ದಕ್ಷ ಎಸ್ಪಿಯಿಂದ ಹೆಂಡ್ತಿ ಮಕ್ಕಳಿಗೆ ಗುಂಡು, ಆತ್ಮಹತ್ಯೆ
ರಾಯ್ಪುರ, ಫೆ.25- ಮಾವೋವಾದಿಗಳ ವಿರುದ್ಧ ದಿಟ್ಟೆದೆಯಿಂದ ಹೋರಾಡಿ ಕಳೆದ ವರ್ಷ ರಾಷ್ಟಪತಿಗಳಿಂದ ಶೌರ್ಯ ಪ್ರಶಸ್ತಿ ಪಡೆದಿದ್ದ ಪೊಲೀಸ್ ಸೂಪರಿಂಟೆಂಡ್ ಅಧಿಕಾರಿಯೊಬ್ಬರು ತನ್ನಿಬ್ಬರು ಎಳೆಯ ಮಕ್ಕಳಿಗೆ ಗುಂಡಿಟ್ಟು, ಹೆಂಡತಿಗೂ ಗುಂಡಿಟ್ಟು ಸಾಯಿಸಿ, ನಂತರ ತನ್ನ ತಲೆಗೆ ಗುಂಡಿಟ್ಟುಕೊಂಡು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
6 ವರ್ಷದ ಪುತ್ರ ಆರ್ಯನ್ ಮತ್ತು 11 ವರ್ಷದ ಪೂಜಾ ತೀವ್ರವಾಗಿ ಗಾಯಗೊಂಡು ರಾಯ್ಪುರ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾರೆ. ದುರ್ವಿಧಿಯ ಅಟ್ಟಹಾಸಕ್ಕೆ ಮಣಿದ 40 ವರ್ಷದ ಅಧಿಕಾರಿ ದೇವನಾರಾಯಣ ಪಟೇಲ್ (40) ಮತ್ತು ಅವರ ಪತ್ನಿ ಪ್ರತಿಮಾ (35) ಸಾವಿಗೀಡಾಗಿದ್ದಾರೆ. ಅಂಥಾದ್ದೇನಾಯ್ತು, ಮುಂದೆ ಓದಿ...

ಜಡ್ಜ್ ವಿರುದ್ಧ (additional district judge A Toppo) ಪ್ರಕರಣ ದಾಖಲಿಸಿದ್ದಕ್ಕೆ ನಿನ್ನೆ ಸೋಮವಾರ ದೇವನಾರಾಯಣ ಪಟೇಲ್ ಅವರನ್ನು ಸೇವೆಯಿಂದ ಅಮಾನತುಮಾಡಲಾಯಿತು. ಅದೇ ಕೋಪದಲ್ಲಿ ಮನೆಗೆ ಬಂದ ದೇವನಾರಾಯಣ ಪಟೇಲ್ ಇಹಲೋಕದ ವ್ಯಾಪಾರ ಮುಗಿಸಿದ್ದಾರೆ. ಸೋಮವಾರ ಇಡೀ ರಾತ್ರಿ ಘಟನೆಯ ಬಗ್ಗೆಯೇ ಯೋಚಿಸುತ್ತಿದ ದೇವನಾರಾಯಣ ಪಟೇಲ್ ನಡುರಾತ್ರಿ 2 ಗಂಟೆ ವೇಳೆಗೆ ಒಂದೇ ಸಮನೆ ತಮ್ಮ ಸರ್ವಿಸ್ ರಿವಾಲ್ವರಿನ ಟ್ರಿಗರ್ ಒತ್ತಿದ್ದಾರೆ.
ಛತ್ತೀಸಗಢ ರಾಜ್ಯದ ಬಸ್ತಾರ್ ಜಿಲ್ಲೆಯ ಜಗದಾಳಪುರ ನಗರದಲ್ಲಿ ತಮ್ಮ ಅಧಿಕೃತ ನಿವಾಸದಲ್ಲಿ ದೇವನಾರಾಯಣ ಪಟೇಲ್ ಈ ಅನಾಹುತ ಮಾಡಿಕೊಂಡಿದ್ದಾರೆ. ಜಗದಾಳಪುರದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದನ್ ಕುಮಾರ್ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.












Click it and Unblock the Notifications