• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋವ್ಯಾಕ್ಸಿನ್ ಲಸಿಕೆ ದುಬಾರಿ ಬೆಲೆ ಸಮರ್ಥಿಸಿಕೊಂಡ ಭಾರತ್ ಬಯೋಟೆಕ್

|
Google Oneindia Kannada News

ಹೈದರಾಬಾದ್, ಜೂನ್ 15: ಭಾರತದಲ್ಲಿ ಕೊರೊನಾ ಸೋಂಕಿಗೆ ನೀಡಲಾಗುತ್ತಿರುವ ಕೋವ್ಯಾಕ್ಸಿನ್ ಲಸಿಕೆಯ ಬೆಲೆ ಕುರಿತು ಪ್ರಶ್ನೆಗಳು ಎದ್ದಿರುವ ಮಧ್ಯೆ, ಲಸಿಕೆ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ಪ್ರತಿಕ್ರಿಯೆ ನೀಡಿದೆ.

ಲಸಿಕೆಯ ಬೆಲೆಯನ್ನು ಸಮರ್ಥಿಸಿಕೊಂಡಿರುವ ಸಂಸ್ಥೆ, ದೇಶದಲ್ಲಿ ರಾಷ್ಟ್ರೀಯ ಲಸಿಕಾ ಅಭಿಯಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್‌ಗೆ 150 ರೂಗಳ ಬೆಲೆಯಲ್ಲಿ ಲಸಿಕೆಗಳನ್ನು ಪೂರೈಸುತ್ತಿದ್ದು, ಈ ಬೆಲೆ ಸಮರ್ಥನೀಯವಾಗಿಲ್ಲ. ಲಸಿಕೆಯ ಉತ್ಪಾದನೆ ಹಾಗೂ ಅಭಿವೃದ್ಧಿ ವೆಚ್ಚಗಳನ್ನು ಸರಿದೂಗಿಸಲು ಖಾಸಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ನಿಗದಿ ಮಾಡಲಾಗಿದೆ ಎಂದು ತಿಳಿಸಿದೆ.

ಜಗತ್ತಿನ 3ನೇ ದುಬಾರಿ ಕೊರೊನಾವೈರಸ್ ಲಸಿಕೆ ಕೊವ್ಯಾಕ್ಸಿನ್!ಜಗತ್ತಿನ 3ನೇ ದುಬಾರಿ ಕೊರೊನಾವೈರಸ್ ಲಸಿಕೆ ಕೊವ್ಯಾಕ್ಸಿನ್!

ಖಾಸಗಿ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್‌ ಲಸಿಕೆಯ ಪ್ರತಿ ಡೋಸ್‌ಗೆ 1200 ರೂ ನಿಗದಿಗೊಳಿಸಲಾಗಿದೆ. ಆಸ್ಪತ್ರೆ ಆಡಳಿತ ಶುಲ್ಕ ಹಾಗೂ ಜಿಎಸ್‌ಟಿ ಸೇರಿದಂತೆ ಕೇಂದ್ರ ಸರ್ಕಾರ ಗರಿಷ್ಠ 1410 ರೂ ವಿಧಿಸಿದೆ. ಇತರೆ ಎರಡು ಲಸಿಕೆಗಳಿಗೆ ಆಸ್ಪತ್ರೆ ಶುಲ್ಕ ಸೇರಿದಂತೆ ಪ್ರತಿ ಡೋಸ್ ಕೋವಿಶೀಲ್ಡ್‌ಗೆ 780 ರೂ ಹಾಗೂ ಸ್ಫುಟ್ನಿಕ್ ವಿ ಲಸಿಕೆಗೆ 1145 ರೂ ನಿಗದಿಪಡಿಸಲಾಗಿದೆ.

ಚೀನಾದ ಸಿನೊಫಾರ್ಮ್ ಹಾಗೂ ಫೈಜರ್ ಅಭಿವೃದ್ಧಿಪಡಿಸಿದ ಲಸಿಕೆ ನಂತರ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ವಿಶ್ವದ ಮೂರನೇ ಅತಿ ಹೆಚ್ಚು ಬೆಲೆಯ ಲಸಿಕೆ ಎನಿಸಿಕೊಂಡಿದೆ.

