Priyanka Gandhi: "ದೆಹಲಿಯಲ್ಲಿ ಪ್ರಿಯಾಂಕಾ ಗಾಂಧಿ ಕೆನ್ನೆಯಂತಹ ನೈಸ್ ರಸ್ತೆ ಮಾಡಿಸುತ್ತೇವೆ"
ದೆಹಲಿ ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದೆ. ಚುನಾವಣೆಗೆ ಎಲ್ಲಾ ಪಕ್ಷಗಳು ಸಹ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ರೀತಿ ಇರುವಾಗಲೇ ವಿವಾದ ಕಿಡಿಯೊಂದು ಸೃಷ್ಟಿಯಾಗಿದೆ. ಪ್ರಿಯಾಂಕಾ ಗಾಂಧಿ ಅವರ ಕೆನ್ನೆಗೆ ಹೋಲಿಕೆ ನೀಡಿ ಕೊಟ್ಟಿರುವ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ದೆಹಲಿಯ ವಿಧಾನಸಭೆ ಚುನಾವಣೆಗೆ ಸರ್ವ ಪಕ್ಷಗಳ ಸಿದ್ಧತೆ ಜೋರಾಗಿದೆ.
ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಬಿಜೆಪಿಯ ಪ್ರಭಾವಿ ನಾಯಕರೊಬ್ಬರು ಕಾಂಗ್ರೆಸ್ ನಾಯಕಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಕೆನ್ನೆಯಂತಹ ನೈಸ್ ರೋಡ್ ಮಾಡಿಸುತ್ತೇವೆ ಎಂದಿರುವುದು ಇದೀಗ ಭಾರೀ ವಿವಾದ ಸೃಷ್ಟಿಗೆ ಕಾರಣವಾಗಿದೆ. ಏನಿದು ವಿವಾದ ಹಾಗೂ ಪ್ರಿಯಾಂಕಾ ಗಾಂಧಿ ಅವರ ಕೆನ್ನೆಯನ್ನು ಉದಾ: ಮಾಡಿರುವುದು ಏಕೆ ಎನ್ನುವ ವಿವರ ನೋಡೋಣ...

ದೆಹಲಿ ವಿಧಾನಸಭೆ ಚುನಾವಣೆಗೆ ಎಎಪಿ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ. ಚುನಾವಣಾ ಪ್ರಚಾರ ಜೋರಾಗಿ ಹೋಗುತ್ತಿದೆ. ಇದರ ನಡುವೆ ಬಿಜೆಪಿ ನಾಯಕರೊಬ್ಬರು. ಬಿಜೆಪಿಗೆ ಡ್ಯಾಮೇಜ್ ಆಗುವ ರೀತಿಯಲ್ಲಿ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ. ದೆಹಲಿ ಚುನಾವಣೆಯಲ್ಲಿ ನಾನು ಗೆದ್ದರೆ, ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕೆನ್ನೆಯಂತಹ ನೈಸ್ ರೋಡ್‌ಗಳನ್ನು ಕ್ಷೇತ್ರದೆಲ್ಲೆಡೆ ನಿರ್ಮಿಸುತ್ತೇನೆ ಎಂದು ದೆಹಲಿ ವಿಧಾನಸಭೆಯ ಕಲ್ಕಾಜಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಹೇಳಿದ್ದಾರೆ. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ರಮೇಶ್ ಬಿಧುರಿ ಇಷ್ಟೇ ಹೇಳಿ ಸುಮ್ಮನಾಗಿಲ್ಲ ಮುಂದುವರಿದು ಮಾತನಾಡಿದ್ದಾರೆ ಅದೇನು ಎನ್ನುವ ವಿವರ ಮುಂದಿದೆ.
ದೆಹಲಿ ಬಿಜೆಪಿ ನಾಯಕ ರಮೇಶ್ ಬಿಧುರಿ ಅವರು, ಪ್ರಿಯಾಂಕಾ ಅವರ ಕೆನ್ನೆಯಷ್ಟು ನುಣುಪಾದ ರೋಡ್ ಮಾಡ್ತೀನಿ ಅಂತ ಹೇಳೋದಲ್ಲದೆ.
ಲಾಲು ಪ್ರಸಾದ್ ಅವರ ಹಳೇಯ ವಿವಾದಾತ್ಮಕ ಹೇಳಿಕೆಯನ್ನೂ ಬೇರೆ ರೀತಿ ಹೇಳಿದ್ದಾರೆ. ಲಾಲು ಪ್ರಸಾದ್ ಅವರು, ಬಿಹಾರದಲ್ಲಿ ಹೇಮಾ ಮಾಲಿನಿ ಅವರ ಕೆನ್ನೆಯಂತಹ ರಸ್ತೆ ಮಾಡ್ತೀನಿ ಅಂತ ಹೇಳಿದ್ದರು. ಅದೆಲ್ಲ ಸುಳ್ಳು ಬಿಡಿ... ಅವರಿಂದ ಅದು ಆಗಲೂ ಇಲ್ಲ. ಕಲ್ಕಾಜಿಯಲ್ಲಿ ಸಹ ಪ್ರಿಯಾಂಕಾ ಗಾಂಧಿ ಅವರ ಕೆನ್ನೆಯಷ್ಟು ನೈಸ್ ಆಗಿರುವ ರಸ್ತೆಗಳನ್ನು ಮಾಡಿಸ್ತೀನಿ ಅಂತ ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗ್ತಿದೆ.
ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಅವರು ಹೇಳಿಕೆಯ ಬಗ್ಗೆ ಸಮರ್ಥನೆ ಕೊಟ್ಟಿದ್ದಾರೆ. ಲಾಲು ಪ್ರಸಾದ್ ಅವರು ಈ ಹಿಂದೆ ಮಾತನಾಡಿದ್ದರು. ನಾನೂ ಕೂಡ ಅದೇ ತರ ಮಾತನಾಡಿದ್ದೇನೆ. ಕಾಂಗ್ರೆಸ್ ಆಗ ಯಾಕೆ ಏನು ಮಾತನಾಡಲಿಲ್ಲ. ಸರ್ಕಾರದಲ್ಲಿ ಸಚಿವ ಸ್ಥಾನದಲ್ಲಿ ಇದ್ದ ಅವರು ಹೇಳಿದ್ದನ್ನ ಯಾವ ಕಾಂಗ್ರೆಸ್ ನಾಯಕರೂ ಪ್ರಶ್ನೆ ಮಾಡಿಲ್ಲ ಅಂತ ಹೇಳಿದ್ದಾರೆ. ನನ್ನ ಮಾತಿನಿಂದ ಯಾರಿಗಾದರೂ ನೋವುಂಟಾಗಿದ್ದರೆ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.
ದೆಹಲಿ ಚುನಾವಣೆ: ದೆಹಲಿಯಲ್ಲಿ ಇದೇ ಫೆಬ್ರವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ದೆಹಲಿಯಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿದ್ದು, ಕಳೆದ ಎರಡು ಅವಧಿಯಿಂದ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರದಲ್ಲಿ ಇದೆ. ಆದರೆ, ಎಎಪಿ ದೆಹಲಿಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡುವುದು ಅನುಮಾನ ಅಂತಲೇ ಹೇಳಲಾಗುತ್ತಿದೆ. ಮದ್ಯ ನೀತಿ ಹಗರಣ ಸೇರಿದಂತೆ ವಿವಿಧ ಕಾರಣಗಳಿಗೆ ಈ ಬಾರಿ ಎಎಪಿಗೆ ಆಡಳಿತ ವಿರೋಧ ಅಲೆ ಇದೆ.












Click it and Unblock the Notifications