Chardham: ಇಂದಿನಿಂದ ಭಕ್ತರಿಗೆ ಬದರಿನಾಥನ ದರ್ಶನಕ್ಕೆ ಅವಕಾಶ
ಕೇದಾರನಾಥ ಧಾಮದ ನಂತರ ಇದೀಗ ಬದರಿನಾಥ ಧಾಮದ ಬಾಗಿಲು ಕೂಡ ತೆರೆಯಲಾಗಿದೆ. ಇಂದು ಬೆಳಗ್ಗೆ ಸೇನಾ ಬ್ಯಾಂಡ್‌ನ ಸುಶ್ರಾವ್ಯ ನಾದದ ನಡುವೆ ಬದರಿನಾಥ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಬದರಿನಾಥನ ದರ್ಶನ ಪಡೆಯಲು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಬುಧವಾರ ಕೇದಾರನಾಥ ಧಾಮದ ಬಾಗಿಲು ಭಕ್ತರಿಗಾಗಿ ತೆರೆಯಲಾಯಿತು.
ಭಾರೀ ಹಿಮಪಾತ ಮತ್ತು ಹರ್ಷೋದ್ಗಾರಗಳ ನಡುವೆ ಭಕ್ತರಿಗಾಗಿ ಬದರಿನಾಥ ದೇವಸ್ಥಾನದ ಬಾಗಿಲನ್ನು ಇಂದು ತೆರೆಯಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಪ್ರಧಾನಿ ಹೆಸರಿನಲ್ಲಿ ಮೊದಲ ಪೂಜೆ, ಆರತಿ ನಡೆಯಿತು. ಈ ಸಂದರ್ಭದಲ್ಲಿ ITBP ಮತ್ತು ಗರ್ವಾಲ್ ಸ್ಕೌಟ್ಸ್ ತಂಡದವರು ಭಾಗವಹಿಸಿದ್ದರು. ಜೊತೆಗೆ ಬದರಿನಾಥ ಧಾಮದ ಬಾಗಿಲು ತೆರೆಯುವ ಮುನ್ನವೇ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದರು ಕೂಡ ದೇವಸ್ಥಾನದಲ್ಲಿ ಉಪಸ್ಥಿತರಿದ್ದರು.

ಇಂದು ದೇವಾಲಯವನ್ನು 15 ಟನ್ ಹೂವಿನಿಂದ ಅಲಂಕರಿಸಲಾಗಿತ್ತು. ದೇವಸ್ಥಾನದ ಅಲಂಕಾರ ಎಲ್ಲರ ಮನ ಸೂರೆಗೊಂಡಿದೆ. ಭಗವಾನ್ ವಿಷ್ಣು 12 ತಿಂಗಳುಗಳ ಕಾಲ ನೆಲೆಸಿರುವ ಈ ಸ್ಥಳಕ್ಕೆ ಎಂಟನೇ ವೈಕುಂಠಧಾಮ ಎಂದು ಕರೆಯಲಾಗುತ್ತದೆ. ಜೊತೆಗೆ ಇದನ್ನು ಬದರಿನಾಥ್ ಎಂದು ಕೂಡ ಕರೆಯಲಾಗುತ್ತದೆ. ನಂಬಿಕೆಯ ಪ್ರಕಾರ, ವಿಷ್ಣು 6 ತಿಂಗಳ ಕಾಲ ಇಲ್ಲಿ ವಿಶ್ರಾಂತಿ ಪಡೆಯುತ್ತಾನೆ ಮತ್ತು ಭಕ್ತರಿಗೆ 6 ತಿಂಗಳುಗಳ ಕಾಲ ದರ್ಶನ ನೀಡುತ್ತಾನೆ.
ಇನ್ನೊಂದು ನಂಬಿಕೆಯ ಪ್ರಕಾರ, 6 ತಿಂಗಳು ಮನುಷ್ಯರು ವಿಷ್ಣುವನ್ನು ಪೂಜಿಸುತ್ತಾರೆ. ಇನ್ನೂ 6 ತಿಂಗಳು ದೇವತೆಗಳು ವಿಷ್ಣುವನ್ನು ಪೂಜಿಸುತ್ತಾರೆ. ಈ ಸಮಯದಲ್ಲಿ ದವರ್ಷಿ ನಾರದರು ಪ್ರಧಾನ ಅರ್ಚಕರ ಪಾತ್ರವನ್ನು ನಿರ್ವಹಿಸುತ್ತಾರೆ. ಬದರಿನಾಥ ಧಾಮದ ಬಾಗಿಲು ತೆರೆಯುವುದರೊಂದಿಗೆ ಉತ್ತರಾಖಂಡದಲ್ಲಿ ಚಾರ್ ಧಾಮದ ಪಯಣ ಆರಂಭವಾಗಿದೆ.
#WATCH | The portals of Badrinath Dham opened amid melodious tunes of the Army band and chants of Jai Badri Vishal by the devotees. pic.twitter.com/hoqrP2Tpyq
— ANI (@ANI) April 27, 2023
ಏಪ್ರಿಲ್ 22 ರಂದು ಭಕ್ತರಿಗಾಗಿ ಗಂಗೋತ್ರಿ-ಯಮುನೋತ್ರಿ ಧಾಮದ ಬಾಗಿಲು ಈಗಾಗಲೇ ತೆರೆಯಲಾಗಿದೆ. ಆದರೆ ಹವಾಮಾನ ವೈಪರೀತ್ಯದಿಂದಾಗಿ ಜನರು ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಚಾರ್‌ಧಾಮ್‌ನಲ್ಲಿ ಹೆಚ್ಚು ಹಿಮಪಾತವಾಗುತ್ತಿದ್ದು ಭಕ್ತರ ಆರೋಗ್ಯದ ಬಗ್ಗೆ ಆತಂಕ ಹೆಚ್ಚಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಮಾರ್ಗಮಧ್ಯೆ ವೈದ್ಯಕೀಯ ವ್ಯವಸ್ಥೆ, ನೀರು, ಊಟ, ಶೌಚಾಲಯ ಹಾಗೂ ತಂಗುತಾಣಗಳ ವ್ಯವಸ್ಥೆಗಳನ್ನು ಮಾಡಲಾಗಿದೆ. ಜೊತೆಗೆ ನಡೆಯಲು ಸಾಧ್ಯವಾಗದ ಭಕ್ತರಿಗೂ ಕುದುರೆ, ಹೇಸರಗತ್ತೆ ಇತರ ವ್ಯವಸ್ಥೆಯನ್ನು ಮಾಡಲಾಗಿದೆ.

