BJP Candidate 3rd List: ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ!
ಹೊಸ ದಿಲ್ಲಿ, ಮಾರ್ಚ್21: 2024ರ ಲೋಕಸಭಾ ಚುನಾವಣೆ ಕಾವು ದಿನದಿಂದಿ ದಿನಕ್ಕೆ ಜೋರಾಗಿದೆ. ಇತ್ತ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನ ಘೋಷಿಸಿದ್ದು, ಒಟ್ಟು ಏಳು ಹಂತದಲ್ಲಿ ದೇಶದಲ್ಲಿ ಚುನಾವಣೆ ನಡೆಯಲಿದೆ. ಇತ್ತ ಗೆಲ್ಲುವ ಕುದುರೆಯ ಹುಡುಕಾಟದಲ್ಲಿರುವ ಬಿಜೆಪಿ ಮೂರನೇ ಪಟ್ಟಿಯನ್ನ ಇಂದು (ಗುರುವಾರ) ಬಿಡುಗಡೆ ಮಾಡಿದೆ.
ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿಯಲ್ಲಿ ಯಾವುದೇ ಗೊಂದಲಗಳಿಲ್ಲದ ಕ್ಷೇತ್ರಗಳಲ್ಲಿ ಪಕ್ಷದ ನಾಯಕರ ಒಮ್ಮತದ ಅಭಿಪ್ರಾಯದ ಮೇರೆಗೆ 195 ಅಭ್ಯರ್ಥಿಗಳನ್ನ ಘೋಷಿಸಿದ್ದು, ಎರಡನೇ ಪಟ್ಟಿಯಲ್ಲಿ 72 ಕ್ಷೇತ್ರದ ಅಭ್ಯರ್ಥಿಯನ್ನ ಘೋಷಿಸಿತ್ತು. ಇದೀಗ ಮೂರನೇ ಪಟ್ಟಿಯಲ್ಲಿ ತಮಿಳುನಾಡಿದ 9 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನ ಪ್ರಕಟಿಸಿದೆ.

ಬಿಜೆಪಿ ಹೈಕಮಾಂಡ್ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಅವರನ್ನು ಕೊಯಮತ್ತೂರಿನಿಂದ ಕಣಕ್ಕಿಳಿಸಿದೆ. ಕೆಲವು ದಿನಗಳ ಹಿಂದೆ ತೆಲಂಗಾಣ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ತಮಿಳಿಸೈ ಸೌಂದರರಾಜನ್ ಚೆನ್ನೈ ದಕ್ಷಿಣದಿಂದ ಮತ್ತು ಎಲ್ ಮುರುಗನ್ ನೀಲಗಿರಿಯಿಂದ ಸ್ಪರ್ಧಿಸಲಿದ್ದಾರೆ.
ಬಿಜೆಪಿಯ ಅಭ್ಯರ್ಥಿಗಳ ಮೂರನೇ ಪಟ್ಟಿ ಇಲ್ಲಿದೆ.
1.ಕೊಯಮತ್ತೂರು: ಅಣ್ಣಾಮಲೈ
2.ಚೆನ್ನೈ ದಕ್ಷಿಣ: ತಮಿಳಿಸೈ ಸೌಂದರರಾಜನ್
3. ನೀಲಗಿರಿ ಕ್ಷೇತ್ರ: ಎಲ್ ಮುರುಗನ್
4.ಕನ್ಯಾಕುಮಾರಿ: ರಾಧಾಕೃಷ್ಣನ್
5. ಚೆನ್ನೈ ಸೆಂಟ್ರಲ್ ಕ್ಷೇತ್ರ: ವಿನೋಜ್ ಪಿ.ಸೆಲ್ವಂ
6. ವೆಲ್ಲೂರು ಕ್ಷೇತ್ರ: ಡಾ.ಎ.ಸಿ ಷಣ್ಮುಗಂ
7. ಕೃಷ್ಣಗಿರಿ ಕ್ಷೇತ್ರ: ಸಿ.ನರಸಿಂಹನ್
8. ಪೆರಂಬಲೂರು ಕ್ಷೇತ್ರ: ಟಿ ಆರ್. ಪರಿವೀಂಧರ್
9. ತೂತುಕುಡಿ ಕ್ಷೇತ್ರ: ಎನ್. ನಾಗೇಂದ್ರನ್
BJP releases its third list of candidates for the upcoming Lok Sabha elections.
— ANI (@ANI) March 21, 2024
K Annamalai to contest from Coimbatore, Tamilisai Soundararajan from Chennai South and L. Murugan from Nilgiris. pic.twitter.com/bJLUyK8Og1












Click it and Unblock the Notifications