ಪ್ರವಾಸಿಗರ ಆಕರ್ಷಣೆಯ ಕೇಂದ್ರವಾದ ಛತ್ತೀಸ್‌ಗಢದ ಕೌಸಲ್ಯ ಮಂದಿರ: ಬಿಜೆಪಿಗೆ ತಲೆನೋವು!
ರಾಯಪುರ್, ಮೇ. 22: ಇತ್ತ ರಾಮ ಮಂದಿರದ ಭಜನೆ ಮಾಡುತ್ತಾ ಅಧಿಕಾರಕ್ಕೆ ಬಂದ ಬಿಜೆಪಿ ಇನ್ನೂ ರಾಮಮಂದಿರ ನಿರ್ಮಾಣ ಕಾರ್ಯ ನಡೆಸುತ್ತಲೇ ಇದೆ. ಇದರ ನಡುವೆಯೇ ಛತ್ತಿಸ್‌ಗಢದಲ್ಲಿ ಕಾಂಗ್ರೆಸ್ ಸರ್ಕಾರ ರಾಮನ ತಾಯಿ ಕೌಸಲ್ಯ ಮಾತೆಯ ಮಂದಿರ ನಿರ್ಮಾಣ ಮಾಡಿದ್ದು, ಈಗ ದೇಶ ಪ್ರಮುಖ ಪ್ರವಾಸಿ ಸ್ಥಳಗಳ ಪಟ್ಟಿಗೆ ಸೇರಿದೆ.
ಸುಂದರ ಸೇತುವೆ, 65 ಅಡಿ ರಾಮನ ಪ್ರತಿಮೆ, ಕಾರಂಜಿಗಳು ಮತ್ತು ಮಿನುಗುವ ದೀಪಗಳು ಛತ್ತೀಸ್‌ಗಢದ ಕೌಶಲ್ಯ ಮಾತಾ ಮಂದಿರವನ್ನು ಭಾರತದ ಧಾರ್ಮಿಕ ಪ್ರವಾಸಿ ನಕ್ಷೆಯಲ್ಲಿ ಪ್ರಮುಖ ಕ್ಷೇತ್ರವನ್ನಾಗಿಸಿದೆ. ರಾಯ್‌ಪುರದ ಹೊರವಲಯದಲ್ಲಿರುವ ಚಂದ್‌ಖುರಿ ಗ್ರಾಮದಲ್ಲಿರುವ ದ್ವೀಪ ದೇವಾಲಯವು ಈಗ ಜನಸಂದಣಿಯ ಪ್ರವಾಸಿ ತಾಣವಾಗಿ ಬದಲಾಗಿದೆ.

ಕೆಲವು ಸ್ಥಳೀಯ ನಿವಾಸಿಗಳು ಅಥವಾ ಪ್ರವಾಸಿಗರು ಹಿಂದೂ ದೇವರ ತಾಯಿ ಕೌಸಲ್ಯ ಮಾತೆಗೆ ಸಮರ್ಪಿತವಾಗಿರುವ ವಿಶ್ವದ ಏಕೈಕ ದೇವಾಲಯ ಎಂದು ಹೇಳುತ್ತಾರೆ. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ರಾಮ್ ವಾನ್ ಗಮನ್ ಪರಿಪತ್ ಕಾರಿಡಾರ್‌ನ ಭಾಗವಾಗಿ ಈ ದೇವಾಲಯ ನಿರ್ಮಿಸಲಾಗಿದೆ ಎಂದು ತಿಳಿಸು ಬಂದಿದೆ. ಈ ಯೋಜನೆಯು ರಾಮ ತನ್ನ ಗಡಿಪಾರು ಸಮಯದಲ್ಲಿ ನೆಲೆಯೂರಿದ್ದ ಎಲ್ಲಾ ಸ್ಥಳಗಳನ್ನು ಸಂಪರ್ಕಿಸಲಿದೆ.
