Chandrayaan-3: ಚಿನ್ನದಲ್ಲಿ ಅರಳಿದ ಭಾರತೀಯರ ವಿಕ್ರಂ ಲ್ಯಾಂಡರ್!

ಭಾರತದ ಇಸ್ರೋ ಮಾಡುತ್ತಿರುವ ಸಾಧನೆಗೆ ಜಗತ್ತೇ ಕೈಜೋಡಿಸಿದೆ. ಇದೇ ಹೊತ್ತಲ್ಲಿ ಪ್ರತಿ ಭಾರತೀಯರ ಹೃದಯವೂ ಚಂದ್ರಯಾನ-3 ಸಾಧನೆಗೆ ಪ್ರಾರ್ಥಿಸಿದೆ. ಬೆಳಗ್ಗೆಯಿಂದ ದೇಶದ ಮೂಲೆ ಮೂಲೆಯಲ್ಲೂ ವಿಶೇಷ ಪೂಜೆ ಸಲ್ಲಿಸಿ, ಭಾರತೀಯರು ಚಂದ್ರಯಾನ-3 ಸಕ್ಸಸ್‌ಗೆ ಪ್ರಾರ್ಥಿಸಿದ್ದಾರೆ. ಈ ಸಂದರ್ಭದಲ್ಲಿ ಕಲಾವಿದ ವಿಶೇಷವಾಗಿ ಇಸ್ರೋ ವಿಜ್ಞಾನಿಗಳ ಶ್ರಮಕ್ಕೆ ಗೌರವ ಸಲ್ಲಿಸಿದ್ದಾರೆ.

ಇಸ್ರೋ ಸಂಸ್ಥೆಯ ಮಹತ್ವದ ಚಂದ್ರಯಾನ-3 ಯೋಜನೆ ಈಗ ಅಂತಿಮ ಹಂತ ತಲುಪಿದ್ದು ಇನ್ನೇನು ಇತಿಹಾಸ ನಿರ್ಮಾಣವಾಗಲಿದೆ. ವಿಕ್ರಮ್‌ ಲ್ಯಾಂಡರ್ ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ಮೇಲೆ ಇಳಿಯಲಿದೆ. ಹೀಗಾಗಿ ಯೋಜನೆಗಾಗಿ ಹಗಲು, ರಾತ್ರಿಯನ್ನ ಲೆಕ್ಕಿಸದೆ ದುಡಿದ ವಿಜ್ಞಾನಿಗಳಿಗೆ ಗೌರವ ಸೂಚಿಸಲಾಗಿದೆ. ತಮಿಳುನಾಡಿನ ಕೊಯಮತ್ತೂರು ಮೂಲದ ಕಲಾವಿದ 'ಚಂದ್ರಯಾನ-3' ಮಾದರಿ ವಿನ್ಯಾಸವನ್ನ ಚಿನ್ನದಲ್ಲಿ ರಚಿಸಿದ್ದು, ಈ ಮೂಲಕ ಯೋಜನೆಗೆ ಗೌರವ ಸಲ್ಲಿಸಿದ್ದಾರೆ.

vikram-lander-model-created

4 ಗ್ರಾಂ ಚಿನ್ನದಲ್ಲಿ ಅರಳಿದ ಲ್ಯಾಂಡರ್

ಚಂದ್ರಯಾನ-3 ಯೋಜನೆಗೆ ಭಾರತ ಸಾಕಷ್ಟು ಶ್ರಮಪಟ್ಟಿದ್ದು, ನೂರಾರು ಕೋಟಿ ರೂ. ಖರ್ಚಾಗಿದೆ. ಹೀಗಾಗಿ ಜಗತ್ತಿನ ಪ್ರಮುಖ ದೇಶಗಳು ಭಾರತಕ್ಕೆ ಜೈ ಎಂದಿವೆ. ಭಾರತೀಯರ ಪಾಲಿಗೆ ಇದು ಹೆಮ್ಮೆಯ ಕ್ಷಣವಾಗಿದ್ದು, ಶತಕೋಟಿ ಭಾರತೀಯರು ಕನಸು ಕಟ್ಟಿ ಲ್ಯಾಂಡ್ ಆಗುವ ಕ್ಷಣಕ್ಕೆ ಕಾಯುತ್ತಿದ್ದಾರೆ. ಈ ಸಂದರ್ಭದಲ್ಲೇ ಕಲಾವಿದ ಮರಿಯಪ್ಪನ್‌ ಮಹತ್ವದ ಗೌರವ ಸಲ್ಲಿಸಿದ್ದಾರೆ.

