Get Updates
Get notified of breaking news, exclusive insights, and must-see stories!

ನವಿ ಮುಂಬೈನಲ್ಲಿ ಫೆಡೆಕ್ಸ್‌ನ ಅತ್ಯಾಧುನಿಕ ಏರ್ ಕಾರ್ಗೋ ಹಬ್: 6,000 ಉದ್ಯೋಗಗಳ ಸೃಷ್ಟಿಸುವ ಗುರಿ

ಜಾಗತಿಕ ಲಾಜಿಸ್ಟಿಕ್ಸ್ ಪ್ರಮುಖ ಕಂಪನಿ ಫೆಡೆಕ್ಸ್, ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ಸ್ವಯಂಚಾಲಿತ ಏರ್ ಕಾರ್ಗೋ ಹಬ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದೆ. ಭಾರತದ ಲಾಜಿಸ್ಟಿಕ್ಸ್ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಿ, ಅಂತಾರಾಷ್ಟ್ರೀಯ ವ್ಯಾಪಾರ ಸಂಪರ್ಕವನ್ನು ವಿಸ್ತರಿಸುವ ಉದ್ದೇಶದಿಂದ ಕಂಪನಿ 2,500 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹೂಡಿಕೆ ಮಾಡುತ್ತಿದೆ.

ಈ ಹೊಸ ಏರ್ ಕಾರ್ಗೋ ಹಬ್ ಅತ್ಯಾಧುನಿಕ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸಲಿದ್ದು, ಸರಕು ಸಾಗಣೆಯನ್ನು ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ. ಇದರ ಮೂಲಕ ಭಾರತ ಜಾಗತಿಕ ವ್ಯಾಪಾರ ಜಾಲದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ.

FedEx

300,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಇದನ್ನು ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕೇಂದ್ರವು ಭಾರತವನ್ನು ಆಗ್ನೇಯ ಏಷ್ಯಾ, ಪಶ್ಚಿಮ ಏಷ್ಯಾ, ಯೂರೋಪ್ ಹಾಗೂ ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಸಂಪರ್ಕಿಸುವ ಪ್ರಮುಖ ಪ್ರಾದೇಶಿಕ ಬಲವರ್ಧನೆ ಮತ್ತು ಮರುಹಂಚಿಕೆ ಕೇಂದ್ರವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

ಶಿಲಾನ್ಯಾಸ ಸಮಾರಂಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಫೆಡೆಕ್ಸ್ ಅಧ್ಯಕ್ಷ ಮತ್ತು ಸಿಇಒ ರಾಜ್ ಸುಬ್ರಮಣಿಯಂ, ಫೆಡೆಕ್ಸ್ ಏರ್‌ಲೈನ್ ಸಿಇಒ ಮತ್ತು ಅಂತಾರಾಷ್ಟ್ರೀಯ ಕಾರ್ಯಾಚರಣೆಗಳ ಸಿಒಒ ರಿಚರ್ಡ್ ಸ್ಮಿತ್, ಎಂಇಎಸ್ಎ ಅಧ್ಯಕ್ಷೆ ಕಾಮಿ ವಿಶ್ವನಾಥನ್ ಮತ್ತು ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ನಿರ್ದೇಶಕ ಜೀತ್ ಅದಾನಿ ಉಪಸ್ಥಿತರಿದ್ದರು.

ಒಮ್ಮೆ ಕಾರ್ಯರೂಪಕ್ಕೆ ಬಂದರೆ, ಈ ಸೌಲಭ್ಯವು ಲಾಜಿಸ್ಟಿಕ್ಸ್, ಗೋದಾಮು ನಿರ್ವಹಣೆ, ಸಾರಿಗೆ ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ 6,000ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಇದರಿಂದ ಉದ್ಯೋಗಾವಕಾಶಗಳಿಗೆ ಮಹತ್ವದ ಉತ್ತೇಜನ ದೊರೆಯುವುದಲ್ಲದೆ, ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೂ ಗಮನಾರ್ಹ ವೇಗ ಸಿಗಲಿದೆ.

