ಸೋನಿಯಾ ಮಹತ್ವಾಕಾಂಕ್ಷೆಗೆ ರಾಹುಲ್ ಗಾಂಧಿ ಬಲಿ!
ನವದೆಹಲಿ, ಜ. 29- ಮುಂಬರುವ ಲೋಕಸಭಾ ಚುನಾವಣೆ ನಿಮಿತ್ತ ಕಾಂಗ್ರೆಸ್ ಪಕ್ಷದ ಹೊಣೆಹೊತ್ತಿರುವ ರಾಹುಲ್ ಗಾಂಧಿ ಅವರು ಮೊನ್ನೆ 'ಟೈಮ್ಸ್ ನೌ' ವಾಹಿನಿಗೆ ಸಂದರ್ಶನ ನೀಡಿದ್ದೇ ತಡ ಸಂದರ್ಶನದ ಬಗ್ಗೆ ಪುಂಖಾನುಪುಂಖ ಚರ್ಚೆಗಳು / ಲೇಖನಗಳು ಹರಿದುಬರುತ್ತಿವೆ.
ಅನೇಕ ಅಮ್ಮಂದಿರು ತಮ್ಮ ಮಕ್ಕಳಿಗಾಗಿ ಎಲ್ಲವನ್ನೂ ಮಾಡುತ್ತಾರೆ. ಆದರೆ ಅವರನ್ನು ಅವರ ಪಾಡಿಗೆ ಬೆಳೆಯಲು ಬಿಡುವುದಿಲ್ಲ!' ಎಂಬ ಮಾತು ಆಗಾಗ್ಗೆ ಕೇಳಿಬರುತ್ತದೆ. ಈ ವಿಷಯದಲ್ಲಿ ಭಾರತದ ದೌರ್ಭಾಗ್ಯವೆಂದರೆ ವಂಶಪಾರಂಪರ್ಯ ಮಾದರಿ ಅನುಸರಿಸುವುದು. ಇದು ಶತ ಶತಮಾನಗಳಿಂದ ಆಚರಣೆಯಲ್ಲಿದೆ. ದುರ್ದೈವವೆಂದರೆ ಇದು ಎಲ್ಲ ಕ್ಷೇತ್ರಗಳಲ್ಲೂ ಕಂಡುಬರುತ್ತದೆ.

ಭಾರತದಲ್ಲಿ ಬಹಳಷ್ಟು ಹೀಗೆ ವಂಶಪಾರಂಪರ್ಯದ ಬಳುವಳಿಯಾಗಿಯೇ ಬಂದಂತಹವು; ಅದು ದುಡಿದು ಗಳಿಸಿರುವುದಲ್ಲ. ಮೊನ್ನೆ AICC ಸಮಾವೇಶದಲ್ಲಿ ರಾಹುಲ್ ಗಾಂಧಿ ಅವರು ಅಡುಗೆ ಸಿಲಿಂಡರ್ ಸಂಖ್ಯೆಗಳನ್ನು ಹೆಚ್ಚಿಸಬೇಕು ಎಂದು ದಿಢಿಗ್ಗನೇ ಹೇಳಿದರಲ್ಲಾ ಆಗ ಅವರ ಹೆತ್ತಮ್ಮ ಸೋನಿಯಾ ಗಾಂಧಿ ಅವರು ಮುಗಳ್ನಕ್ಕಿದ್ದು ಇದನ್ನೇ ಸಾದರಪಡಿಸುವಂತಿತ್ತು. ಇದಕ್ಕೆ ಅಲ್ಲಿ ನೆರೆದಿದ್ದವರು ಭಟ್ಟಂಗಿಗಳ ರೀತಿ ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದು ಇದನ್ನು ಸಾಬೀತುಪಡಿಸಿತು.
ರಾಹುಲ್ ಗಾಂಧಿ ಸಂದರ್ಶನ: ಅಪ್ಪ-ಅಮ್ಮಂದಿರಿಗೆ ಪಾಠ
'ಟೈಮ್ಸ್ ನೌ' ವಾಹಿನಿಗೆ ಸಂದರ್ಶನ ನೀಡಿ ರಾ.ಗಾ. ನೀಡಿರುವ ಸಂದರ್ಶನ ನಿಜಕ್ಕೂ ಸರಿಪಡಿಸಲಾಗದ ದುರಂತವೇ ಸರಿ. ಸಂದರ್ಶನ ನೋಡಿದ ಜನಕ್ಕೆ ಸ್ಪಷ್ಟವಾದ ಒಂದು ಸಂಗತಿಯೆಂದರೆ ರಾಹುಲ್ ಗಾಂಧಿ ಅನರ್ಹ ಜಾಗದಲ್ಲಿ ಅನರ್ಹ ವ್ಯಕ್ತಿ ಇದ್ದಾರೆ ಎಂಬುದು. [ರಾಹುಲ್ ಗಾಂಧಿ ಎಂ. ಫಿಲ್ ಗುಟ್ಟು ರಟ್ಟು!]
