Bomb Threat: ಪಾಟ್ನಾ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ, ಆವರಣದಲ್ಲಿ ಶೋಧ ಕಾರ್ಯ

ಪಾಟ್ನಾ ಏಪ್ರಿಲ್ 12: ಬಿಹಾರ್ ರಾಜಧಾನಿ ಪಾಟ್ನಾದ ಜಯಪ್ರಕಾಶ್ ನಾರಾಯಣ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ ಕರೆಯೊಂದನ್ನು ಸ್ವೀಕರಿಸಲಾಗಿದೆ.

ಬುಧವಾರ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿರುವುದಾಗಿ ಹೇಳಿದ್ದಾನೆ. ಕರೆಯ ಸ್ವೀಕರಿಸಿದ ನಂತರ ಬಾಂಬ್ ನಿಷ್ಕ್ರಿಯ ದಳ ವಿಮಾನ ನಿಲ್ದಾಣದ ಆವರಣವನ್ನು ಸ್ಕ್ಯಾನ್ ಮಾಡುತ್ತಿದೆ. ಬೆಳಿಗ್ಗೆ 10:47 ರ ಸುಮಾರಿಗೆ ಕರೆ ಸ್ವೀಕರಿಸಲಾಗಿದೆ.

 Bomb threat at Patna airport, premises searched

ಪಾಟ್ನಾದಲ್ಲಿರುವ ವರದಿಗಾರ ಪ್ರಕಾರ, ಬಾಂಬ್ ನಿಷ್ಕ್ರಿಯ ದಳವು ತನ್ನ ಶೋಧವನ್ನು ನಡೆಸುತ್ತಿರುವುದರಿಂದ ಯಾವುದೇ ಅಡೆತಡೆಗಳಿಲ್ಲದೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.

ನಂತರ ದರ್ಭಾಂಗ ಮತ್ತು ಪಾಟ್ನಾ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಸುಧಾಂಶು ಶೇಖರ್ ಅಲಿಯಾಸ್ ಮುಕುಂದ್‌ನನ್ನು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಂಜಾಬಿ ಕಾಲೋನಿಯಿಂದ ಬಂಧಿಸಲಾಗಿದೆ ಎಂದು ಸಮಸ್ತಿಪುರದ ಎಸ್‌ಪಿ ವಿನಯ್ ತಿವಾರಿ ತಿಳಿಸಿದ್ದಾರೆ. ಆರೋಪಿಯ ಮೊಬೈಲ್‌ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು, ಕುಡಿತದ ಚಟ ಹೊಂದಿದ್ದನಂತೆ. ಬಂಧಿಸಿದ ನಂತರವೂ ಆತ ಕುಡಿದಿದ್ದ ಎನ್ನಲಾಗಿದೆ.

ವ್ಯಕ್ತಿ ಮದ್ಯದ ಅಮಲಿನಲ್ಲಿದ್ದು, ಆ ಸಮಯದಲ್ಲಿ ಆತ ಕರೆ ಮಾಡಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ನಶೆ ಉಳಿದ ಬಳಿಕ ವಿವರವಾದ ವಿಚಾರಣೆ ನಡೆಸಲಾಗುತ್ತಿದೆ. ಕರೆ ಮಾಡಿದ ಫೋನ್ ಅನ್ನು ಮರುಪಡೆಯಲಾಗಿದೆ. ಮೇಲ್ನೋಟಕ್ಕೆ ಇದು ಹುಸಿ ಕರೆ ಎಂದು ನಂಬಲಾಗಿದೆ.

ದೆಹಲಿಯಲ್ಲಿ ಶಾಲೆಗೆ ಬೆದರಿಕೆ

ಇಂದು ಮುಂಜಾನೆ 10.50 ಗಂಟೆಗೆ ದೆಹಲಿಯ ಇಂಡಿಯನ್ ಸ್ಕೂಲ್‌ಗೆ ಇ-ಮೇಲ್ ಬಂದಿತ್ತು. ಅದರಲ್ಲಿ ಶಾಲೆಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು. ತಕ್ಷಣ ಶಾಲೆಯಲ್ಲಿರುವ ಮಕ್ಕಳನ್ನು ಸ್ಥಳಾಂತರಿಸಿದ ನಂತರ, SWAT ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳ ಇಡೀ ಕ್ಯಾಂಪಸ್‌ನಲ್ಲಿ ತನಿಖೆ ನಡೆಸಿತು. ಇದರಲ್ಲಿ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ.

ಕಳೆದ ವರ್ಷ ಜುಲೈನಲ್ಲಿ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದಲ್ಲಿ ಬಾಂಬ್ ಇದೆ ಎಂದು ಪ್ರಯಾಣಿಕರೊಬ್ಬರು ಹೇಳಿಕೊಂಡಿದ್ದರು. ಬಳಿಕ ವಿಮಾನ ಹಾರಾಟ ನಡೆಸದಂತೆ ತೀವ್ರ ಶೋಧ ನಡೆಸಲಾಗಿದ್ದು, ಅದರಲ್ಲಿ ಯಾವುದೇ ಅನುಮಾನಾಸ್ಪದ ಅಂಶಗಳು ಪತ್ತೆಯಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+