ಜೀತ್ ಅದಾನಿ ಅವರು ಮಾತನಾಡಿ, ಈ ಯೋಜನೆ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದೀರ್ಘಕಾಲೀನ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ. ಅಲ್ಲದೆ, ಸಮಗ್ರ ಮೂಲಸೌಕರ್ಯಗಳ ಮೂಲಕ ಭಾರತದ ಜಾಗತಿಕ ವ್ಯಾಪಾರ ಸ್ಪರ್ಧಾತ್ಮಕತೆಯನ್ನು ಬಲಪಡಿಸುವುದು ಎನ್‌ಎಂಎಐಯ ಪ್ರಮುಖ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಮುಂದುವರೆದು ಮಾತನಾಡಿದ ಅವರು, ಜವಾಹರಲಾಲ್ ನೆಹರು ಬಂದರು, ಕೈಗಾರಿಕಾ ಕಾರಿಡಾರ್‌ಗಳು ಹಾಗೂ ಬಹುಮಾದರಿ ಸಾರಿಗೆ ಜಾಲಗಳಿಗೆ ಸಮೀಪದಲ್ಲಿರುವ ಎನ್‌ಎಂಎಐಯ ಸಾಮೀಪ್ಯವು ವೇಗವಾಗಿ ಬೆಳೆಯುತ್ತಿರುವ ರಫ್ತು ಕ್ಷೇತ್ರಗಳಿಗೆ ಬೆಂಬಲ ನೀಡಲಿದೆ. ಇದರ ಮೂಲಕ ಮಹಾರಾಷ್ಟ್ರವು ಜಾಗತಿಕ ಲಾಜಿಸ್ಟಿಕ್ಸ್ ಗೇಟ್‌ವೇ ಆಗಿ ಮಹಾರಾಷ್ಟ್ರದ ಪಾತ್ರವನ್ನು ಬಲಪಡಿಸುತ್ತದೆ ಎಂದು ಹೇಳಿದರು.

ಕಾಮಿ ವಿಶ್ವನಾಥನ್ ಅವರು ಮಾತನಾಡಿ, ಭಾರತದ ಜಾಗತಿಕ ವ್ಯಾಪಾರ ಸ್ಪರ್ಧಾತ್ಮಕತೆಗೆ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಲಾಜಿಸ್ಟಿಕ್ಸ್ ಮೂಲಸೌಕರ್ಯ ಅತ್ಯಾವಶ್ಯಕ. ಎನ್‌ಎಂಎಐಯಲ್ಲಿ ಈ ಹಬ್ ಸ್ಥಾಪನೆಯಿಂದ ಫೆಡೆಕ್ಸ್ ತನ್ನ ಜಾಗತಿಕ ಜಾಲ ಸಾಮರ್ಥ್ಯಗಳನ್ನು ಭಾರತದ ವೇಗವಾಗಿ ಬೆಳೆಯುತ್ತಿರುವ ವ್ಯಾಪಾರ ಕಾರಿಡಾರ್ ಜೊತೆಗೆ ಸಂಯೋಜಿಸಲು ಸಾಧ್ಯವಾಗುತ್ತದೆ. ಈ ಮೂಲಕ ಗ್ರಾಹಕರಿಗೆ ವೇಗ, ವಿಶ್ವಾಸಾರ್ಹತೆ ಹಾಗೂ ಕಾರ್ಯಕ್ಷಮತೆಯಲ್ಲಿ ಇನ್ನಷ್ಟು ಸುಧಾರಣೆ ದೊರೆಯಲಿದೆ ಎಂದು ಹೇಳಿದರು.

