• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋವಿಡ್ - 19 ಕರ್ತವ್ಯ; ವಿಶೇಷ ಅನುದಾನಕ್ಕೆ ಸಿಆರ್‌ಪಿಎಫ್‌ ಬೇಡಿಕೆ

|

ನವದೆಹಲಿ, ಮೇ 08 : ಕೋವಿಡ್ - 19 ಕರ್ತವ್ಯದಲ್ಲಿದ್ದಾಗ ಸಿಆರ್‌ಪಿಎಫ್ ಸಿಬ್ಬಂದಿ ಮೃತಪಟ್ಟರೆ 50 ಲಕ್ಷ ವಿಶೇಷ ಅನುದಾನ ನೀಡಬೇಕು ಎಂದು ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡಲಾಗಿದೆ. ವಿವಿಧ ರಾಜ್ಯಗಳಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ.

ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯು (ಸಿಆರ್‌ಪಿಎಫ್‌) ಗೃಹ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇಶದ ಬಹುದೊಡ್ಡ ಪಡೆಯಾಗಿದೆ. ಸಿಎಆರ್‌ಪಿಎಫ್‌ನಲ್ಲಿ ಸುಮಾರು 3.25 ಲಕ್ಷ ಸಿಬ್ಬಂದಿಗಳು ಇದ್ದಾರೆ.

ಬೆಳಗಾವಿ ಜೈಲಿನಲ್ಲಿದ್ದ ಸಿಆರ್ ಪಿಎಫ್ ಯೋಧ ಬಿಡುಗಡೆ

ದೇಶದ ವಿವಿಧ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಿಆರ್‌ಪಿಎಫ್‌ ಪಡೆಯನ್ನು ನಿಯೋಜನೆ ಮಾಡಲಾಗುತ್ತದೆ. ಈಗ ಕೊರೊನಾ ವಿರುದ್ಧದ ಹೋರಾಟದ ಸಂದರ್ಭದಲ್ಲಿಯೂ ಪಡೆಗಳನ್ನು ರಾಜ್ಯಗಳಲ್ಲಿ ನಿಯೋಜಿಸಲಾಗಿದೆ.

ಸಿಆರ್​ಪಿಎಫ್ ಕೋಬ್ರಾ ಕಮಾಂಡೋ ಬಂಧನ ಪ್ರಕರಣ: ತನಿಖೆಗೆ ಆದೇಶ

ಸಿಆರ್‌ಪಿಎಫ್ ಮುಖ್ಯಸ್ಥ ಎ. ಪಿ. ಮಹೇಶ್ವರಿ ಅವರು ಆರೋಗ್ಯ ಮತ್ತು ಸ್ವಚ್ಛತಾ ಕಾರ್ಮಿಕರಿಗೆ ಘೋಷಣೆ ಮಾಡಿದಂತೆ ಸಿಆರ್‌ಪಿಎಫ್ ಸಿಬ್ಬಂದಿಯೂ ಕೋವಿಡ್ - 19 ಕರ್ತವ್ಯದಲ್ಲಿರುವಾಗ ಮೃತಪಟ್ಟರೆ 50 ಲಕ್ಷ ಅನುದಾನ ನೀಡಬೇಕು ಎಂದು ಗೃಹ ಇಲಾಖೆಗೆ ಮನವಿ ಮಾಡಿದ್ದಾರೆ.

ದಾವಣಗೆರೆಯಲ್ಲಿ ಕೋವಿಡ್ ವಾರ್ಡ್‌ನಿಂದ ಪ್ರತಿಭಟನೆ

ವಿವಿಧ ರಾಜ್ಯಗಳಲ್ಲಿ ಸಿಆರ್‌ಪಿಎಫ್‌ ಪಡೆಗಳನ್ನು ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜನೆ ಮಾಡಲಾಗಿದೆ. ಅದರಲ್ಲಿಯೂ ಕೊರೊನಾ ಹಾಟ್ ಸ್ಪಾಟ್‌ಗಳಲ್ಲಿಯೂ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ. ಆದ್ದರಿಂದ, ಗೃಹ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.

ಗೃಹ ಇಲಾಖೆಯಡಿ ಬರುವ ವಿವಿಧ ಪಡೆಗಳ ಐವರು ಸಿಬ್ಬಂದಿಗಳು ಈಗಾಗಲೇ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಇಬ್ಬರು ಬಿಎಸ್‌ಎಫ್ ಸಿಬ್ಬಂದಿ, ಒಬ್ಬರು ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಸಿಎಐಎಸ್‌ಎಫ್‌ ಮತ್ತು ದೆಹಲಿ ಪೊಲೀಸ್‌ನ ಇಬ್ಬರು ಸಿಬ್ಬಂದಿಗಳು ಕೋವಿಡ್ - 19 ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದಾರೆ.

ಕೋವಿಡ್ - 19 ಕರ್ತವ್ಯ ನಿರ್ವಹಣೆ ಮಾಡುವಾಗ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ, ಅನಾರೋಗ್ಯ ಉಂಟಾದರೆ ವೈದ್ಯರನ್ನು ಭೇಟಿಯಾಗಿ ಎಂದು ಸಿಆರ್‌ಪಿಎಫ್ ಮುಖ್ಯಸ್ಥ ಎ. ಪಿ. ಮಹೇಶ್ವರಿ ಸಿಬ್ಬಂದಿಗಳಿಗೆ ಸಂದೇಶ ಕಳಿಸಿದ್ದಾರೆ.

English summary
The Central Reserve Police Force (CRPF) chief A.P.Maheshwarihas sent a proposal to the union home ministry and request for the special grant of Rs 50 lakh to personnel who die while on COVID-19 duty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X