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಹಿಂದೂ ಸಂಕೇತದ ರಾಜಕೀಯದಲ್ಲಿ ಕೌಸಲ್ಯ ಮಂದಿರವು ಒಂದು ಪ್ರಮುಖ ಮೈಲಿಗಲ್ಲಾಗಿದೆ. ಈ 'ಹಿಂದೂ ರಾಜಕೀಯ' ಹಸುವಿನ ಸಗಣಿ ಮಾರಾಟ, ಹಸುವಿನ ಸಗಣಿಯಿಂದ ಮಾಡಿದ ಬಜೆಟ್ ಬ್ರೀಫ್‌ಕೇಸ್ ಮತ್ತು ಗೋಮೂತ್ರ ಉತ್ಪನ್ನಗಳ ಪ್ರಚಾರದೊಂದಿಗೆ ಪ್ರಾರಂಭವಾಗಿದೆ. ಅವರು ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ಹಸುವಿನ ಸಗಣಿಯಿಂದ ಪಡೆದ ವಸ್ತುಗಳನ್ನು ಬಳಸಿ ಪೇಂಟಿಂಗ್ ಮಾಡುವುದನ್ನು ಕಡ್ಡಾಯಗೊಳಿಸಿದ್ದಾರೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೇ, ಅವರು ಜುಲೈ 2020 ರಲ್ಲಿ ಅಯೋಧ್ಯೆಯ ರಾಮಮಂದಿರದ ಪ್ರತಿಷ್ಠಾಪನಾ ಸಮಾರಂಭದ ಕೆಲವೇ ದಿನಗಳ ಮೊದಲು ದೇವಾಲಯದ ನವೀಕರಣ ಯೋಜನೆಯನ್ನು ಪ್ರಾರಂಭಿಸಿದರು. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮುನ್ನಾ ಸಾಕಷ್ಟು ಕೆಲಸವನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ.
ಆದರೆ ಕೌಸಲ್ಯ ಮಂದಿರ ಅಯೋಧ್ಯೆ ಅಲ್ಲ. ಇದರ ಅಭಿವೃದ್ಧಿಗೆ ಬೇಡಿಕೆ ಬಂದಿದ್ದು ಆರ್‌ಎಸ್‌ಎಸ್, ವಿಎಚ್‌ಪಿ ಅಥವಾ ಬಿಜೆಪಿಯಿಂದಲ್ಲ. ಈ ಮಂದಿರವನ್ನು ಅಭಿವೃದ್ಧಿ ಮಾಡಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹಾಕಿದ್ದು, ಬೌದ್ಧಿಕ ಹಿಂದೂ ವಲಯ. ಕಾಂಗ್ರೆಸ್ ಅದನ್ನು ಪ್ರಚಾರ ಮಾಡುತ್ತಿಲ್ಲ ಅಥವಾ ಮಾಧ್ಯಮ ಪ್ರಸಾರಕ್ಕೆ ಒತ್ತಾಯಿಸುತ್ತಿಲ್ಲ. ದೇವಾಲಯದ ಕಾರಿಡಾರ್‌ಗಳಿಗೆ ಯೋಜನೆಗೆ ಬಿಜೆಪಿಯು ಮೌನ ವಹಿಸಿದೆ.
"ಕೌಸಲ್ಯ ಮಂದಿರವನ್ನು ನಾವು ಅಭಿವೃದ್ಧಿಪಡಿಸುತ್ತಿರುವುದು ಅವರಿಗೆ ( ಬಿಜೆಪಿ) ಸಹಿಸಲು ಆಗುತ್ತಿಲ್ಲ. ಕೌಸಲ್ಯ (ರಾಮನ ತಾಯಿ) ಇಲ್ಲಿ ಜನಿಸಿದ್ದಾರೆಯೇ ಎಂದು ಸಾಬೀತುಪಡಿಸಲು ನಮ್ಮನ್ನು ಕೇಳುತ್ತಾರೆ" ಎಂದು ಏಪ್ರಿಲ್‌ನಲ್ಲಿ 'ಕೌಶಲ್ಯ ಮಾತಾ ಮಹೋತ್ಸವ' ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕಿಡಿಕಾರಿದ್ದರು.
ಕಳೆದ 15 ವರ್ಷಗಳಿಂದ ಛತ್ತೀಸ್‌ಗಢದ ರಾಮ ಕಾರಿಡಾರ್ ಅಭಿವೃದ್ಧಿಗೆ ಬಿಜೆಪಿ ಏನೂ ಮಾಡಿಲ್ಲ. ನಾವು ಈಗ ರಾಮ್ ಕಾರಿಡಾರ್‌ನಲ್ಲಿ ಕೆಲಸ ಮಾಡುತ್ತಿರುವುದು ಅವರಿಗೆ ಇಷ್ಟವಿಲ್ಲ ಎಂದು ಆರೋಪಿಸಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೂಪೇಶ್ ಬಘೇಲ್ ಸಾರ್ವಜನಿಕವಾಗಿ ನಿಂದಿಸಿದ್ದರು ಮತ್ತು ಸರ್ಸಂಘಚಾಲಕ್ ಹೊಸದಾಗಿ ಅಭಿವೃದ್ಧಿಪಡಿಸಿದ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದರು. ಅವರ ಹೇಳಿಕೆ ಬೆನ್ನಲ್ಲೇ ಅದೇ ತಿಂಗಳು ಮೋಹನ್ ಭಾಗವತ್ ಕೌಸಲ್ಯ ಮಂದಿರಕ್ಕೆ ಭೇಟಿ ನೀಡಿದ್ದರು.












Click it and Unblock the Notifications