ಹವಾಮಾನ ವೈಪರೀತ್ಯದಿಂದಾಗಿ ಕೇದಾರನಾಥ ಧಾಮಕ್ಕೆ ತೆರಳುವ ಯಾತ್ರಾರ್ಥಿಗಳಿಗಾಗಿ ತೆಹ್ರಿ ಪೊಲೀಸರು ವಿಶೇಷ ನಿಗಾ ವಹಿಸಿದ್ದಾರೆ. ಅಲ್ಲದೆ, ಪ್ರಯಾಣಿಕರಿಗೆ ರಿಷಿಕೇಶದಲ್ಲಿಯೇ ಇರುವಂತೆ ತಿಳಿಸಲಾಗಿದೆ. ಕೇದಾರನಾಥ ಧಾಮದ ಬಾಗಿಲು ತೆರೆದ ನಂತರ 10,000 ಜನರು ಇಲ್ಲಿಗೆ ತಲುಪಿದ್ದಾರೆ ಎಂದು ಹೇಳಲಾಗಿದೆ.
ಯಮುನೋತ್ರಿ: ಯಮುನಾ ನದಿಯ ಮೂಲ ಮತ್ತು ಯಮುನಾ ದೇವಿಯ ಸ್ಥಾನವಾಗಿದೆ, ಗಂಗೋತ್ರಿ: ಗಂಗೆಯ ಮೂಲ ಮತ್ತು ಗಂಗಾ ಮಾತೆಯ ಸ್ಥಾನವಾಗಿದೆ, ಕೇದಾರನಾಥ: ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಶಿವನ ಒಂದು ರೂಪವನ್ನು ಇಲ್ಲಿ ಬೆಳಕಿನ ರೂಪದಲ್ಲಿ ಪೂಜಿಸಲಾಗುತ್ತದೆ. ಜೊತೆಗೆ ಬದರಿನಾಥ: ಭಗವಾನ್ ವಿಷ್ಣುವಿನ ಸ್ಥಾನವಾಗಿದೆ. ಈ ನಾಲ್ಕು ವಿಶೇಷ ಸ್ಥಾನಗಳಿಮದಾಗಿ ಇದಕ್ಕೆ ಚಾರ್‌ಧಾಮ್ ಎಂದು ಕರೆಯಲಾಗುತ್ತದೆ.

ಚಾರ್ಧಾಮ್ ಯಾತ್ರೆ ಮಹತ್ವ
ಈ ತೀರ್ಥಯಾತ್ರೆಯು ಧಾರ್ಮಿಕವಾಗಿ ಒಲವು ಹೊಂದಿದೆ. ಹಿಂದೂ ಧರ್ಮದಲ್ಲಿ, ಚಾರ್ಧಾಮ್ ಯಾತ್ರೆಯನ್ನು ಕೈಗೊಳ್ಳುವ ಮೂಲಕ ಪ್ರಸ್ತುತ ಜೀವನದಲ್ಲಿ ಮಾತ್ರವಲ್ಲದೆ ಹಿಂದಿನ ಜನ್ಮದ ಪಾಪಗಳ ಹೊರೆಯಿಂದ ಮುಕ್ತರಾಗುತ್ತಾರೆ ಎಂದು ನಂಬಲಾಗಿದೆ. ಈ ಪಾಪ ವಿಮೋಚನೆಯು ಒಬ್ಬನನ್ನು ಕರ್ಮ ಮತ್ತು ಜನ್ಮ ಮತ್ತು ಪುನರ್ಜನ್ಮದ ಚಕ್ರದಿಂದ ಮುಕ್ತಗೊಳಿಸುತ್ತದೆ, ಮೋಕ್ಷ ಅಥವಾ ಮೋಕ್ಷದ ಕಡೆಗೆ ಕರೆದೊಯ್ಯುತ್ತದೆ ಎಂದು ನಂಬಲಾಗಿದೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications