ಚುಟುಕು: 'ಸೋನಿಯಾ ಅಳಿಯ ಜೈಲಿಗೆ ಗ್ಯಾರಂಟಿ'

Posted By:
Subscribe to Oneindia Kannada

ಬೆಂಗಳೂರು, ಏ.21: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

6.00: ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮೊದಲಿಗೆ ಭೂ ಹಗರಣಗಳ ಮೂಲಕ ಅಕ್ರಮ ಹಣ ಸಂಪಾದಿಸಿರುವ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಧ್ರಾ ಅವರನ್ನು ಜೈಲಿಗೆ ತಳ್ಳಲಾಗುತ್ತದೆ ಎಂದು ಉಮಾ ಭಾರ್ತಿ ಹೇಳಿದ್ದಾರೆ.
5.30: ವಿಎಚ್ ಪಿ ನಾಯಕ ಪ್ರವೀಣ್ ತೊಗಾಡೀಯಾ ಹೇಳಿಕೆಗೆ ಕಾಂಗ್ರೆಸ್ ನಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದರೆ, ಅರೆಸ್ಸೆಸ್ ಪ್ರವೀಣ್ ಅವರನ್ನು ಸಮರ್ಥಿಸಿಕೊಂಡಿದೆ.
4.45: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಪಂಡಿತ್ ಚನ್ನುಲಾಲ್ ಮಿಶ್ರಾ ಅವರು ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಅನುಮೋದಿಸಲು ಒಪ್ಪಿಗೆ ಸೂಚಿಸಿದ್ದಾರೆ. ಕಲಾವಿದನಾಗಿ ನನ್ನ ಬಳಿ ಬಂದ ಮನವಿಯನ್ನು ಪುರಸ್ಕರಿಸಿದ್ದೇನೆ. ಸೋನಿಯಾಜೀ ಅಥವಾ ಮುಲಾಯಂಜೀ ಅವರು ಕೇಳಿದ್ದರೂ ನಾನು ಇದನ್ನೇ ಮಾಡುತ್ತಿದ್ದೆ ಎಂದಿದ್ದಾರೆ.

Uma bharti

11.00: ಶೆಹನಾಯಿ ಮಾಂತ್ರಿಕ ದಿವಂಗತ ಬಿಸ್ಮಿಲ್ಲಾ ಖಾನ್ ಅವರ ಕುಟುಂಬ ವಾರಣಾಸಿಯಲ್ಲಿ ನೆಲೆಸಿದ್ದು, ಮೋದಿ ಪರ ದನಿಗೂಡಿಸಲು ನಿರಾಕರಿಸಿದ್ದಾರೆ. ಮೋದಿ ಅವರ ಹೆಸರನ್ನು ಪ್ರಧಾನಿ ಪಟ್ಟಕ್ಕೆ ಕ್ಷೇತ್ರದ ಜನತೆಯಾಗಿ ಅನುಮೋದನೆಗೊಳಿಸುವಂತೆ ಬಿಜೆಪಿ ಮನವಿ ಮಾಡಿತ್ತು ಎನ್ನಲಾಗಿದೆ.

10.45: ಮೋದಿ ವಿರೋಧಿಗಳು ಪಾಕಿಸ್ತಾನಕ್ಕೆ ಹೋಗಲಿ ಎಂದು ಭಾಷಣ ಮಾಡಿದ ಗಿರಿರಾಜ್ ಸಿಂಗ್ ಅವರ ಮೇಲೆ ಜಾರ್ಖಂಡ್ ಪೊಲೀಸರಿಂದ ಎಫ್ ಐಆರ್ ದಾಖಲು.
10.30: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸೋಮವಾರ ಮುಂಬೈನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಎಂಎನ್ ಎಸ್ ಮುಖಂಡ ರಾಜ್ ಠಾಕ್ರೆ ಅವರು ಕೂಡಾ ಮೋದಿಗೆ ಬೆಂಬಲ ವ್ಯಕ್ತಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

Here are the top news in brief for April 21, Monday

10.20: ಪಶ್ಚಿಮ ಬಂಗಾಳದಲ್ಲಿ ಜಾರಿ ನಿರ್ದೇಶನಾಲಯದಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಅರ್ಪಿತಾ ಘೋಷ್ ವಿರುದ್ಧ ಸಮನ್ಸ್ ಜಾರಿ. ಅರ್ಪಿತಾ ಅವರು ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣದ ಆರೋಪ ಹೊತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Elections 2014: Get all politic parties campaign information, candidates nomination, election commission releases.Lok Sabha election 2014 news in brief on April 21.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