ಒಟ್ಟು 4 ಗ್ರಾಂ ಚಿನ್ನ ಬಳಸಿ ವಿಕ್ರಂ ಲ್ಯಾಂಡರ್ ಮಾದರಿ ಸಿದ್ಧಪಡಿಸಿದ್ದಾರೆ ಮರಿಯಪ್ಪನ್‌. ಯೋಜನೆಯಲ್ಲಿ ಪಾಲ್ಗೊಂಡ ಎಲ್ಲಾ ವಿಜ್ಞಾನಿಗಳಿಗೆ ಹೀಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ವಿಕ್ರಂ ಲ್ಯಾಂಡರ್ ಮಾದರಿ ರಚಿಸಿದ್ದಾಗಿ ಕಲಾವಿದ ಮರಿಯಪ್ಪನ್‌ ಹೇಳಿದ್ದಾರೆ. ಸುಮಾರು 48 ಗಂಟೆ ಅವಧಿಯಲ್ಲಿ ಕಲಾವಿದ ಮರಿಯಪ್ಪನ್‌ ಅವರು ಚಂದ್ರಯಾನ ಯೋಜನೆಯ ವಿಕ್ರಂ ಲ್ಯಾಂಡರ್ ಮಾದರಿಯನ್ನ ಚಿನ್ನದಲ್ಲಿ ತಯಾರಿಸಿದ್ದಾರೆ. ಮರಿಯಪ್ಪನ್ ಕಾರ್ಯಕ್ಕೆ ಎಲ್ಲಾ ಕಡೆಯಿಂದ ಹೆಮ್ಮೆ ವ್ಯಕ್ತವಾಗಿದೆ.

vikram-lander-model-created

ಮೈನಸ್ 230 ಡಿಗ್ರಿ ಉಷ್ಣಾಂಶ!

ವಿಜ್ಞಾನಿಗಳಿಗೆ ಕುತೂಹಲ ಕೆರಳಿಸಿರುವ ಚಂದ್ರನ ಭಾಗವೆಂದರೆ ದಕ್ಷಿಣ ಧ್ರುವ. ಯಾಕಂದ್ರೆ ಈ ಭಾಗ ಚಂದ್ರನ ವಿಸ್ಮಯಗಳ ಖಜಾನೆ ಇದ್ದಂತೆ. ಇಲ್ಲಿ ಉಷ್ಣಾಂಶವು ಮೈನಸ್ 230 ಡಿಗ್ರಿಗಿಂತ ಕಡಿಮೆ ಇರುತ್ತದೆ. ಬೆಳಕನ್ನೇ ಕಾಣದ ಎಷ್ಟೊಂದು ಪ್ರದೇಶಗಳು ಇಲ್ಲಿ ಇವೆ. ಚಂದ್ರಯಾನ-1 ಯೋಜನೆ ಚಂದ್ರನ ಮೇಲೆ ನೀರಿದೆ ಎಂದು ಮೊದಲ ಬಾರಿ ತಿಳಿಸಿತ್ತು. ಹೀಗೆ ಭಾರತ 2008ರಲ್ಲಿ ಚಂದ್ರನ ಮೇಲೆ ನೀರು ಕಂಡುಹಿಡಿದ ನಂತರ, ಜಗತ್ತಿನ ಬಾಹ್ಯಾಕಾಶ ವಿಜ್ಞಾನಿಗಳು ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ಆರಂಭಿಸಲು ಯೋಜನೆ ರೂಪಿಸಿ ಸಿದ್ಧತೆ ನಡೆಸುತ್ತಿದ್ದಾರೆ. ಈಗ ಭಾರತ ಕೂಡ ದಕ್ಷಿಣ ಧ್ರುವದಲ್ಲೇ ವಿಕ್ರಮ್ ಲ್ಯಾಂಡರ್ ಇಳಿಸಲು ತೀರ್ಮಾನಿಸಿದೆ.

