ದೀಪಾವಳಿ ಸಂಭ್ರಮದ ನಡುವೆ ದೆಹಲಿ "ಗಾಳಿ ವಿಷಕಾರಿ", ಇದೇ ಕಾರಣ!
Delhi Air Turns Toxic: ರಾಜ್ಯ ರಾಜಧಾನಿ ದೆಹಲಿ ಅಕ್ಷರಶಃ ಗ್ಯಾಸ್ ಚೇಂಬರ್ ಆಗಿ ಬದಲಾಗಿದೆ. ಈ ಬಾರಿ ದೆಹಲಿ ಸರ್ಕಾರವು ಸಹ ದೀಪಾವಳಿ ಸಮಯದಲ್ಲಿ ಪಾಟಕಿ ಸಿಡಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ವಿಶೇಷ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ಆದರೆ ಸುಪ್ರೀಂ ಕೋರ್ಟ್ ಕೆಲವೊಂದು ಪ್ರಮುಖ ಸೂಚನೆಗಳನ್ನು ನೀಡಿತ್ತು. ಈ ಸೂಚನೆಗಳ ಅನುಸಾರ ದೆಹಲಿಯಲ್ಲಿ ಪಟಾಕಿ ಹೊಡೆಯುವುದಕ್ಕೆ ಸಮಯ ನಿಗದಿ ಮಾಡಲಾಗಿತ್ತು. ಆದರೆ ಅದು ಪಾಲನೆ ಆಗದೆ ದೆಹಲಿ ಹಾಗೂ ದೆಹಲಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಗಾಳಿಯು ವಿಷಕಾರಿಯಾಗಿ ಬದಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯು ಪ್ರತಿಬಾರಿಯು ಚಳಿಗಾಲದ ಸಮಯ ಹಾಗೂ ದೀಪವಾಳಿ ಸಮಯದಲ್ಲಿ ಗ್ಯಾಸ್ ಚೇಂಬರ್ ಆಗಿ ಬದಲಾಗುತ್ತದೆ. ವರ್ಷ ಪೂರ್ತಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಕಳಪೆಯಾಗಿರುತ್ತದೆ. ಆದರೆ ವಿಶೇಷವಾಗಿ ನೆರೆಯ ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳ ರೈತರು ಕಳೆಗಳನ್ನು ಸುಡುವಾಗ ಹಾಗೂ ದೀಪವಾಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿ, ಜನ ಉಸಿರಾಡುವುದಕ್ಕೂ ಸಮಸ್ಯೆ ಆಗುತ್ತದೆ.

ಈ ಬಾರಿಯೂ ದೀಪಾವಳಿ ಹಬ್ಬದ ಒಂದು ದಿನದ ನಂತರ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಭಾರೀ ಕುಸಿತ ಕಂಡಿದ್ದು, ಭಾರೀ ಪರಿಣಾಮ ಬೀರಿದೆ. ದೆಹಲಿಯಲ್ಲಿ ಅಕ್ಟೋಬರ್ 21 ಮಂಗಳವಾರ ಹೆಚ್ಚಿನ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಗಂಭೀರ ಹಂತಕ್ಕೆ ತಲುಪಿದ್ದು, ವಿಷಕಾರಿ ಗಾಳಿ ಹೆಚ್ಚಾಗಿದೆ ಎಂದು ವರದಿಯಾಗಿದೆ.
ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಹೊಡೆಯುವುದಕ್ಕೆ ಸಮಯ ನಿಗದಿ ಮಾಡಲಾಗಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹಬ್ಬದ ದಿನದಂದು ರಾತ್ರಿ 8 ರಿಂದ 10 ಗಂಟೆಯವರೆಗೆ ಹಸಿರು ಪಟಾಕಿಗಳನ್ನು ಸಿಡಿಸಲು ಮಾತ್ರ ಅನುಮತಿ ನೀಡಲಾಗಿತ್ತು. ಆದರೆ ಆಚರಣೆಗಳು ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಮುಂದುವರಿದಿದೆ. ಅಲ್ಲದೇ ಕೆಲವರು ಹಸಿರು ಪಟಾಕಿ ಮಾತ್ರವಲ್ಲದೇ ಬೇರೆ ಬೇರೆ ಪಟಾಕಿಗಳನ್ನೂ ಸಿಡಿಸಿದ್ದಾರೆ ಎನ್ನಲಾಗಿದೆ.
ಬೆಳಿಗ್ಗೆ 7:15 ಕ್ಕೆ, ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 368 ರಲ್ಲಿ ತುಂಬಾ ಕಳಪೆ ಎನ್ನುವ ಮಟ್ಟವನ್ನು ತಲುಪಿತ್ತು. ಮಂಗಳವಾರ ಸಂಜೆ ಅಥವಾ ಬುಧವಾರದ ವೇಳೆಗೆ ಗಾಳಿಯ ಗುಣಮಟ್ಟವು ಗಂಭೀರ ಹಂತಕ್ಕೆ ತಲುಪುವ ಸಾಧ್ಯತೆ ಇದೆ. ಇನ್ನು ದೆಹಲಿ - ಎನ್‌ಸಿಆರ್‌ನಲ್ಲಿ ಕೆಲವೊಂದು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತಾದರೂ ಇದರಿಂದ ಲಾಭವಾಗಿಲ್ಲ ಎಂದು ಹೇಳಲಾಗಿದೆ.
ಏಕಕಾಲಕ್ಕೆ ಸಂಕಷ್ಟ: ಇನ್ನು ದೆಹಲಿಯಲ್ಲಿ ವಾಯುಮಾಲಿನ್ಯ ಕುಸಿಯುವುದಕ್ಕೆ ಮುಖ್ಯವಾಗಿ ದೀಪಾವಳಿ ಹಬ್ಬದಂದು ಪಟಾಕಿ ಹೊಡಿರುವುದು ಮುಖ್ಯ ಕಾರಣವಾಗಿದೆ. ಇದರೊಂದಿಗೆ ಕೃಷಿ ತ್ಯಾಜ್ಯವನ್ನು ಸುಡುವುದು ಹಾಗೂ ಕಸವನ್ನು ಸುಟ್ಟಿರುವುದು ಸಹ ವಾಯುಮಾಲಿನ್ಯ ಪ್ರಮಾಣ ಏಕಾಏಕಿ ಭಾರೀ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಇರುವಾಗಲೇ ದೆಹಲಿ ವಾಯುಮಾಲಿನ್ಯವು ವಿಷಯ ಸ್ಥಿತಿಗೆ ತಲುಪಿದೆ. ಪರಿಸ್ಥಿತಿ ಸುಧಾರಿಸಲು ಕನಿಷ್ಠ ಒಂದು ವಾರಕ್ಕೂ ಹೆಚ್ಚು ಸಮಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.












Click it and Unblock the Notifications