‘ಪುಲ್ವಾಮದಲ್ಲಿ ಯೋಧರನ್ನು ರಕ್ಷಿಸಲಾಗಲಿಲ್ಲ, ಸಂಸತ್ತಿನಲ್ಲಿ ಸಂಸದರನ್ನೂ ರಕ್ಷಿಸಲು ವಿಫಲವಾಗಿದೆ’
ಭಾರತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ದೇಗುಲ, ಸಂಸತ್ ಭವನದ ಮೇಲೆ ಅಪರಿಚಿತ ವ್ಯಕ್ತಿಗಳಿಂದ ದಾಳಿ ನಡೆದಿದೆ. ಈ ಘಟನೆ ಬಗ್ಗೆ ಎಲ್ಲಾ ರೀತಿಯಲ್ಲೂ ಚರ್ಚೆ ಶುರುವಾಗಿದೆ ಹಾಗೂ ರಾಜಕೀಯ ವಾಗ್ದಾಳಿ ಕೂಡ ಪ್ರಾರಂಭವಾಗಿದೆ. ಇದೇ ಸಮಯದಲ್ಲಿ ಕರ್ನಾಟಕದ ಕಾಂಗ್ರೆಸ್ ಘಟಕ ಕೂಡ, ಸಂಸತ್ ಭವನಕ್ಕೆ ಅಪರಿಚಿತರು ನುಗ್ಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಬಿಜೆಪಿ ಬಗ್ಗೆ ಏನ್ ಹೇಳಿದೆ ಗೊತ್ತಾ?
ಹಿಂದೆ 2001ರಲ್ಲಿ ಇದೇ ದಿನ ಸಂಸತ್ ಭವನದ ಮೇಲೆ ಉಗ್ರರ ದಾಳಿಯಾಗಿತ್ತು, ಆಗಲೂ ಬಿಜೆಪಿ ಆಡಳಿತವಿತ್ತು.
— Karnataka Congress (@INCKarnataka) December 13, 2023
ಈಗ ಸಂಸತ್ ಭವನದ ಒಳಗೆಯೇ ಭದ್ರತಾ ಲೋಪವಾಗಿದೆ.
ಪುಲ್ವಾಮದಲ್ಲಿ ಯೋಧರನ್ನು ರಕ್ಷಿಸಲಾಗಲಿಲ್ಲ, ಸಂಸತ್ತಿನಲ್ಲಿ ಸಂಸದರನ್ನೂ ರಕ್ಷಿಸಲು ವಿಫಲವಾಗಿದೆ.
ಈ ದಾಳಿಯಲ್ಲಿ ಪ್ರತಾಪ್ ಸಿಂಹರ ಹೆಸರು ಮೇಲ್ನೋಟದಲ್ಲೇ ಕಂಡುಬಂದಿದೆ.
ಸ್ಪೀಕರ್…
ಕರ್ನಾಟಕ ಕಾಂಗ್ರೆಸ್ ಮತ್ತು ಬಿಜೆಪಿ ಘಟಕದ ನಡುವೆ ಪ್ರತಿದಿನ ಫೈಟಿಂಗ್ ಗ್ಯಾರಂಟಿ. ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ಎರಡು ಪಕ್ಷಗಳು ಗದಾಯುದ್ಧ ನಡೆಸುತ್ತಿವೆ. ಇದೀಗ ಸಂಸತ್ ಭವನಕ್ಕೆ ಅಪರಿಚಿತ ವ್ಯಕ್ತಿಗಳು ನುಗ್ಗಿ ಭದ್ರತಾ ಲೋಪಕ್ಕೆ ಕಾರಣವಾದ ಕುರಿತಾಗಿ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ. ಅದರಲ್ಲೂ 22 ವರ್ಷಗಳ ಹಿಂದಿನ ಘಟನೆಯನ್ನ ಈ ವೇಳೆ ಪ್ರಸ್ತಾಪ ಮಾಡುವ ಮೂಲಕ, ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಹೇಳಿದ್ದೇನು ಎಂಬ ಬಗ್ಗೆ ಮಾಹಿತಿಗೆ ಮುಂದೆ ಓದಿ.

