Char Dham Yatra: ಉತ್ತರಾಖಂಡ್‌ನ ಚಮೋಲಿ ಬಳಿ ಗುಡ್ಡ ಕುಸಿತ: ಬದರಿನಾಥ್ ಹೆದ್ದಾರಿ ಬಂದ್
ಉತ್ತರಾಖಂಡದ ಚಮೋಲಿ ಬಳಿ ಗುಡ್ಡ ಕುಸಿತದಿಂದಾಗಿ ಬದರಿನಾಥ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಇಂದು ಬಂದ್ ಮಾಡಲಾಗಿದೆ. ಕೊತ್ವಾಲಿ ಚಮೋಲಿ ಪ್ರದೇಶದ ಬಾಜ್‌ಪುರದಲ್ಲಿ ಗುಡ್ಡದಿಂದ ಕಲ್ಲು, ಮಣ್ಣು ಬಿದ್ದು ಹೆದ್ದಾರಿಯನ್ನು ನಿರ್ಬಂಧಿಸಿವೆ. ಬೆಟ್ಟದಿಂದ ನಿರಂತರವಾಗಿ ಕಲ್ಲು ಮಣ್ಣು ರಸ್ತೆ ಮೇಲೆ ಬೀಳುತ್ತಿರುವುದರಿಂದ ಬದರಿನಾಥ್ ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ಚಮೋಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇದಾರನಾಥ ಮತ್ತು ಬದರಿನಾಥದಲ್ಲಿ ಹಿಮಪಾತ ಮತ್ತು ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಹಲವಾರು ಸಮಸ್ಯೆಗಳು ಉಂಟಾಗಿವೆ. ಹೀಗಾಗಿ ತಡರಾತ್ರಿ ಚಾರ್ ಧಾಮ್ ಯಾತ್ರಿಗಳನ್ನು ಶ್ರೀನಗರದಲ್ಲಿ ಪೊಲೀಸರು ತಡೆದಿದ್ದಾರೆ. ಮಾತ್ರವಲ್ಲದೆ ಹತ್ತಿರದ ನಗರಗಳಲ್ಲಿ ಉಳಿಯಲು ಪ್ರಯಾಣಿಕರಿಗೆ ಮನವಿ ಕೂಡ ಮಾಡಿದ್ದಾರೆ.

ಅಧಿಕಾರಿಗಳ ಪ್ರಕಾರ, ಉತ್ತರಾಖಂಡದ ಚಾರ್ ಧಾಮ್ ಯಾತ್ರಿಗಳನ್ನು ನಿಲ್ಲಿಸುವ ಬದರಿನಾಥ್ ಬಸ್ ನಿಲ್ದಾಣದ ಬಳಿ ಚೆಕ್ ಪಾಯಿಂಟ್‌ಗಳನ್ನು ನಿರ್ಮಿಸಲಾಗಿದೆ. ಕೇದಾರನಾಥ್ ಹಾಗೂ ಬದರಿನಾಥದಲ್ಲಿ ಮಳೆ ಹಾಗೂ ಭಾರೀ ಹಿಮಪಾತದಿಂದಾಗಿ ಉತ್ತರಾಖಂಡದ ಶ್ರೀನಗರ ಗಡ್ವಾಲ್‌ನಲ್ಲಿ ಮತ್ತು ಬದರಿನಾಥ್ ಬಸ್ ನಿಲ್ದಾಣದ ಬಳಿ ಚಾರ್ ಧಾಮ್ ಯಾತ್ರಿಗಳನ್ನು ಚೆಕ್ ಪಾಯಿಂಟ್‌ಗಳಲ್ಲಿ ಪೊಲೀಸರು ನಿಲ್ಲಿಸಲಾಗುತ್ತಿದ್ದಾರೆ.
