ಟ್ವಿಟರ್ CEO ಹುದ್ದೆ ಕಳೆದುಕೊಂಡರೂ ಛಲ ಬಿಡದೆ 2 ಬಿಲಿಯನ್ ಡಾಲರ್ ಮೌಲ್ಯದ AI ಸ್ಟಾರ್ಟ್‌ಅಪ್ ಕಟ್ಟಿದ ಪರಾಗ್ ಅಗರವಾಲ್

ಜಗತ್ತಿನ ಅತಿ ದೊಡ್ಡ ಸಾಮಾಜಿಕ ಜಾಲತಾಣವೊಂದರ ಸಿಇಒ ಆಗಿದ್ದು, ನಂತರ ಆ ಹುದ್ದೆಯಿಂದ ಅನಿರೀಕ್ಷಿತವಾಗಿ ಕೆಳಗಿಳಿದು, ಇದೀಗ ಸಿಲಿಕಾನ್ ವ್ಯಾಲಿಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ 2 ಬಿಲಿಯನ್ ಡಾಲರ್ ಮೌಲ್ಯದ ಎಐ ಸ್ಟಾರ್ಟಪ್‌ ಕಟ್ಟಿರುವ ಪರಾಗ್ ಅಗರವಾಲ್ ಇವರ ಕಥೆ ನಿಜಕ್ಕೂ ಕುತೂಹಕಾರಿಯಾಗಿದೆ. ಜೀವನದಲ್ಲಿ ಎದುರಾಗುವ ಸೋಲುಗಳು ಮತ್ತು ಹಿನ್ನಡೆಗಳ ಬಗ್ಗೆ ಹೆಚ್ಚು ಯೋಚಿಸುತ್ತಾ ಕುಳಿತುಕೊಳ್ಳದೇ, ಅದನ್ನಾ ಮೆಟ್ಟಿ ನಿಂತು ಹೇಗೆ ದೊಡ್ಡ ಸಾಧನೆಗೆ ಮುನ್ನುಡಿ ಬರೆದುಕೊಳ್ಳಬಹುದು ಎನ್ನುವುದಕ್ಕೆ ಇವರೇ ಒಳ್ಳೆಯ ಉದಾಹರಣೆ.

ಪರಾಗ್ ಅಗರವಾಲ್ ಶೈಕ್ಷಣಿಕ ಹಿನ್ನೆಲೆ

ಜೆಇಇ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 77ನೇ ರ‍್ಯಾಂಕ್ ಪಡೆದ ಪರಾಗ್ ಅಗರವಾಲ್, ಪ್ರತಿಷ್ಠಿತ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ಚಿಕ್ಕಂದಿನಿಂದಲೂ ಕಲಿಕೆಯಲ್ಲಿ ಸದಾ ಮುಂದಿದ್ದ ಪರಾಗ್, ನಂತರ ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮುಂದುವರಿಸಿ ಪಿಎಚ್‌ಡಿ ಪೂರ್ಣಗೊಳಿಸಿದರು. ಅವರು ಓದುತ್ತಿರುವಾಗಲೇ ಮೈಕ್ರೋಸಾಫ್ಟ್, ಯಾಹೂ ಮತ್ತು ಎಟಿ&ಟಿ ಲ್ಯಾಬ್ಸ್‌ನಂತಹ ದೊಡ್ಡ ದೊಡ್ಡ ಕಂಪನಿಗಳಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸಿ ಕಂಪ್ಯೂಟಿಂಗ್ ವ್ಯವಸ್ಥೆಗಳು ಮತ್ತು ತಂತ್ರಜ್ಞಾನಗಳ ಮೇಲೆ ಅಪಾರ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದಾರೆ.