ಚಂದ್ರನ ಮೇಲೆ ಲ್ಯಾಂಡಿಂಗ್ ಹೇಗೆ?

ಇಸ್ರೋ ಅಂತ್ಯಾಧುನಿಕ ತಂತ್ರಜ್ಞಾನ ಬಳಸಿ ಚಂದ್ರನ ಯೋಜನೆಗೆ ಸಿದ್ಧತೆ ನಡೆಸಿತ್ತು. ಹೀಗಾಗಿ 'ಚಂದ್ರಯಾನ-3' ಲ್ಯಾಂಡರ್ ಹೈಫೈ ಆಗಿದ್ದು, ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ಕೂಡ ಅತ್ಯಾಧುನಿಕ ತಂತ್ರಜ್ಞಾನವೇ ಆಗಿದೆ. ಇದು ವಿಕ್ರಮ್ ಲ್ಯಾಂಡರ್‌ಗೆ ಸರಿಯಾದ ಹಾಗೂ ಸಮತಟ್ಟು ಲ್ಯಾಂಡಿಂಗ್ ಸ್ಥಳ ಹುಡುಕಲು ಸಹಾಯ ಮಾಡುತ್ತದೆ. ಹೀಗೆ ಕ್ಯಾಮೆರಾದ ಸಹಾಯದಿಂದ ವಿಕ್ರಮ್ ಲ್ಯಾಂಡರ್ ಎಲ್ಲಿ ಇಳಿಯುತ್ತಿದೆ? ಹೇಗೆ ಇಳಿಯುತ್ತಿದೆ? ಅನ್ನೋದನ್ನ ನೋಡಬಹುದು.

ಕಳೆದ ಬಾರಿ ಭಾರತ ಚಂದ್ರನ ಮೇಲೆ ಲ್ಯಾಂಡರ್ ಇಳಿಸುವಾಗಲೆ ಸ್ವಲ್ಪ ಎಡವಟ್ಟಾಗಿತ್ತು. ಹೀಗೆ ಸಣ್ಣ ಸಮಸ್ಯೆ ಯೋಜನೆ ಹಾಳು ಮಾಡಿತ್ತು. ಈ ಕಾರಣಕ್ಕೆ ಎಚ್ಚರಿಕೆ ವಹಿಸಿದ್ದು, ಲ್ಯಾಂಡರ್ ಇಳಿಸುವ ಪ್ರತಿಕ್ಷಣವೂ ಇಸ್ರೋಗೆ ಗೊತ್ತಾಗಲಿದೆ. ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ಕೆಲಸವು ಏನೆಂದರೆ ವಿಕ್ರಮ್‌ಗೆ ಸರಿಯಾದ ಲ್ಯಾಂಡಿಂಗ್ ಸ್ಥಳ ತೋರಿಸುತ್ತೆ. ಹಾಗೂ ಲ್ಯಾಂಡರ್‌ನ ಅಪಾಯ ಪತ್ತೆ & ಅಪಾಯ ತಪ್ಪಿಸುವ ಕ್ಯಾಮರಾ (LHDAC) ಕೂಡ ಇದರಲ್ಲಿದೆ. ಜೊತೆಗೆ ಲೇಸರ್ ಆಲ್ಟಿಮೀಟರ್ (LASA), ಲೇಸರ್ ಡಾಪ್ಲರ್ ವೆಲಾಸಿಟಿಮೀಟರ್ (LDV) & ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (LHVC) ಪೇಲೋಡ್‌ ಜತೆ ಕೆಲಸ ಮಾಡುತ್ತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+