• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

FACT CHECK: ಕೊರೊನಾಗಾಗಿ ಭಾರತೀಯ ಸೇನೆ ಆಸ್ಪತ್ರೆ ಕಟ್ಟಿದ್ದು ನಿಜವೇ?

|

ಕೊರೊನಾ ವೈರಸ್ ಭೀತಿಯ ನಡುವೆ ಹಲವು ಸುಳ್ಳು ಸುದ್ದಿಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅದರಲ್ಲಿ ''ಕೊರೊನಾ ಪೀಡಿತರಿಗಾಗಿ ಭಾರತೀಯ ಸೇನೆ 1000 ಬೆಡ್ ವ್ಯವಸ್ಥೆಯುಳ್ಳ ಸುಸಜ್ಜಿತ ಆಸ್ಪತ್ರೆ ಕಟ್ಟಿದೆ'' ಎಂಬ ಸುದ್ದಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ವೈದ್ಯಕೀಯ ವ್ಯವಸ್ಥೆ, ಆಸ್ಪತ್ರೆಯ ವಾರ್ಡ್ ಗಳು ಮತ್ತು ಸೇನಾ ವೈದ್ಯರ ಗುಂಪು ಇರುವ ಫೋಟೋಗಳು ಕೂಡ ಫೇಸ್ ಬುಕ್, ಟ್ವಿಟ್ಟರ್, ವಾಟ್ಸ್ ಆಪ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಆಗುತ್ತಿದೆ.

ಇಟಲಿಯ ಏರ್ ಪೋರ್ಟ್ ನಲ್ಲಿ ಪ್ರಯಾಣಿಕರ ಸಾವು: ವೈರಲ್ ವಿಡಿಯೋ ನಿಜವೇ?

ಹಾಗಾದ್ರೆ, ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಹಾಯ ಆಗಲು ಭಾರತೀಯ ಸೇನೆ ಆಸ್ಪತ್ರೆ ಕಟ್ಟಿರುವುದು ನಿಜವೇ.? ಈ ಪ್ರಶ್ನೆಗೆ ಉತ್ತರ 'ಇಲ್ಲ'!

ವೈರಲ್ ಪೋಸ್ಟ್

''ರಾಜಸ್ಥಾನದ ಬರ್ಮೇರ್ ನಲ್ಲಿ ಭಾರತೀಯ ಸೇನೆ ಪರ್ಫೆಕ್ಟ್ ಆಸ್ಪತ್ರೆ ನಿರ್ಮಿಸಿದೆ. 2 ದಿನಗಳಲ್ಲಿ 1000 ಬೆಡ್ ವ್ಯವಸ್ಥೆ ಮಾಡಲಾಗಿದೆ. 100 ವೆಂಟಿಲೇಟರ್ ಉಳ್ಳ ಐಸಿಯು ಸೇರಿದಂತೆ 1000 ಕೊರೊನಾ ಸೋಂಕಿತರಿಗೆ ಅನುಕೂಲ ಆಗುವ ವ್ಯವಸ್ಥೆ ಆಸ್ಪತ್ರೆಯಲ್ಲಿದೆ'' ಎಂಬ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ಪೋಸ್ಟ್ ನಲ್ಲಿ ಏನಿತ್ತು.?

ವೈರಲ್ ಪೋಸ್ಟ್ ನಲ್ಲಿ ಏನಿತ್ತು.?

''ಪ್ರತಿ 20 ರೋಗಿಗಳಿಗೆ 1 ಡಾಕ್ಟರ್ ಇರುತ್ತಾರೆ. ಐಸೊಲೇಷನ್ ನಲ್ಲಿರುವ ರೋಗಿಗಳಿಗೆ ಟಿವಿ ನೀಡಲಾಗಿದೆ'' ಅಂತ ಓರ್ವ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ. ಆದರೆ ಇದೆಲ್ಲವೂ ಸುಳ್ಳು ಸುದ್ದಿ.

ಫ್ಯಾಕ್ಟ್ ಚೆಕ್: ಕೊರೊನಾದಿಂದ RBI ಹಣಕಾಸು ವರ್ಷ ಮರುಹೊಂದಿಸಿಲ್ಲ

ಸ್ಪಷ್ಟ ಪಡಿಸಿದ ಭಾರತೀಯ ಸೇನೆ

''ಬಾರ್ಮೆರ್ ನಲ್ಲಿ 1000 ಬೆಡ್ ವ್ಯವಸ್ಥೆಯುಳ್ಳ ಆಸ್ಪತ್ರೆ ನಿರ್ಮಿಸಿರುವ ಸುದ್ದಿ ಶುದ್ಧ ಸುಳ್ಳು'' ಎಂದು ಭಾರತೀಯ ಸೇನೆ ಟ್ವಿಟ್ಟರ್ ನಲ್ಲಿ ಸ್ಪಷ್ಟ ಪಡಿಸಿದೆ.

ಹಳೇ ಫೋಟೋಗಳು ಈಗ ವೈರಲ್

ಅಂದ್ಹಾಗೆ, ವೈರಲ್ ಪೋಸ್ಟ್ ಗಳ ಜೊತೆಗೆ ಹರಿದಾಡುತ್ತಿರುವ ಫೋಟೋಗಳು ಕೂಡ ವರ್ಷಗಳ ಹಿಂದೆ ಸೆರೆಯಾಗಿದ್ದು.

Fact Check: ನಿರಂತರ ನೀರು ಕುಡಿದ್ರೆ, ಕೊರೊನಾವೈರಸ್ ಸೂಸೈಡ್?

English summary
Fact Check: Indian Army built 1000-bed quarantine facility in Barmer is fake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X