ಜಾಗತಿಕ ಮಟ್ಟದಲ್ಲಿ ದುಬಾರಿ ಎನಿಸಿರುವ ಕೊರೊನಾ ಲಸಿಕೆಯ ಪೈಕಿ ಭಾರತ್ ಬಯೋಟೆಕ್ ಉತ್ಪಾದಿಸುತ್ತಿರುವ ಕೋವ್ಯಾಕ್ಸಿನ್ ಲಸಿಕೆಯೂ ಒಂದಾಗಿದೆ. ಕೋವಿಶೀಲ್ಡ್ ಲಸಿಕೆಗಿಂತ ಎರಡು ಪಟ್ಟು ಹೆಚ್ಚು ಬೆಲೆ ಹೊಂದಿದ್ದು, ವಿದೇಶಗಳಲ್ಲಿನ ಫೈಜರ್ ಕಂಪನಿಯ ಲಸಿಕೆಯಷ್ಟೇ ಹಣವನ್ನು ಭಾರತೀಯರು ಸ್ವದೇಶಿ ಲಸಿಕೆಗೆ ನೀಡಬೇಕಾಗಿದೆ. ವಿಶ್ವದ ದುಬಾರಿ ಲಸಿಕೆಗಳ ಪಟ್ಟಿಯಲ್ಲಿ ಕೋವ್ಯಾಕ್ಸಿನ್ ಮೂರನೇ ಸ್ಥಾನದಲ್ಲಿದೆ.

ಕೋವ್ಯಾಕ್ಸಿನ್ ಲಸಿಕೆ ಬೆಲೆ ಕುರಿತು ಆಗಸ್ಟ್‌ ತಿಂಗಳಿನಲ್ಲಿ ಮಾತನಾಡಿದ್ದ ಭಾರತ್ ಬಯೋಟೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಎಲಾ, "ನೀವು ಕೊಂಡುಕೊಳ್ಳುವ ಪ್ಯಾಕೇಜ್ ಕುಡಿಯುವ ನೀರಿನ ಬಾಟಲಿಗಿಂತ ಕೋವ್ಯಾಕ್ಸಿನ್‌ನ ಒಂದು ಡೋಸ್ ಲಸಿಕೆ ವೆಚ್ಚ ಇರುತ್ತದೆ," ಎಂದು ಹೇಳಿದ್ದರು. ಆದರೆ ಈಗ ಖಾಸಗಿ ಆಸ್ಪತ್ರೆಗಳಿಗೆ ಬೆಲೆ ಏರಿಕೆ ಮಾಡಲಾಗಿದೆ.

"ಕೋವಾಕ್ಸಿನ್‌ನ ತಂತ್ರಜ್ಞಾನವು ಕೋವಿಶೀಲ್ಡ್ ಲಸಿಕೆ ಮತ್ತು ಸ್ಪುಟ್ನಿಕ್-ವಿ ಗಿಂತ ಭಿನ್ನವಾಗಿದೆ. ಕೋವಾಕ್ಸಿನ್‌ಗಾಗಿ ನಿಷ್ಕ್ರಿಯಗೊಂಡ ರೋಗಾಣು ಬಳಸಲಾಗುತ್ತದೆ. ಇದಕ್ಕಾಗಿ ನೂರಾರು ಲೀಟರ್ ದುಬಾರಿ ಸೀರಮ್ ಆಮದು ಮಾಡಿಕೊಳ್ಳಬೇಕಾಗುತ್ತದೆ" ಎಂದು ಅಣು ಜೀವಶಾಸ್ತ್ರ ಕೇಂದ್ರದ ಸಲಹೆಗಾರ ರಾಕೇಶ್ ಮಿಶ್ರಾ ತಿಳಿಸಿದ್ದಾರೆ.

ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುವ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆಯ ಹಂತಗಳಲ್ಲಿ ಹಲವು ರೀತಿಯ ವೆಚ್ಚ ಮಾಡಬೇಕಾಗುತ್ತದೆ. ಕಚ್ಚಾ ಉಪಕರಣ, ಪ್ಯಾಕಿಂಗ್, ಘಟಕದ ಕಾರ್ಯಾಚರಣೆ ಮತ್ತು ನಿರ್ವಹಣೆ, ಪರವಾನಗಿ ಪಡೆಯುವ ವೆಚ್ಚ, ವೈದ್ಯಕೀಯ ಪ್ರಯೋಗ ಹಾಗೂ ಉತ್ಪಾದನೆ ವೆಚ್ಚವು ಎಲ್ಲವನ್ನೂ ಒಳಗೊಂಡಿರುತ್ತದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.

English summary
Covaxin maker Bharat Biotech on Tuesday defended its high price of covaxin for private hospitals,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X