ಸಿಟಿ ರವಿ ರಾಷ್ಟ್ರ ರಾಜಕಾರಣಕ್ಕೆ ಭರ್ಜರಿ ಎಂಟ್ರಿ ಕೊಡ್ತಾರಾ?

ಮುಂಬೈ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ರಾಜ್ಯ ರಾಜಕೀಯ ಬಿಟ್ಟು, ಇದೀಗ ರಾಷ್ಟ್ರ ರಾಜಕೀಯದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ 9 ವರ್ಷ ತುಂಬಿದ ಹಿನ್ನೆಲೆ ಮುಂಬೈನಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದು, ಸಿಟಿ ರವಿ ರಾಷ್ಟ್ರ ರಾಜಕಾರಣಕ್ಕೆ ಹೋಗುವ ಬಗ್ಗೆ ಚರ್ಚೆ ಶುರುವಾಗಿದೆ.

ಇಷ್ಟುದಿನ ನೂತನ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸುತ್ತಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೆಲ ದಿನದಿಂದ ರಾಷ್ಟ್ರ ರಾಜಕಾರಣದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅದರಲ್ಲೂ ಪಿಎಂ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 9 ವರ್ಷ ತುಂಬಿರುವ ಸಂಭ್ರಮದಲ್ಲಿ ಮಹಾರಾಷ್ಟ್ರ ರಾಜಧಾನಿ ಮುಂಬೈನ ಮೆಟ್ರೋದಲ್ಲಿ ಭರ್ಜರಿ ಕ್ಯಾಂಪೇನ್ ಮಾಡಿದ್ದಾರೆ. ಮೆಟ್ರೋ ಪ್ರಯಾಣಿಕರಿಗೆ ಪ್ರಧಾನಿ ಮೋದಿ ಸರ್ಕಾರದ ಸಾಧನೆಗಳನ್ನ ಕರಪತ್ರ ಹಂಚುವ ಮೂಲಕ ತಿಳಿಸಿದ್ದಾರೆ (CT Ravi).

CT Ravi entry to National politics

ಮಾಜಿ ಸಚಿವ ಸಿಟಿ ರವಿ ಮಂದಹಾಸ!

ಮುಂಬೈನ ಮೆಟ್ರೋ ರೈಲಲ್ಲಿ ಪ್ರಧಾನಿ ಮೋದಿ ಸರ್ಕಾರದ ಸಾಧನೆ ಬಿಂಬಿಸುವ ಕರಪತ್ರ ಹಂಚಿರುವ ಫೋಟೋಗಳನ್ನ ಸಿಟಿ ರವಿ ಶೇರ್ ಮಾಡಿದ್ದಾರೆ. 'ಪ್ರಧಾನಿ ನರೇಂದ್ರ ಮೋದಿ ಅವರ 9 ವರ್ಷಗಳ ಸಾಧನೆ ಮತ್ತು ಕಾರ್ಯಗಳನ್ನು ತಿಳಿಸಲು ಮುಂಬೈನ ಮೆಟ್ರೋದಲ್ಲಿ ತೆರಳಿದೆ. ಜನರ ಜೀವನವನ್ನು ಸುಗಮಗೊಳಿಸಿದ "ಕರ್ಮಯೋಗಿ" ಬಗ್ಗೆ ಜನ ಹೇಳುತ್ತಿದ್ದ ಮೆಚ್ಚುಗೆಯ ಮಾತುಗಳನ್ನು ಕೇಳಲು ನನಗೆ ಹೆಚ್ಚು ಸಂತೋಷವಾಯಿತು' ಎಂದು ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಬರೆದುಕೊಂಡಿದ್ದಾರೆ ಸಿಟಿ ರವಿ.

ರಾಷ್ಟ್ರ ರಾಜಕಾರಣಕ್ಕೆ ಸಿಟಿ ರವಿ?

ಹೌದು, ಈ ಪ್ರಶ್ನೆ ಬಹುತೇಕರನ್ನ ಕಾಡುತ್ತಿದೆ. ಏಕೆಂದರೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಸಿಟಿ ರವಿ ಅವರು ಈಗ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ರಾಷ್ಟ್ರ ರಾಜಕಾರಣದಲ್ಲಿ ಆಕ್ಟಿವ್ ಆಗಿದ್ದಾರೆ. ಈ ಕಾರಣಕ್ಕೆ ರವಿ ರಾಜ್ಯ ರಾಜಕಾರಣ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರಾ? ಅನ್ನೋ ಪ್ರಶ್ನೆ ಬಹುತೇಕರನ್ನ ಕಾಡುತ್ತಿದೆ. ಏಕೆಂದರೆ 2024ರ ಲೋಕಸಭೆ ಚುನಾವಣೆಗೆ ಇನ್ನು ಕೆಲ ತಿಂಗಳಷ್ಟೇ ಬಾಕಿ ಉಳಿದಿದೆ. ಹೀಗಾಗಿ ಸಿಟಿ ರವಿ ಲೋಕಸಭೆಗೆ ಸ್ಪರ್ಧೆ ಮಾಡುವ ಸಿದ್ಧತೆ ನಡೆಸಿದ್ದಾರಾ? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕಾಡುತ್ತಿದೆ.

ಸಿಟಿ ರವಿ ಸಿಎಂ ಆಗಬೇಕಿತ್ತಂತೆ!

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಈ ಬಾರಿ ಚನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದಾರೆ. ಆದರೆ ಚುನಾವಣೆಗೆ ಮೊದಲು ತಾವು ಸಿಎಂ ಆಗಬೇಕು ಎಂಬ ಬಯಕೆ ಹೊಂದಿದ್ದರು. ಇದೇ ಕಾರಣಕ್ಕೆ ಸಿಟಿ ರವಿ ನಾನೂ ಕೂಡ ಸಿಎಂ ಆಕಾಂಕ್ಷಿ ಎಂದು ಚುನಾವಣೆ ಸಂದರ್ಭದಲ್ಲಿ ಹೇಳಿಕೊಂಡಿದ್ದರು. ಹೀಗೆ ಮುಂದೆ ನಾನೂ ಸಿಎಂ ಆಗ್ತೀನಿ ಎಂಬ ಆಸೆಯನ್ನು ರವಿ ಹೊಂದಿದ್ದರು, ಆದರೆ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ಸಿಟಿ ರವಿ ಸಿಎಂ ಆಸೆ ಭಗ್ನವಾಗಿದೆ. ಈ ಹಿನ್ನೆಲೆಯಲ್ಲಿ ಈಗ ರಾಷ್ಟ್ರ ರಾಜಕಾರಣಕ್ಕೆ ಸಿಟಿ ರವಿ ಎಂಟ್ರಿ ಕೊಟ್ಟು ಸೌಂಡ್ ಮಾಡ್ತಾರಾ? ಅನ್ನೋ ಡೌಟ್ ಕಾಡುತ್ತಿದೆ.

ಸಿಟಿ ರವಿ ಆಸೆಗೆ ಈಶ್ವರಪ್ಪ ಬೆಂಬಲ!

ಇನ್ನು ಕೆಲ ತಿಂಗಳ ಹಿಂದೆ ಸಿಟಿ ರವಿ ಆಸೆಗೆ ಪೂರಕವಾಗಿ ಕೆ.ಎಸ್.ಈಶ್ವರಪ್ಪ ಕೂಡ ರವಿ ಪರ ಬ್ಯಾಟ್ ಬೀಸಿ ಗಮನ ಸೆಳೆದಿದ್ದರು. ರವಿ ಮುಂದೆ ಸಿಎಂ ಆಗಲಿ ಎಂಬ ಬಯಕೆಯನ್ನ ಈಶ್ವರಪ್ಪ ವ್ಯಕ್ತಪಡಿಸಿದ್ದರು. ಸಿಟಿಆರ್ ನಾನು ಕೂಡ ಸಿಎಂ ಆಕಾಂಕ್ಷಿ ಎಂದು ಹೇಳಿದ ಮರುದಿನವೇ ಈ ರೀತಿ ಈಶ್ವರಪ್ಪ ಬ್ಯಾಟ್ ಬೀಸಿದ್ರು. ಇಷ್ಟೆಲ್ಲದರ ನಡುವೆ ಸಿಟಿ ರವಿ ಸೋಲು ಕಂಡಿದ್ದರು. ಆದ್ರೆ ಈಗ ಸಿಟಿ ರವಿ ಹೊಸ ರಣತಂತ್ರ ರೂಪಿಸಿರುವ ರೀತಿ ಕಾಣುತ್ತಿದೆ.

ಒಟ್ನಲ್ಲಿ ರಾಜ್ಯ ರಾಜಕಾರಣ ಬಿಟ್ಟು, ನೇರವಾಗಿ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಈಗ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಆದರೆ ಇದಕ್ಕೆಲ್ಲಾ ಮಾಜಿ ಸಚಿವ ಸಿಟಿ ರವಿ ಅವರು ಯಾವುದೇ ಪ್ರತಿಕ್ರಿಯೆಯನ್ನ ಇಲ್ಲಿಯ ತನಕ ನೀಡಿಲ್ಲ. ಆದ್ರೆ ಮುಂದೆ ಈ ಬಗ್ಗೆ ಸ್ಪಷ್ಟನೆ ಸಿಗುವ ಸಾಧ್ಯತೆ ಇದ್ದು ಲೋಕಸಭೆಗೆ ಅಖಾಡ ಈಗಲೇ ರಂಗೇರುತ್ತಿರುವುದು ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+