Breaking: ಭಾರತಕ್ಕೆ ಸೋಮವಾರ ಸೈಕ್ಲೋನ್ 'ಸಿತ್ರಾಂಗ್' ಭೀತಿ: ಕರ್ನಾಟಕಕ್ಕೆ ಮುನ್ಸೂಚನೆ ಏನು?
ಬೆಂಗಳೂರು, ಅಕ್ಟೋಬರ್ 23: ಬಂಗಾಳಕೊಲ್ಲಿಯ ಅಂಡಮಾನ್ ಪ್ರದೇಶದ ಸಮುದ್ರದಲ್ಲಿ ಕಳೆದ ಐದಾರು ದಿನದ ಹಿಂದೆ ಸೃಷ್ಟಿಯಾಗಿದ್ದ ಮೇಲ್ಮೈ ಸುಳಿಗಾಳಿ ವ್ಯಾಪಕವಾಗಿ ಬದಲಾಗಿದೆ. ಭಾನುವಾರ ರಾತ್ರಿ ವೇಳೆಗೆ ವಾಯುಭಾರ ಕುಸಿತವಾಗಿ ಬದಲಾಗಿ ಸೋಮವಾರ ಚಂಡಮಾರುತವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಸಣ್ಣ ಪ್ರಮಾಣದಲ್ಲಿದ್ದ ಬಂಗಾಳಕೊಲ್ಲಿಯಲ್ಲಿ ಸಮುದ್ರದಲ್ಲಿನ ಮೇಲ್ಮೈ ಸುಳಿಗಾಳಿಗೆ ಭಾನುವಾರ ಬೆಳಗ್ಗೆ ಮತ್ತಷ್ಟು ತೀವ್ರಗೊಂಡಿದೆ. ಅದು ಸದ್ಯ ಅಂಡಮಾನ್ ಸಮುದ್ರ ಭಾಗದ ಪಶ್ಚಿಮ ಕರಾವಳಿಯಲ್ಲಿ ನೆಲೆಗೊಂಡಿದೆ. ಅಲ್ಲಿಂದ ಅದು ಮುಂದೆ ಪಶ್ಚಿಮ ಹಾಗೂ ವಾಯುವ್ಯ ಮಾರ್ಗವಾಗಿ ಸಾಗಲಿದೆ.

ಹೀಗೆ ಸಾಗುವ ವಾಯುಭಾರ ಕುಸಿತವು ಸೋಮವಾರದ ಹೊತ್ತಿಗೆ ಅದು ವಾಯುಭಾರ ಕುಸಿತವಾಗಿ ಪರಿವರ್ತನೆಗೊಂಡು ಚಂಡಮಾರುತವಾಗಿ ಬದಲಾಗಲಿದೆ. ಇದಕ್ಕೆ 'ಸಿತ್ರಾಂಗ್ ಚಂಡಮಾರುತ' ಎಂದು ಹೆಸರಿಡಲಾಗಿದೆ ಎಂದು ಕರ್ನಾಟಕ ಹವಾಮಾನ ಕೇಂದ್ರದ ವಿಜ್ಞಾನಿ ಡಾ.ಪ್ರಸಾದ್ ಹೇಳಿದರು.
ಕರ್ನಾಟಕ 'ಸೈಕ್ಲೋನ್' ಭೀತಿಯಿಂದ ನಿರಾಳ
ಮಂಗಳವಾರದ ವೇಳೆಗೆ 'ಸಿತ್ರಾಂಗ್' ಚಂಡಮಾರುತವು ಬಾಂಗ್ಲಾದೇಶ ಕಾರಾವಳಿಯ ಎರಡು ದ್ವೀಪಗಳ ಮಧ್ಯೆ ಹಾದು ಹೋಗಲಿದೆ. ಈ ಚಂಡಮಾರುತ ದಿಕ್ಕಿನಲ್ಲಿ ಸಾಕಷ್ಟು ಬದಲಾವಣೆಗಳು ಕಂಡ ಬರುವ ಸಾಧ್ಯತೆ ಇದೆ. ಇದರಿಂದ ಕರ್ನಾಟಕದ ಮೇಲೆ ಪ್ರಭಾವವು ಆಗದು ಎಂದು ಹೇಳಲಾಗಿದೆ.
'ಸಿತ್ರಾಂಗ್' ಚಂಡಮಾರುತವು ಆಂಧ್ರಪ್ರದೇಶ ಇಲ್ಲವೇ ತಮಿಳುನಾಡು ರಾಜ್ಯದ ಕರಾವಳಿ ಸಮೀಪಿಸಿದ್ದರೆ ಕರ್ನಾಟಕದಲ್ಲಿ ಅತ್ಯಧಿಕ ಮಳೆ ನಿರೀಕ್ಷಿಸಬಹುದಿತ್ತು. ಆದರೆ ಬಾಂಗ್ಲಾದೇಶ ಮಾರ್ಗವಾಗಿ ಸಾಗುವುದರಿಂದ ಕರ್ನಾಟಕ ರಾಜ್ಯಕ್ಕೆ ಭಾರಿಮಳೆ, ಎಚ್ಚರಿಕೆಗಳ ಭೀತಿ ಇಲ್ಲ ಎಂದು ಅವರು ತಿಳಿಸಿದರು.

ರಾಜ್ಯಕ್ಕೆ 3ದಿನ ಹಗುರ ಮಳೆ ನಿರೀಕ್ಷೆ
ಕರ್ನಾಟಕದದಲ್ಲಿ ಮುಂದಿನ ಮೂರು ವಿವಿಧ ಭಾಗದ ಜಿಲ್ಲೆಗಳಲ್ಲಿ ಒಂದೆರಡು ಕಡೆ ಚದುರಿದಂತೆ ತುಂತುರು ಮಳೆ ಆಗಬಹುದು. ಕರ್ನಾಟಕ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬುಧವಾರದವರೆಗೆ ಮೂರು ದಿನ ಹಗುರ ಮಳೆ ಸಾಧ್ಯತೆ ಇದೆ. ಅದೇ ರೀತಿ ಉತ್ತರ ಒಳನಾಡಿನಲ್ಲಿ ಮಂಗಳವಾರದವರೆಗೆ ಉತ್ತರ ಒಳನಾಡಿನಲ್ಲಿ ಸಾಮಾನ್ಯ ಮಳೆ ನಿರೀಕ್ಷೆ ಇದ್ದು, ನಂತರದ ದಿನಗಳಲ್ಲಿ ಶುಷ್ಕ ವಾತಾವರಣ ನಿರ್ಮಾಣವಾಗಲಿದೆ. ಸದ್ಯ ದಕ್ಷಿಣ ಭಾರತದಾದ್ಯಂತ ನೈಋತ್ಯ ಮುಂಗಾರು ಮುಂದುವರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ.












Click it and Unblock the Notifications