कोतवाली चमोली क्षेत्रान्तर्गत बाजपुर चाडा में पहाड़ी से मलबा आने के कारण बद्रीनाथ हाईवे बन्द हो गया है। pic.twitter.com/Plw8dEXQ5i
— Chamoli Police Uttarakhand (@chamolipolice) April 30, 2023
ರಾತ್ರಿ ತಂಗಲು ಆನ್‌ಲೈನ್ ಬುಕಿಂಗ್ ಹೊಂದಿರುವವರಿಗೆ ರುದ್ರಪ್ರಯಾಗದ ಕಡೆಗೆ ಹೋಗಲು ಅನುಮತಿಸಲಾಗುತ್ತಿದೆ. ಆದರೆ ಪಾಸ್‌ಗಳನ್ನು ಕಾಯ್ದಿರಿಸದ ಪ್ರಯಾಣಿಕರಿಗೆ ಶ್ರೀನಗರದಲ್ಲಿ ಮಾತ್ರ ಉಳಿಯಲು ಮನವಿ ಮಾಡಲಾಗುತ್ತಿದೆ ಎಂದು ಎಸ್‌ಎಚ್‌ಒ ಶ್ರೀನಗರ ರವಿ ಸೈನಿ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

ಶ್ರೀನಗರದಲ್ಲಿ ತಂಗಲು ಸಾಕಷ್ಟು ವ್ಯವಸ್ಥೆಗಳಿದ್ದು, ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ರವಿ ಸೈನಿ ಹೇಳಿದ್ದಾರೆ. "ಹವಾಮಾನ ಸ್ಪಷ್ಟವಾದಾಗ ತಮ್ಮ ಪ್ರಯಾಣವನ್ನು ಮುಂದುವರಿಸಲು ಪ್ರಯಾಣಿಕರಿಗೆ ಮನವಿ ಮಾಡಲಾಗುತ್ತಿದೆ" ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶುಕ್ರವಾರ ಭಕ್ತರಿಗೆ COVID-19 ಸೇರಿದಂತೆ ಎಲ್ಲಾ ವೈದ್ಯಕೀಯ ಪರೀಕ್ಷೆಗಳ ನಂತರವೇ ತೀರ್ಥಯಾತ್ರೆಗೆ ಯೋಜಿಸಲು ಸಲಹೆ ನೀಡಿದರು. ರಾಜ್ಯ ಸರ್ಕಾರವು ವಿವಿಧ ಭಾಷೆಗಳಲ್ಲಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಅನ್ನು ಹಾಕಿದೆ ಮತ್ತು ಈ ವರ್ಷ ಯಾತ್ರೆ ಕೈಗೊಳ್ಳುವವರು ಅದನ್ನು ಪಾಲಿಸಬೇಕು ಎಂದು ಸಿಎಂ ಧಾಮಿ ಹೇಳಿದರು.
ದೇಶದ ನಾಲ್ಕು ಪವಿತ್ರ ಕ್ಷೇತ್ರಗಳಾದ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ ಧಾಮದ ಪೋರ್ಟಲ್‌ಗಳನ್ನು ವಿಧ್ಯುಕ್ತವಾಗಿ ತೆರೆಯುವುದರೊಂದಿಗೆ, ಚಾರ್ ಧಾಮ್ ಯಾತ್ರೆಯು ಅಧಿಕೃತವಾಗಿ ಪ್ರಾರಂಭವಾಗಿದೆ. ಯಾತ್ರೆಯ ಪ್ರಾರಂಭದೊಂದಿಗೆ, ಯಾತ್ರಾರ್ಥಿಗಳಿಗೆ ಎಲ್ಲಾ ನೆರವು ನೀಡಲು ಮತ್ತು ಪವಿತ್ರ ಸ್ಥಳಗಳನ್ನು ತಲುಪಲು ಸಹಾಯ ಮಾಡಲು ರಾಜ್ಯ ಪೊಲೀಸರು ಕ್ರಮಗಳನ್ನು ಸಜ್ಜುಗೊಳಿಸಿದ್ದಾರೆ.