'2001ರಲ್ಲಿ ಇದೇ ದಿನ ಸಂಸತ್...'
ಹೌದು ಸಂಸತ್ ಭವನಕ್ಕೆ ಆಗಂತುಕರು ನುಗ್ಗಿದ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಅನ್ನ ಮಾಡಿದ್ದು, 'ಹಿಂದೆ 2001 ರಲ್ಲಿ ಇದೇ ದಿನ ಸಂಸತ್ ಭವನದ ಮೇಲೆ ಉಗ್ರರ ದಾಳಿಯಾಗಿತ್ತು, ಆಗಲೂ ಬಿಜೆಪಿ ಆಡಳಿತವಿತ್ತು. ಈಗ ಸಂಸತ್ ಭವನದ ಒಳಗೆಯೇ ಭದ್ರತಾ ಲೋಪವಾಗಿದೆ. ಪುಲ್ವಾಮದಲ್ಲಿ ಯೋಧರನ್ನು ರಕ್ಷಿಸಲಾಗಲಿಲ್ಲ, ಸಂಸತ್ತಿನಲ್ಲಿ ಸಂಸದರನ್ನೂ ರಕ್ಷಿಸಲು ವಿಫಲವಾಗಿದೆ. ಈ ದಾಳಿಯ ಹಿಂದೆ ಪ್ರತಾಪ್ ಸಿಂಹರ ಕೈವಾಡವಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಸ್ಪೀಕರ್ @ombirlakota ಅವರು ಕೂಡಲೇ @mepratap ಅವರನ್ನು ಈ ಕೂಡಲೇ ಸಂಸತ್ ಸದಸ್ಯ ಸ್ಥಾನದಿಂದ ವಜಾಗೊಳಿಸಿ ತನಿಖೆ ನಡೆಸಬೇಕು.' ಎಂದು ಆಗ್ರಹ ಮಾಡಿದೆ.
ಒಟ್ನಲ್ಲಿ 2001ರ ಘಟನೆಗೆ ಇಂದು 22 ವರ್ಷ ತುಂಬಿದ. ಇದೇ ಸಮಯದಲ್ಲಿ ಭಾರತದಲ್ಲಿ ಸಂಚಲನ ಸೃಷ್ಟಿಯಾಗಿದೆ. ಈ ಬಗ್ಗೆ ರಾಜಕೀಯ ತಿಕ್ಕಾಟ ಕೂಡ ಜೋರಾಗಿದ್ದು, ಚರ್ಚೆಗೆ ರಾಜಕೀಯ ಪಕ್ಷಗಳು ಅಖಾಡ ಸಜ್ಜುಗೊಳಿಸಿವೆ. ಹೀಗಾಗಿ ಇದೆಲ್ಲ ಎಲ್ಲಿಗೆ ಬಂದು ನಿಲ್ಲುತ್ತೆ ಅಂತಾ ಕಾದು ನೋಡಬೇಕಿದೆ.

2001ರಲ್ಲಿ ಸಂಸತ್ ಮೇಲೆ ದಾಳಿ
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ, ಇಂತಹ ಬೃಹತ್ ದೇಶದ ಸಂಸತ್‌ನಲ್ಲಿ ಇಂದು ನಡೆಯಬಾರದ ಘಟನೆ ನಡೆದು ಹೋಗಿದೆ. 2001ರ ಡಿಸೆಂಬರ್ 13 ರಂದು ಭಾರತ ಸಂಸತ್‌ಗೆ ನುಗ್ಗಿದ್ದ ಉಗ್ರರು ದಾಳಿ ನಡೆಸಿ, ಒಟ್ಟು 9 ಜನ ಮೃತಪಟ್ಟಿದ್ದರು. ಇಂದು ಇದೇ ಭೀಕರ ಘಟನೆಗೆ ಬರೋಬ್ಬರಿ 22 ವರ್ಷ ತುಂಬಿದ ಸಮಯದಲ್ಲೇ, ಮತ್ತೆ ಸಂಸತ್ ಒಳಗಡೆಗೆ ಆಗಂತುಕರು ನುಗ್ಗಿದ್ದಾರೆ.












Click it and Unblock the Notifications