ಸಿಎಂ ಆಗಲು ಹೊರಟಿರುವ ಕಮಲ್ ನಾಥ್ ಮೇಲೆ ಏನಿದು ಗುರುತರ ಆರೋಪ?

ಟ್ವೆಂಟಿ 20 ಮ್ಯಾಚಿನ ಫಲಿತಾಂಶದಂತೆ, ಮಧ್ಯಪ್ರದೇಶದ ಅಸೆಂಬ್ಲಿ ಚುನಾವಣೆಯನ್ನು ಕೊನೆಗೂ ಗೆದ್ದು ಬೀಗುತ್ತಿರುವ ಕಾಂಗ್ರೆಸ್ ಮತ್ತು ಸಂಭಾವ್ಯ ಮುಖ್ಯಮಂತ್ರಿ ಕಮಲ್ ನಾಥ್ ಮೇಲೆ, ಬಿಜೆಪಿ ಗುರುತರ ಆರೋಪವನ್ನು ಹೊರಿಸಿದೆ.

ಚುನಾವಣೆಯಲ್ಲಿ ಸೋತ ಬಿಜೆಪಿ ಹತಾಶೆಯಿಂದ ಈ ಆರೋಪವನ್ನು ಹೊರಿಸುತ್ತಿದೆ, ಇದರಲ್ಲಿ ಯಾವುದೂ ಸತ್ಯವಿಲ್ಲ ಎಂದು ಕಾಂಗ್ರೆಸ್, ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದೆ. ಬಿಜೆಪಿ, 1984ರ ಸಿಖ್ ದಂಗೆಯ ವಿಚಾರವನ್ನು ಇಟ್ಟುಕೊಂಡು, ಕಾಂಗ್ರೆಸ್ ವಿರುದ್ದ ತಿರುಗಿಬಿದ್ದಿದೆ.

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಹೊಸದಾಗಿ ಆಯ್ಕೆಯಾಗಿರುವ ಶಾಸಕರು ಮತ್ತು ಪಕ್ಷದ ಹಿರಿಯ ಮುಖಂಡರಲ್ಲಿ ಚರ್ಚಿಸುತ್ತಿರುವ ಬೆನ್ನಲ್ಲೇ, ಬಿಜೆಪಿ, ಕಮಲ್ ನಾಥ್ ವಿರುದ್ದ ಹೊಸ ಅಸ್ತ್ರವನ್ನು ಬಳಸಿಕೊಂಡಿದೆ.

ಕಳೆದ ಪಂಜಾಬ್ ಅಸೆಂಬ್ಲಿ ಚುನಾವಣೆಗೆ, ಉಸ್ತುವಾರಿಯನ್ನಾಗಿ ಕಮಲ್ ನಾಥ್ ಅವರನ್ನು ನೇಮಿಸಿದ್ದಾಗ, ಅಲ್ಲಿನ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ತಮ್ಮದೇ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ದ ಹರಿಹಾಯ್ದಿದ್ದರು.

1984 ರ ಅಕ್ಟೋಬರ್ 31 ರಂದು ಸಿಖ್ ಸಮುದಾಯಕ್ಕೆ ಸೇರಿದ ಅಂಗರಕ್ಷಕರಿಂದ ನಡೆದ, ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಹತ್ಯೆಗೆ ಪ್ರತೀಕವಾಗಿ ಸಿಖ್ ವಿರೋಧಿ ದಂಗೆ ನಡೆದಿತ್ತು.

ಇಂದಿರಾ ಗಾಂಧಿ

ಇಂದಿರಾ ಗಾಂಧಿ

ಇಂದಿರಾ ಗಾಂಧಿ ಹತ್ಯೆಯಾದ ನಂತರ, ರಾಜಧಾನಿ ದೆಹಲಿಯಲ್ಲಿ ಸಿಖ್ ಸಮುದಾಯದ ವಿರುದ್ದ ಭಾರೀ ಹಿಂಸಾಚಾರ ನಡೆದಿತ್ತು. ದಂಗೆ ನಡೆಯುತ್ತಿದ್ದಾಗ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಗುರುದ್ವಾರ ಬಳಿ ಇದ್ದ ಬಗ್ಗೆ ಸ್ಪಷ್ಟ ವರದಿಗಳಿದ್ದವು. ಒಂದು ವೇಳೆ ಗುರುದ್ವಾರವನ್ನು ರಕ್ಷಿಸುವುದು ಅವರ ಉದ್ದೇಶವಾಗಿದ್ದಿದ್ದರೆ ಸಿಖ್ ಸಂತ್ರಸ್ತರಿಗೆ ಏಕೆ ಸಹಾಯ ಮಾಡಲಿಲ್ಲ ಎನ್ನುವ ಪ್ರಶ್ನೆ ಕಮಲ್ ನಾಥ್ ಮತ್ತು ಕಾಂಗ್ರೆಸ್ ವರಿಷ್ಠರಿಗೆ ಎದುರಾಗಿದ್ದವು.