ಈ ಅತ್ಯಾಧುನಿಕ ಕಾರ್ಗೋ ಹಬ್‌ನಲ್ಲಿ ಸ್ವಯಂಚಾಲಿತ ವಿಂಗಡಣೆ ವ್ಯವಸ್ಥೆಗಳು, ಆಯಾಮ ಸ್ಕ್ಯಾನಿಂಗ್ ತಂತ್ರಜ್ಞಾನ, ಹೈ-ಸ್ಪೀಡ್ ಸ್ಕ್ರೀನಿಂಗ್ ಸೌಲಭ್ಯಗಳು ಹಾಗೂ ವಿಮಾನಗಳಿಗೆ ಮೀಸಲಾದ ಪಾರ್ಕಿಂಗ್ ಬೇಗಳು ಇರಲಿವೆ. ಈ ಸಾಮರ್ಥ್ಯಗಳ ಮೂಲಕ ಒಳಬರುವ ಮತ್ತು ಹೊರಹೋಗುವ ಸರಕುಗಳನ್ನು ಏಕಕಾಲದಲ್ಲಿ ನಿರ್ವಹಿಸಲು ಸಾಧ್ಯವಾಗುತ್ತದೆ. ಇದರಿಂದ ಸಾಗಣೆ ಸಮಯದ ಮುನ್ಸೂಚನೆಯನ್ನು ಸುಧಾರಿಸುತ್ತದೆ. ಜೊತೆಗೆ ಮಾರ್ಗ ನಿಯೋಜನೆಗೆ ಹೆಚ್ಚಿನ ಅನುಕೂಲವಾಗಲಿದೆ. ವಿಶೇಷವಾಗಿ ಎಲೆಕ್ಟ್ರಾನಿಕ್ಸ್, ಔಷಧಗಳು, ಎಂಜಿನಿಯರಿಂಗ್ ಸರಕುಗಳು ಹಾಗೂ ಶೀಘ್ರ ಹಾಳಾಗುವಂತಹ ಹೆಚ್ಚಿನ ಮೌಲ್ಯದ ಮತ್ತು ಸಮಯ ಸಂವೇದನಶೀಲ ಕ್ಷೇತ್ರಗಳಿಗೆ ಇದು ಅನುಕೂಲವಾಗಲಿದೆ. ಈ ಅಭಿವೃದ್ಧಿಯು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ರಫ್ತು- ಆಮದು ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ, ಲಾಜಿಸ್ಟಿಕ್ಸ್ ವೆಚ್ಚಗಳನ್ನು ಕಡಿಮೆ ಮಾಡುತ್ತದೆ ಮತ್ತು ಟರ್ನ್‌ಅರೌಂಡ್ ಸಮಯವನ್ನು ಸುಧಾರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಎನ್‌ಎಂಎಐಯ ಕಾರ್ಗೋ ಮೂಲಸೌಕರ್ಯವು ಆರಂಭಿಕ ಹಂತದಲ್ಲಿ ವಾರ್ಷಿಕವಾಗಿ ಸುಮಾರು 0.5 ಮಿಲಿಯನ್ ಮೆಟ್ರಿಕ್ ಟನ್ ಸರಕುಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ. ಹಂತ ಹಂತವಾಗಿ ವಿಸ್ತರಣೆ ಮಾಡುವ ಯೋಜನೆಯಿದ್ದು, ಪೂರ್ಣ ಸಾಮರ್ಥ್ಯದಲ್ಲಿ ಇದು ಸುಮಾರು 3.25 ಮಿಲಿಯನ್ ಮೆಟ್ರಿಕ್ ಟನ್‌ಗಳ ಮಟ್ಟವನ್ನು ತಲುಪುವ ನಿರೀಕ್ಷೆಯಿದೆ. ಈ ವಿಸ್ತರಣೆ ಯೋಜನೆ ಮುಂಬೈ ಮಹಾನಗರ ಪ್ರದೇಶವನ್ನು ಪ್ರಮುಖ ವಾಯು ಸರಕು ಸಾಗಣೆ ಮತ್ತು ಲಾಜಿಸ್ಟಿಕ್ಸ್ ಕೇಂದ್ರವಾಗಿ ರೂಪಿಸುವ ವಿಮಾನ ನಿಲ್ದಾಣದ ದೀರ್ಘಕಾಲೀನ ಕಾರ್ಯತಂತ್ರಕ್ಕೆ ಬೆಂಬಲ ನೀಡುತ್ತದೆ.

ಸುಮಾರು ಮೂರು ದಶಕಗಳಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಫೆಡೆಕ್ಸ್, ಹೊಸ ಹಬ್ ಸ್ಥಾಪನೆಯಿಂದ ದೇಶದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವುದಾಗಿ ತಿಳಿಸಿದೆ. ಇದರಿಂದ ಜಾಗತಿಕ ಪೂರೈಕೆ ಸರಪಳಿಗಳಲ್ಲಿ (ಗ್ಲೋಬಲ್ ಸಪ್ಲೈ ಚೇನ್) ಸಮಗ್ರ ವಿಮಾನಯಾನ ಮತ್ತು ಬಹುಮಾದರಿ ವ್ಯಾಪಾರ ವೇದಿಕೆಯಾಗಿ ಎನ್‌ಎಂಎಐ ಹೊರಹೊಮ್ಮುವುದನ್ನು ಬೆಂಬಲಿಸುತ್ತದೆ ಎಂದು ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+