Bank Holidays in August 2023: ಆಗಸ್ಟ್‌ನಲ್ಲಿ 14 ದಿನ ಬ್ಯಾಂಕ್‌ಗಳಿಗೆ ರಜೆ: ಪಟ್ಟಿ ಇಲ್ಲಿದೆ
ಭಾರತೀಯ ರಿಸರ್ವ್ ಬ್ಯಾಂಕ್ (RBI) ರ ರಜಾದಿನದ ಕ್ಯಾಲೆಂಡರ್ ಪ್ರಕಾರ, 2023ರ ಆಗಸ್ಟ್ ತಿಂಗಳಿನಲ್ಲಿ ವಾರಾಂತ್ಯ ಸೇರಿ 14 ದಿನಗಳು ಬ್ಯಾಂಕ್ ರಜಾ ದಿನ ಇರಲಿದೆ. ರಕ್ಷಾ ಬಂಧನ, ಸ್ವಾತಂತ್ರ್ಯ ದಿನ, ತೆಂಡೋಂಗ್ ಲ್ಹೋ ರಮ್ ಫತ್, ಪಾರ್ಸಿ ಹೊಸ ವರ್ಷ ಸೇರಿ ಹಲವು ಹಬ್ಬಗಳಿದ್ದು ರಜೆ ದಿನ ಘೋಷಣೆ ಮಾಡಲಾಗಿದೆ.
ಆಗಸ್ಟ್‌ನಲ್ಲಿ ಬ್ಯಾಂಕ್‌ನಲ್ಲಿ ಕೆಲಸಗಳಿಗೆ ಭೇಟಿ ಕೊಡುವ ಮುನ್ನ ಪಟ್ಟಿ ಮಾಡಲಾದ ರಜಾ ದಿನಗಳ ಬಗ್ಗೆ ಯೋಜಿಸಲು ಸಲಹೆ ನೀಡಲಾಗಿದೆ. ಖಾಸಗಿ ಮತ್ತು ಸಾರ್ವಜನಿಕರ ವಲಯದ ಬ್ಯಾಂಕ್‌ಗಳು ಆಗಸ್ಟ್‌ನಲ್ಲಿ 14 ದಿನ ರಜೆ ಇರಲಾಗುತ್ತದೆ. ಆದರೂ ಎಲ್ಲಾ ದಿನ ಇಂಟರ್ನೆಟ್ ಬ್ಯಾಂಕಿಂಗ್ ದೇಶಾದ್ಯಂತ ಲಭ್ಯವಿರುತ್ತದೆ.

ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ರೂ 2,000 ಮುಖಬೆಲೆಯ ನೋಟುಗಳನ್ನು ಸೆಪ್ಟೆಂಬರ್ 30, 2023 ರವರೆಗೆ ವಿನಿಮಯ ಮಾಡಿಕೊಳ್ಳಬಹುದು, ಆದ್ದರಿಂದ ಈ ಉದ್ದೇಶಕ್ಕಾಗಿ ಬ್ಯಾಂಕ್‌ಗೆ ಭೇಟಿ ನೀಡಲು ಯೋಜಿಸುತ್ತಿರುವ ಜನರು ತಮ್ಮ ಭೇಟಿಯನ್ನು ಸಮರ್ಪಕವಾಗಿ ಯೋಜಿಸಲು ಕೆಳಗಿನ ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಬಹುದು.
ಆಗಸ್ಟ್ ತಿಂಗಳ ರಜಾ ದಿನಗಳ ಪಟ್ಟಿ
ಆಗಸ್ಟ್ 6: ತಿಂಗಳ ಮೊದಲ ಭಾನುವಾರ
ಆಗಸ್ಟ್ 8: ಟೆಂಡೋಂಗ್ ಲ್ಹೋ ರಮ್ ಫಾತ್ (ತೆಂಡಾಂಗ್ ಲ್ಹೋ ರಮ್ ಫಾತ್ ಕಾರಣ ಗ್ಯಾಂಗ್ಟಾಕ್‌ನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ)
ಆಗಸ್ಟ್ 12: ತಿಂಗಳ ಎರಡನೇ ಶನಿವಾರ
ಆಗಸ್ಟ್ 13: ತಿಂಗಳ ಎರಡನೇ ಭಾನುವಾರ
ಆಗಸ್ಟ್ 15: ಸ್ವಾತಂತ್ರ್ಯ ದಿನ
ಆಗಸ್ಟ್ 16: ಪಾರ್ಸಿ ಹೊಸ ವರ್ಷ (ಪಾರ್ಸಿ ಹೊಸ ವರ್ಷವನ್ನು ಆಚರಿಸಲು ಬೇಲಾಪುರ್, ಮುಂಬೈ ಮತ್ತು ನಾಗ್ಪುರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ)
ಆಗಸ್ಟ್ 18: ಶ್ರೀಮಂತ ಶಂಕರದೇವರ ತಿಥಿ (ಶ್ರೀಮಂತ ಶಂಕರದೇವರ ತಿಥಿಯ ನಿಮಿತ್ತ ಗುವಾಹಟಿಯಲ್ಲಿ ಬ್ಯಾಂಕ್‌ಗಳು ರಜೆ ಇರುತ್ತವೆ)
ಆಗಸ್ಟ್ 20: ಮೂರನೇ ಭಾನುವಾರ
ಆಗಸ್ಟ್ 26: ತಿಂಗಳ ನಾಲ್ಕನೇ ಶನಿವಾರ
ಆಗಸ್ಟ್ 27: ತಿಂಗಳ ನಾಲ್ಕನೇ ಭಾನುವಾರ
ಆಗಸ್ಟ್ 28: ಮೊದಲ ಓಣಂ (ಮೊದಲ ಓಣಂ ಆಚರಣೆ ಕಾರಣ ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್‌ಗಳು ರಜೆ ಇರಲಿವೆ)
ಆಗಸ್ಟ್ 29: ತಿರುವೋಣಂ (ಕೇರಳದಲ್ಲಿ ತಿರುವೋಣಂ ಆಚರಣೆ ಇರುವ ಕಾರಣ ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ)
ಆಗಸ್ಟ್ 30: ರಕ್ಷಾ ಬಂಧನ (ರಕ್ಷಾ ಬಂಧನದ ನಿಮಿತ್ತ ಜೈಪುರ ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ರಜೆ ಇರಲಿವೆ)
ಆಗಸ್ಟ್ 31: ರಕ್ಷಾ ಬಂಧನ / ಶ್ರೀ ನಾರಾಯಣ ಗುರು ಜಯಂತಿ / ಪಾಂಗ್-ಲಬ್ಸೋಲ್ (ರಕ್ಷಾ ಬಂಧನ / ಶ್ರೀ ನಾರಾಯಣ ಗುರು ಜಯಂತಿ / ಪಾಂಗ್-ಲಬ್ಸೋಲ್ ನಿಮಿತ್ತ ಗ್ಯಾಂಗ್‌ಟಾಕ್, ಡೆಹ್ರಾಡೂನ್, ಕಾನ್ಪುರ್, ಕೊಚ್ಚಿ, ಲಕ್ನೋ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ)












Click it and Unblock the Notifications