂದು ಅವರು ಶ್ಲಾಘಿಸಿದರು.

ಇನ್ನು ಕುಂಭಮೇಳದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸಿಬ್ಬಂದಿಯನ್ನು ಕೂಡ ಅದಾನಿ ಭೇಟಿ ಮಾಡಿ ಅವರ ಸೇವೆಯನ್ನು ಮೆಚ್ಚಿದರು. ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರೂ ಇಲ್ಲಿನ ಘಾಟ್‌ಗಳು ಮತ್ತು ರಸ್ತೆಗಳು ನಿರ್ಮಲವಾಗಿ ಕಾಣುತ್ತಿರುವುದರ ಹಿಂದೆ ನಿಮ್ಮ ಅವಿರತ ಶ್ರಮ ಇದೆ ಎಂದು ಕೊಂಡಾಡಿದರು. ಮಹಾ ಕುಂಭ ಮೇಳವನ್ನು ಭಾರತೀಯ ಸಂಸ್ಕೃತಿಯ ಮಹಾ ಯಜ್ಞ. ಕುಂಭಮೇಳದಲ್ಲಿ ಸೇವೆಯು ದಾನದ ಅತ್ಯುನ್ನತ ರೂಪವಾಗಿದೆ ಎಂದು ಗೌತಮ್ ಅದಾನಿ ಬಣ್ಣಿಸಿದರು.

ಅದಾನಿ ಸಮೂಹವು ಪ್ರಯಾಗ್‌ರಾಜ್‌ನಲ್ಲಿ ಭಕ್ತರ ಅನುಕೂಲಕ್ಕಾಗಿ ಹಿರಿಯರು, ಅಂಗವಿಕಲರು ಮತ್ತು ಚಿಕ್ಕ ಮಕ್ಕಳಿರುವ ತಾಯಂದಿರಿಗೆ ಗಾಲ್ಫ್ ಕಾರ್ಟ್ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಮಾಡಿದೆ. ಜೊತೆಗೆ ಭಗವದ್ಗೀತೆಯ ಸಾರವನ್ನು ಸಾರುವ ಗೀತಾ ಸಾರದ ಐದು ಲಕ್ಷ ಪ್ರತಿಗಳನ್ನು ಇಲ್ಲಿಗೆ ಬರುವವರಿಗೆ ವಿತರಿಸುವ ಕೆಲಸವೂ ಮಾಡುತ್ತಿದೆ.

ಅದಾನಿ ಸಮೂಹದ ಮಹಾಪ್ರಸಾದ ಸೇವೆಯು ಮಹಾಕುಂಭ ಮೇಳ ನಡೆಯುವ ಜನವರಿ 13ರಿಂದ ಫೆಬ್ರವರಿ 26ರವರೆಗೆ ಮುಂದುವರಿಯಲಿದೆ. ಈ ಸೇವಾ ಕಾರ್ಯದಡಿ ಬರೋಬ್ಬರಿ ಐದು ಮಿಲಿಯನ್ ಭಕ್ತರಿಗೆ ಸೇವೆ ಸಲ್ಲಿಸಲು ಅದಾನಿ ಗ್ರೂಪ್‌ ನಿರತವಾಗಿದೆ. ಇವರಿಗೆ ಸಹಯೋಗ ನೀಡುತ್ತಿರುವ ಇಸ್ಕಾನ್ ಭಕ್ತಾದಿಗಳಿಗೆ ಆಹಾರವನ್ನು ತಯಾರಿಸಲು ಎರಡು ದೊಡ್ಡ ಅಡುಗೆಮನೆಗಳನ್ನು ಪ್ರಯಾಗ್‌ರಾಜ್‌ನಲ್ಲಿ ಸ್ಥಾಪಿಸಿದೆ. ಇನ್ನು ಮಹಾಕುಂಭ ನಡೆಯುವ ಪ್ರದೇಶಗಳಲ್ಲಿ ಒಟ್ಟು 40 ಪ್ರಸಾದ ವಿತರಣಾ ಕೇಂದ್ರಗಳನ್ನು ತೆರೆದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+