ಹೊಸ ಕಾರು ಖರೀದಿಸುವವರಿಗೆ ಪ್ರಮುಖ ಮಾಹಿತಿ

ಪ್ರತಿ ತಿಂಗಳು ಹಲವು ನಿಯಮಗಳಲ್ಲಿ ಒಂದಲ್ಲ ಒಂದು ಬದಲಾವಣೆ ಆಗುತ್ತಲೇ ಇರುತ್ತದೆ. ಇನ್ನೂ ಕೆಲವೇ ದಿನಗಳಲ್ಲಿ ಮಾರ್ಚ್‌ ಮುಗಿದು ಏಪ್ರಿಲ್‌ ಎಂಟ್ರಿ ಆಗಲಿದ್ದು, ಈ ತಿಂಗಳ ಆರಂಭದಿಂದಲೇ ವಾಹನ ಖರೀದಿದಾರರಿಗೆ ಬಿಗ್‌ ಶಾಕ್‌ವೊಂದು ಎದುರಾಗಲಿದೆ. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಹೊಸ ಕಾರು ಖರೀದಿಸುವವರಿಗೆ ಮತ್ತೆ ಬೆಲೆ ಏರಿಕೆ ಶಾಕ್ ಎದುರಾಗಿದ್ದು, ಏಪ್ರಿಲ್ 1ರಿಂದ ಟಾಟಾ ಮತ್ತು ಮಾರುತಿ ಕಾರುಗಳ ಬೆಲೆ ಏರಿಕೆ ಆಗಲಿದೆ. ಹಾಗಾದ್ರೆ ಎಷ್ಟು ಏರಿಕೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

Car Prices to increase from April 1 Know details

ವಾಹನ ನಿರ್ಮಾಣ ಪರಿಕರಗಳ ಬೆಲೆ ಏರಿಕೆಯ ಪರಿಣಾಮ ಏಪ್ರಿಲ್‌ನಿಂದ ಟಾಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ಕಾರು ಮತ್ತು ವಾಣಿಜ್ಯ ವಾಹನಗಳ ಬೆಲೆಯನ್ನು ಏರಿಕೆ ಮಾಡುವುದಾಗಿ 2 ಘೋಷಿಸಿವೆ.

ಟಾಟಾ ಮೋಟರ್ಸ್ ತನ್ನ ವಾಣಿಜ್ಯ ವಾಹನಗಳ ಮೇಲಿನ ಬೆಲೆಯನ್ನು ಶೇಕಡ 2ರಷ್ಟು ಏರಿಕೆ ಮಾಡುವುದಾಗಿ ಹೇಳಿದೆ. ಮತ್ತೊಂದೆಡೆ ಮಾರುತಿ ಸುಜುಕಿ ಸಹ ಬೆಲೆ ಏರಿಕೆಗೆ ಮುಂದಾಗಿದ್ದು, ಕಾರುಗಳ ಮೇಲಿನ ಬೆಲೆಯನ್ನು ಶೇಕಡ 4ರಷ್ಟು ಹೆಚ್ಚಳ ಮಾಡಲಿದೆ. ಇದು ಈ ವರ್ಷದಲ್ಲೇ 2ನೇ ದರ ಏರಿಕೆಯಾಗಿದೆ. ಫೆಬ್ರವರಿಯಲ್ಲಿ ಸಹ ಈ ಕಂಪನಿಗಳು ದರ ಹೆಚ್ಚಿಸಿದ್ದವು. ಇದೀಗ ಮತ್ತೊಮ್ಮೆ ದರ ಏರಿಕೆಗೆ ಮುಂದಾಗಿವೆ.

ದರ ಏರಿಕೆ: ಜಿಯೋ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್‌ ದರ ಏರಿಕೆ ಮಾಡಿದ ಬೆನ್ನಲ್ಲೇ ಏರ್‌ಟೆಲ್ ಸಹ ತನ್ನ ಗ್ರಾಹಕರಿಗೆ ಬಿಗ್‌ ಶಾಕ್ ಕೊಟ್ಟಿದೆ. ಏರ್‌ಟೆಲ್‌ ಕಂಪನಿ ಮೊಬೈಲ್ ಟಾರಿಫ್ ಪ್ಲಾನ್‌ಗಳ ದರ ಏರಿಕೆ ಮಾಡಿದೆ. ಹೊಸ ದರ ಏರಿಕೆ ಜಾರಿಗೆ ಬಂದಿದೆ.

ದರ ಏರಿಕೆ ನಿರ್ಧಾರವನ್ನು ಭಾರತಿ ಏರ್‌ಟೆಲ್ ಕಂಪನಿ ಸಮರ್ಥಿಸಿಕೊಂಡಿದೆ. ಭಾರತದ ಟೆಲಿಕಾಂ ವ್ಯವಹಾರದಲ್ಲಿ ನೆಟ್‌ವರ್ಕ್ ತಂತ್ರಜ್ಞಾನ ಮತ್ತು ಸ್ಪೆಕ್ಟ್ರಂಗಳ ಬಂಡವಾಳ ಹೂಡಿಕೆಗೆ ಇದೊಂದು ಸಾಧಾರಣ ಪ್ರಕ್ರಿಯೆ ಆಗಿದೆ. ಗ್ರಾಹಕರ ಬಜೆಟ್‌ ಹೊರೆ ಆಗುವಂತ ತೀರ್ಮಾನ ಕೈಗೊಳ್ಳಲಾಗಿದೆಂದು ತಿಳಿಸಿದೆ.

ಏರ್‌ಟೆಲ್ ಕಂಪನಿ ತನ್ನ ಗ್ರಾಹಕರಿಗೆ ಜಿಯೋದಂತೆ ಶೇಕಡಾ 11-21ರಷ್ಟು ದರ ಏರಿಕೆ ಮಾಡುವುದಾಗಿ ಘೋಷಣೆ ಮಾಡಿದೆ. ಅಂದರೆ, ಇಷ್ಟು 179 ರೂಪಾಯಿ ಇದ್ದ 28 ದಿನದ ಚಂದದಾರರು 199 ರೂಪಾಯಿ ಪಾವತಿ ಮಾಡಬೇಕು. 265 ರೂಪಾಯಿ ಪಾವತಿಸುತ್ತಿದ್ದ ಟಾರಿಫ್ ಪ್ಲಾನ್ 299 ರೂಪಾಯಿಗೆ ಏರಿಕೆ ಆಗಿದೆ. ಜಿಯೋ ರೇಟ್ ಜಾಸ್ತಿಯಾದ ರಾತ್ರೋರಾತ್ರಿ ದರ ಏರಿಕೆ ಪರಿಷ್ಕರಣೆ ಮಾಡಿರೋದು ಟೆಲಿಕಾಂ ಕಂಪನಿಗಳ ಪೈಪೋಟಿಗೆ ಸಾಕ್ಷಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+