Former Twitter CEO

ಸಾಫ್ಟ್‌ವೇರ್ ಇಂಜಿನಿಯರ್‌ನಿಂದ ಟ್ವಿಟರ್‌ ಸಿಇಒವರೆಗೆ

2011ರಲ್ಲಿ ಟ್ವಿಟರ್ ಅಂದರೆ ಇಂದಿನ ಏಕ್ಸ್‌ ಸಾಮಾಜಿಕ ಜಾಲತಾಣ ಸಂಸ್ಥೆಗೆ ಕೇವಲ ಒಬ್ಬ ಸಾಮಾನ್ಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಸೇರ್ಪಡೆಯಾದ ಪರಾಗ್, ತಮ್ಮ ಕಠಿಣ ಶ್ರಮದಿಂದ ಸಂಸ್ಥೆಯ ಒಳಗೆ ಹಂತಹಂತವಾಗಿ ಯಶಸ್ಸಿನ ಮೇಲೇರಿದರು. ಅವರ ತಾಂತ್ರಿಕ ಕೊಡುಗೆಗಳನ್ನು ಗುರುತಿಸಿದ ಸಂಸ್ಥೆಯು 2017ರಲ್ಲಿ ಅವರನ್ನು ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಅಂದರೆ ಸಿಟಿಒ ಆಗಿ ನೇಮಿಸಿತು. ಇದಾದ ಕೇವಲ ನಾಲ್ಕೇ ವರ್ಷಗಳಲ್ಲಿ, ಅಂದರೆ 2021ರ ನವೆಂಬರ್‌ನಲ್ಲಿ, ಜಾಗತಿಕ ಟೆಕ್ ಜಗತ್ತಿನ ಅತ್ಯಂತ ಕಿರಿಯ ಸಿಇಒಗಳಲ್ಲಿ ಒಬ್ಬರಾಗಿ ಟ್ವಿಟರ್ ಸಂಸ್ಥೆಯ ಚುಕ್ಕಾಣಿ ಹಿಡಿದರು.

ಅನಿರೀಕ್ಷಿತ ಆಘಾತ ತಂದ ಎಲಾನ್ ಮಸ್ಕ್

ಸಿಇಒ ಆಗಿ ಕೇವಲ ಒಂದು ವರ್ಷ ಕಳೆಯುವಷ್ಟರಲ್ಲಿ, ಪರಾಗ್ ತಮ್ಮ ವೃತ್ತಿಜೀವನದಲ್ಲೇ ಅತೀ ದೊಡ್ಡ ಆಘಾತ ಎದುರಿಸಿದರು. ಅಕ್ಟೋಬರ್ 2022ರಲ್ಲಿ ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಅನ್ನು ಸಂಪೂರ್ಣವಾಗಿ ಖರೀದಿಸಿದರು. ಕಂಪನಿಯ ಒಡೆತನ ಬದಲಾಗುತ್ತಿದ್ದಂತೆ ಅವರು ತೆಗೆದುಕೊಂಡ ಮೊದಲ ನಿರ್ಧಾರವೇ ಉನ್ನತ ಅಧಿಕಾರಿಗಳ ವಜಾ. ಈ ಪ್ರಕ್ರಿಯೆಯಲ್ಲಿ ಪರಾಗ್ ಅಗರವಾಲ್ ಸಹ ತಮ್ಮ ಹುದ್ದೆ ಕಳೆದುಕೊಂಡರು. ಈ ಸುದ್ದಿ ಜಾಗತಿಕ ಮಟ್ಟದಲ್ಲಿ ಭಾರೀ ಸದ್ದುಮಾಡಿತು. ಮತ್ತು ಇದರಿಂದ ಪರಾಗ್‌ ಅವರ ವೃತ್ತಿಜೀವನವೇ ಮುಗಿದೇ ಹೋಯ್ತು ಎಂಧು ಅನೇಕರು ಅಂದುಕೊಂಡಿದ್ದರು.

