ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟಗೊಳ್ಳುತ್ತಿರುವ ಮಂಜು, ಧೂಳು: 29 ರೈಲು, 40 ವಿಮಾನ ವಿಳಂಬ- ಮಾಹಿತಿ ತಿಳಿಯಿರಿ

ನವದೆಹಲಿ: ದೆಹಲಿ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿ ಮಂಜು ದಟ್ಟವಾಗಿದೆ. ಮುಂದಿನ ವಸ್ತು, ವಕ್ತಿಗಳು ಕಣ್ಣಿಗೆ ಕಾಣಿಸದಂತಹ ಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಕನಿಷ್ಠ 29 ರೈಲುಗಳು ವಿಳಂಬವಾಗಿವೆ.

ರಾಷ್ಟ್ರ ರಾಜಧಾನಿಯಲ್ಲಿ ಇಂದು ಮುಂಜಾನೆ ಗೋಚರತೆಯ ಪ್ರಮಾಣ 200 ಮೀಟರ್‌ಗೆ ಇಳಿದಿತ್ತು. ಮಂಜಿನ ಹೊದಿಕೆಯ ಮೂಲಕ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದವು. ಇದು ಅಪಾಯದ ಮನ್ಸೂಚನೆಯನ್ನು ನೀಡಿತು. ಆರಂಭದ ಅವಧಿಯಲ್ಲಿ, ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಮಂಜಿನ ಎಚ್ಚರಿಕೆಯನ್ನು ನೀಡಿದರು. ಕಡಿಮೆ ಗೋಚರತೆಯಲ್ಲಿ ಕಾರ್ಯವಿಧಾನಗಳನ್ನು ನಿರ್ವಹಿಸುವುದರ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸುಮಾರು 40 ವಿಮಾನಗಳ ಸಂಚಾರಕ್ಕೆ ತೊಂದರೆಯಾಗಿದೆ ಎಂದು ತಿಳಿದುಬಂದಿದೆ. ಕೆಲವು ವಿಮಾನಗಳನ್ನು ಬೇರೆಡೆಗೆ ತಿರುಗಿಸಬೇಕಾಗಿತ್ತು. ಆದರೆ ಇನ್ನೂ ಯಾವುದೇ ದೊಡ್ಡ ವಿಳಂಬದ ವರದಿಗಳಿಲ್ಲ.

Dense Fog In Delhi Pulls Visibility Down To Minimum, 29 Trains Delayed

ಭಾರತೀಯ ಹವಾಮಾನ ಇಲಾಖೆ (IMD) ಯ ದತ್ತಾಂಶವು ಉತ್ತರ ಭಾರತದಾದ್ಯಂತ ಮಂಜಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದೆ. ಕಳೆದ ರಾತ್ರಿ ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಪಂಜಾಬ್‌ನ ಭಟಿಂಡಾ ಪ್ರದೇಶವು 'ಶೂನ್ಯ' ಗೋಚರತೆ ಪ್ರಮಾಣವನ್ನು ತಿಳಿಸಿದೆ.

IMD ಇಂದು ಬೆಳಿಗ್ಗೆ ಪಂಜಾಬ್ ಮತ್ತು ವಾಯುವ್ಯ ರಾಜಸ್ಥಾನದಿಂದ ಉತ್ತರ ಪ್ರದೇಶಕ್ಕೆ ವಿಸ್ತರಿಸಿದ ಮಂಜಿನ ಹೊದಿಕೆಯ ಉಪಗ್ರಹ ಚಿತ್ರವನ್ನು ಟ್ವೀಟ್ ಮಾಡಿದೆ. ಇದು ಹರಿಯಾಣ ಮತ್ತು ದೆಹಲಿಯನ್ನು ಒಳಗೊಂಡಿದೆ.

Dense Fog In Delhi Pulls Visibility Down To Minimum, 29 Trains Delayed

ರೈಲ್ವೆಯ ಅಂಕಿಅಂಶಗಳ ಪ್ರಕಾರ, ಕಡಿಮೆ ಗೋಚರತೆಯಿಂದಾಗಿ 29 ರೈಲುಗಳು ಕನಿಷ್ಠ ಎರಡು ಗಂಟೆಗಳ ಕಾಲ ವಿಳಂಬವಾಗಿವೆ.

ವಾಯುವ್ಯ ಭಾರತದಲ್ಲಿ ಮುಂದಿನ ಎರಡು ದಿನಗಳ ಕಾಲ ಚಳಿ ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಶನಿವಾರ ಮುನ್ಸೂಚನೆ ನೀಡಿದೆ.

Dense Fog In Delhi Pulls Visibility Down To Minimum, 29 Trains Delayed

ರಾಜಧಾನಿ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿ ಶೀತ ಅಲೆಯ ನಡುವೆ ದಟ್ಟವಾದ ಮಂಜು ಹರಡಿಕೊಂಡಿದೆ. ದೆಹಲಿಯಲ್ಲಿ ನಿನ್ನೆ 1.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಳೆದ ದಶಕದಲ್ಲಿ ಎರಡನೇ ಅತಿ ಕಡಿಮೆ ತಾಪಮಾನ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜನವರಿ 15 ರ ವರೆಗೆ ಶಾಲೆಗಳನ್ನು ಮುಚ್ಚುವಂತೆ ದೆಹಲಿ ಸರ್ಕಾರ ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+