ಜಗದೀಶ್​ ಟೈಟ್ಲರ್​, ಹಿರಿಯ ಕಾಂಗ್ರೆಸ್ಸಿಗ ಕಮಲ್​ನಾಥ್

ಜಗದೀಶ್​ ಟೈಟ್ಲರ್​, ಹಿರಿಯ ಕಾಂಗ್ರೆಸ್ಸಿಗ ಕಮಲ್​ನಾಥ್

1984ರ ಸಿಖ್​ ವಿರೋಧಿ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪಟಿಯಾಲಾ ಹೌಸ್​​ ಕೋರ್ಟ್ ತೀರ್ಪನ್ನು ನೀಡಿ, ಇಬ್ಬರು ಆರೋಪಿಗಳಲ್ಲಿ ಒಬ್ಬನಾದ ಯಶ್​​ಪಾಲ್​​ ಸಿಂಗ್​ ಗೆ ಗಲ್ಲುಶಿಕ್ಷೆ, ಮತ್ತೊಬ್ಬ ಅಪರಾಧಿ ನರೇಶ್​​​​ ಶೆರಾವತ್​​ ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ರಾಜಧಾನಿ ದೆಹಲಿ ಕಂಡು ಕೇಳರಿಯದ ಹಿಂಸಾಚಾರದ ಹಿಂದೆ, ಕಾಂಗ್ರೆಸ್​ ಪಕ್ಷದ ಕೈವಾಡವಿದೆ. ಕಾಂಗ್ರೆಸ್​ ನಾಯಕ ಜಗದೀಶ್​ ಟೈಟ್ಲರ್​, ಹಿರಿಯ ಕಾಂಗ್ರೆಸ್ಸಿಗ ಕಮಲ್​ನಾಥ್ ವಿರುದ್ಧ ದಂಗೆಯ ನೇತೃತ್ವ ವಹಿಸಿದ್ದ ಆರೋಪ ಕೂಡ ಕೇಳಿ ಬಂದಿತ್ತು.

ಸಿಖ್‌ ವಿರೋಧಿ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ

ಸಿಖ್‌ ವಿರೋಧಿ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ

ಕಮಲ್‌ನಾಥ್‌ 1984ರಲ್ಲಿ ನಡೆದ ಸಿಖ್‌ ವಿರೋಧಿ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆಪಾದಿಸಿ ಅಮೆರಿಕ ಮೂಲದ ಮಾನವ ಹಕ್ಕು ಸಲಹಾ ಸಂಸ್ಥೆ ಸಿಖ್ಸ್‌ ಫಾರ್‌ ಜಸ್ಟೀಸ್‌ (ಎಸ್‌ಎಫ್‌ಜೆ) ಅಮೆರಿಕದ ಫೆಡರಲ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು, ಬಿಜೆಪಿ ಈಗ ಕಾಂಗ್ರೆಸ್ ಮತ್ತು ಕಮಲ್ ನಾಥ್ ವಿರುದ್ದ ತಿರುಗಿಬಿದ್ದಿದೆ.

ಪಂಜಾಬ್ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು

ಪಂಜಾಬ್ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು

ಕಮಲ್ ನಾಥ್ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಿದರೆ, ಪಂಜಾಬ್ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಅಂದು ಅಮರೀಂದರ್ ಸಿಂಗ್ ಗಾಗಿ ಕಮಲ್ ನಾಥ್ ಅವರನ್ನು ಉಸ್ತುವಾರಿಯಿಂದ ಇಳಿಯಲು ಹೇಳಿದ್ದ ಕಾಂಗ್ರೆಸ್ ಪಕ್ಷ, ಈಗ ಕಮಲ್ ನಾಥ್ ಅವರನ್ನು ಸಿಎಂ ಎಂದು ಘೋಷಿಸುವುದು ಎಷ್ಟು ಸರಿ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಆರೋಪಿಸಿದ್ದಾರೆ.

ರಾಜೀವ್ ಗಾಂಧಿಯವರ ಆದೇಶ

ರಾಜೀವ್ ಗಾಂಧಿಯವರ ಆದೇಶ

ಅಂದಿನ ದಂಗೆಯ ವೇಳೆ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರ ಆದೇಶವನ್ನು ಪಾಲಿಸಿದ್ದಕ್ಕಾಗಿ ಕಮಲ್ ನಾಥ್ ಅವರಿಗೆ ಕಾಂಗ್ರೆಸ್ ಪಕ್ಷ ಪಂಜಾಬ್ ನ ಕಾಂಗ್ರೆಸ್ ಉಸ್ತುವಾರಿ ನೀಡುವ ಮೂಲಕ ಪುರಸ್ಕರಿಸಿದೆ ಎಂದು ಆಮ್ ಆದ್ಮಿ ಪಕ್ಷ, ಪಂಜಾಬ್ ಚುನಾವಣೆಯ ವೇಳೆ ಪದೇ ಪದೇ ಕಿಡಿಕಾರಿತ್ತು. ಅಮರೀಂದರ್ ಸಿಂಗ್ ಕೂಡ, ಪಕ್ಷವನ್ನು ತ್ಯಜಿಸುವುದಾಗಿ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ, ಕಮಲ್ ನಾಥ್ ಅವರನ್ನು ಉಸ್ತುವಾರಿಯಿಂದ ಇಳಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+