ಎಐ ಲೋಕದಲ್ಲಿ ಹೊಸ ಸಾಮ್ರಾಜ್ಯ ಸೃಷ್ಟಿಸಿದ ಪರಾಗ್ ಅಗರವಾಲ್

ಟ್ವಿಟರ್‌ನಿಂದ ಹೊರಬಂದ ನಂತರ ಬೇರೊಂದು ಕಂಪನಿಯಲ್ಲಿ ಉದ್ಯೋಗ ಹುಡುಕುವ ಬದಲು, ಪರಾಗ್‌ ಹೊಸದೊಂದು ಕಠಿಣ ದಾರಿಯನ್ನು ಹುಡುಕಿಕೊಂಡರು. ಅದೇನೆಂದರೆ 2023ರಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ)ಅಪ್ಲಿಕೇಶನ್‌ಗಳಿಗೆ ಮೂಲಸೌಕರ್ಯ ಒದಗಿಸುವ ಉದ್ದೇಶದಿಂದ 'ಪ್ಯಾರಲಲ್ ವೆಬ್ ಸಿಸ್ಟಮ್ಸ್' ಎಂಬ ಹೊಸ ಸ್ಟಾರ್ಟ್ಅಪ್ ಪ್ರಾರಂಭಿಸಿದರು.

ಆಶ್ಚರ್ಯವೆಂಬಂತೆ, ಕೇವಲ ಎರಡು ವರ್ಷಗಳಲ್ಲಿ ಈ ಕಂಪನಿ ಭಾರಿ ಹೂಡಿಕೆದಾರರನ್ನು ಆಕರ್ಷಿಸಿದ್ದು, ಪ್ರಸ್ತುತ ಇದರ ಮೌಲ್ಯ 2 ಬಿಲಿಯನ್ ಡಾಲರ್‌ಗೆ ಅಂದರೆ ಸುಮಾರು 16,000 ಕೋಟಿ ರೂಪಾಯಿಗೆ ತಲುಪಿದೆ. ನಂತರ ಇತ್ತೀಚೆಗೆ ಜಾಗತಿಕ ಹೂಡಿಕೆಯನ್ನು ಆಕರ್ಷಿಸುತ್ತಿರುವ ಎಐ ಕ್ಷೇತ್ರದಲ್ಲಿ ಪರಾಗ್ ಅವರ ಈ ಹೊಸ ಹೆಜ್ಜೆ ಮತ್ತೊಂದು ದೊಡ್ಡ ಮೈಲಿಗಲ್ಲನ್ನ ಸೃಷ್ಟಿಸಿದೆ.

ಯಶಸ್ಸು ಎಂಬುದು ಯಾವತ್ತೂ ಒಂದೇ ರೀತಿ ಇರುವುದಿಲ್ಲ. ಒಳ್ಳೆಯ ಕಾಲೇಜು, ನಾವು ಕನಸು ಕಂಡ ಕೆಲಸ, ಮತ್ತು ಕೆಲಸದಲ್ಲಿ ಉತ್ತಮ ಪ್ರಮೋಷನ್‌ ಮಾತ್ರವೇ ಮನುಷ್ಯನ ಯಶಸ್ಸಿನ ಮಾನ ದಂಡವಲ್ಲ. ಎಷ್ಟೇ ದೊಡ್ಡ ಸೋಲಾದರೂ ಅಥವಾ ಹಿನ್ನಡೆಯಾದರೂ ಮತ್ತೊಮ್ಮೆ ಎಲ್ಲವನ್ನೂ ಹೊಸದಾಗಿ ಶುರು ಮಾಡುತ್ತೇನೆ ಅಥವಾ ಕಟ್ಟುತ್ತೇನೆ ಎನ್ನುವ ಆ ಛಲ ನಮ್ಮಲ್ಲಿರಬೇಕು ಎಂಬುದನ್ನ ಈಗಾಗಲೇ ಪರಾಗ್ ಅಗರವಾಲ್ ಸಾಧಿಸಿ ತೋರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+