ಆರ್ಮಿ ಬ್ಯಾಂಡ್‌ನ ಶ್ಲೋಕಗಳು (ಸ್ತೋತ್ರಗಳು) ಮತ್ತು ಸುಮಧುರ ರಾಗಗಳ ನಡುವೆ ಏಪ್ರಿಲ್ 27 ರಂದು ಯಾತ್ರಾರ್ಥಿಗಳಿಗೆ ಬದರಿನಾಥ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಈ ವೇಳೆ ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ದೇವಾಲಯವನ್ನು 15 ಕ್ವಿಂಟಾಲ್ ಹೂವುಗಳಿಂದ ಅಲಂಕರಿಸಲಾಗಿತ್ತು.
ಉತ್ತರಾಖಂಡ ಸರ್ಕಾರ ವಿಶೇಷ ಸಿದ್ಧತೆ
ಉತ್ತರಾಖಂಡ ಸರ್ಕಾರ ಚಾರದದಧಾಮ್‌ನಲ್ಲಿ ವಿಶೇಷ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪ್ರಯಾಣಿಕರು ಯಾವುದೇ ರೀತಿಯ ಸಮಸ್ಯೆ ಎದುರಿಸದಂತೆ ಯೋಜನೆ ಮಾಡಲಾಗುತ್ತಿದೆ. ಈ ಮಧ್ಯೆ ಚಾರ್ ಧಾಮ್ ಯಾತ್ರೆಗೆ ಸಂಬಂಧಿಸಿದಂತೆ ಉತ್ತರಾಖಂಡದ ಪೊಲೀಸ್ ಪ್ರಧಾನ ಕಛೇರಿಯ ಮಹಾನಿರ್ದೇಶಕರು ಹೊಸ ಸಲಹೆಯನ್ನು ನೀಡಿದ್ದಾರೆ. ಚಾರ್ ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಿಕರು ಈ ಸಲಹೆಯನ್ನು ತಿಳಿದಿರುವು ಅತ್ಯಗತ್ಯ.
बारिश और बर्फबारी के अलर्ट को देखते हुए चारधाम यात्रा के दौरान श्रद्धालुओं की सुरक्षा के मद्देनजर अतिरिक्त सतर्कता बरतने के निर्देश दिए गए हैं: पुलिस महानिदेशक मुख्यालय, उत्तराखंड pic.twitter.com/6jeaPBh6NJ
— ANI UP/Uttarakhand (@ANINewsUP) April 29, 2023
ಸಾಮಾನ್ಯವಾಗಿ ಚಾರ್‌ಧಾಮ ಯಾತ್ರೆಗೆ ಹೋಗುವವರಿಗೆ ಸ್ಥಳೀಯ ಹವಾಮಾನದ ಬಗ್ಗೆ ತಿಳಿದಿರುವುದು ತುಂಬಾ ಮುಖ್ಯ. ಹೀಗಾಗಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ. ಮಳೆ ಮತ್ತು ಹಿಮಪಾತದ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು, ಚಾರ್ಧಾಮ್ ಯಾತ್ರೆಯ ಸಮಯದಲ್ಲಿ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಜಾಗರೂಕತೆ ವಹಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಪೊಲೀಸ್ ಪ್ರಧಾನ ಕಚೇರಿಯ ಮಹಾನಿರ್ದೇಶಕರು ಟ್ವೀಟ್ ಮಾಡಿದ್ದಾರೆ.
ಅಲ್ಲದೇ ಎತ್ತರದ ಪ್ರದೇಶದಲ್ಲಿ ಹಿಮಪಾತ ಆಗಬಹುದು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯೂ ಇದೆ. ಹಲವೆಡೆ ಮಳೆ ಹಾಗೂ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ. ಈ ಕುರಿತು ಸಲಹೆ ಸೂಚನೆ ನೀಡಲಾಗಿದೆ. ಇದರಿಂದ ಚಾರ್ ಧಾಮ್ ಗೆ ತೆರಳುವ ಪ್ರಯಾಣಿಕರು












Click it and Unblock the Notifications