'ಅಮ್ಮಂದಿರೆಲ್ಲಾ ತಮ್ಮ ಪುತ್ರರು ರಾಷ್ಟ್ರಪತಿಯಾಗಲಿ ಎಂದು ಬಯಸುತ್ತಾರೆ. ಆದರೆ ಅದಕ್ಕೂ ಮುನ್ನ ರಾಜಕಾರಣಿಯಾಗಲಿ ಎಂದು ಬಯಸುವುದಿಲ್ಲ' ಎಂದು ಸತ್ಯವನ್ನು ಹೊರಹಾಕಿದ್ದು ಜಾನ್ ಎಫ್ ಕೆನಡಿ. [ಬಿಜೆಪಿ ಮೋದಿಯ ಭೀತಿ ನಿಮ್ಮನ್ನು ಆವರಿಸಿದೆಯಾ?]
RaGa ನಿಜಕ್ಕೂ ಸಂಪೂರ್ಣವಾಗಿ ಸಮರ್ಥನಲ್ಲ. ಆತನಿಗೆ ಅದು ಇಷ್ಟವೂ ಇದ್ದಂತಿಲ್ಲ. ಅವರು ನೀಡಿದ ಉತ್ತರಗಳು/ ಪ್ರತಿಕ್ರಿಯೆಗಳು ಗಣನೆಗೆ ತೆಗೆದುಕೊಳ್ಳುವಂತಹುದೇ ಅಲ್ಲ. ಅವರನ್ನು ಅಶಕ್ತಗೊಳಿಸಿದ್ದು ಯುಪಿಎ-2ರ ಪ್ರದರ್ಶನ, ಹಗರಣಗಳು, ಮೈತ್ರಿಗಳು, ಗಲಭೆಗಳು, ಬರೀ ಇಂತಹುವೇ! ಅಸಲಿಗೆ ಅತಿ ಜಾಣರಿಗೂ ಅದನ್ನು ಸಮರ್ಥಿಸಿಕೊಳ್ಳಲು ಆಗದು. 1.2 ಶತಕೋಟಿನ ಜನರನ್ನು ಬೆನ್ನಿಗಿಟ್ಟುಕೊಂಡು ದೇಶದ ಪ್ರಧಾನಿಯಾಗುವಂತಹ ವ್ಯಕ್ತಿಯಿಂದ ಇಂತಹದುನ್ನು ನಿರೀಕ್ಷಿಸಿರಲಿಲ್ಲ. [ಅರ್ನಾಬ್-ರಾಹುಲ್ ಸಕತ್ ಕಾಮಿಡಿ ಶೋ ಗುರು]
ರಾಹುಲ್ ಗಾಂಧಿ ನಿಜಕ್ಕೂ ತನಗೆ ಅರ್ಹವಲ್ಲದ ಸ್ಥಾನದಲ್ಲಿ ಕುಳಿತಿದ್ದಾರೆ. ಇದಕ್ಕೆ ಅವರ ತಾಯಿ ಸೋನಿಯಾ ಗಾಂಧಿಯೇ ಕಾರಣಕರ್ತರು. ರಾ.ಗಾ., ಬಗ್ಗೆ ನಿಜಕ್ಕೂ ಅನುಕಂಪ ಮೂಡುತ್ತಿದೆ. ಸೋನಿಯಾ ಗಾಂಧಿಯ ಮಹತ್ವಾಕಾಂಕ್ಷೆಗೆ ರಾಹುಲ್ ಬಲಿಯಾಗಿದ್ದಾರೆ. ನಮ್ಮ ಮಕ್ಕಳೂ ಹೀಗಾಗಬಾರದಲ್ಲವೇ? ಒಟ್ಟಿನಲ್ಲಿ ಇದರಿಂದ ಎಲ್ಲ ಅಮ್ಮಂದಿರಿಗೂ ಉತ್ತಮ ಸಂದೇಶವೇ ರವಾನೆಯಾಗಿದೆ.












Click it and Unblock the Notifications