Get Updates
Get notified of breaking news, exclusive insights, and must-see stories!

Bank Holidays: ಮುಂದಿನ 09 ದಿನ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ: ಯಾವ ದಿನಾಂಕ? ಕಾರಣಗಳು

Bank Holidays Updates: ಹಣಕಾಸು ವಹೀವಾಟು ಸೇರಿದಂತೆ ಬ್ಯಾಂಕಿಂಗ್ ಯಾವುದೇ ಕೆಲಸಗಳು ಇದ್ದರೂ ಸಹಿತ ಬೇಗ ಮುಗಿಸಿಕೊಳ್ಳುವುದು ಒಳಿತು. ಏಕೆಂದರೆ ಸಾಲು ಸಾಲು ರಜೆಗಳು ಎದುರಾಗಲಿದ್ದು, ಬ್ಯಾಂಕ್‌ಗಳು ಕೆಲವು ದಿನಗಳವರೆಗೆ ಬಂದ್ ಆಗಲಿವೆ. ಮುಂದಿನ ಸುಮಾರು 09 ದಿನಗಳ ಕಾಲ ಬ್ಯಾಂಕ್‌ಗಳು ಕಾರ್ಯಾಚರಣೆ ಮಾಡುವುದಿಲ್ಲ. ಅದಕ್ಕೆ ಕಾರಣ, ರಜಾದಿನಗಳು, ದಿನಾಂಕದ ವಿವರ ಇಲ್ಲಿದೆ.

ಏಪ್ರಿಲ್ ಅಂತ್ಯದಲ್ಲಿ ಹಾಗೂ ಮೇ ತಿಂಗಳ ಆರಂಭದಲ್ಲಿ ನಿರಂತರ ರಜೆಗಳು ಎದುರಾಗಲಿವೆ. ಏಪ್ರಿಲ್ 26ರಿಂದ ಮುಂದಿನ ತಿಂಗಳ ಮೇ 12ರ ಮಧ್ಯದಲ್ಲಿ ಬ್ಯಾಂಕುಗಳು ಒಟ್ಟು 9 ದಿನಗಳವರೆಗೆ ಮುಚ್ಚಲಿವೆ. ಈ ರಜೆ ಪಟ್ಟಿಯಲ್ಲಿ ಎರಡು ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರ ಇವೆ.

Bank Holidays in 9 Days from April 26 to May 12th Public To Visit Before Closing

ಬುದ್ಧ ಪೂರ್ಣಿಮಾ ಮತ್ತು ರವೀಂದ್ರನಾಥ ಟ್ಯಾಗೋರ್ ಜಯಂತಿ ಸೇರಿದಂತೆ ಇತರ ಹಬ್ಬಗಳ ಆಚರಣೆ ನಡೆಯಲಿದೆ. ಈ ಸಂಬಂಧ ಬ್ಯಾಂಕ್ ರಜೆ ಪಡೆಯಲಿದ್ದು, ನಿಮ್ಮ ಪಾಸ್‌ಬುಕ್, ಇತರ ಹಣಕಾಸು ವಹೀವಾಟ, ಖಾತೆ ತೆರೆಯುವುದು ಸೇರಿದಂತೆ ಇನ್ನಿತರ ವಹೀವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ರಜೆಗಳು ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಆಗುವುದಿಲ್ಲ. ಚೆಕ್‌ಬುಕ್ ಪಾಸ್‌ಬುಕ್ ಸೇರಿದಂತೆ ಬ್ಯಾಂಕಿಂಗ್ ಸಂಬಂಧಿತ ಕೆಲಸಗಳ ಮೇಲೆ ಪರಿಣಾಮ ಬೀರಬಹುದು. ಆದಾಗ್ಯೂ, ನೀವು ಆನ್‌ಲೈನ್ ಸೇವೆಗಳನ್ನು ಪಡೆಯಬಹುದು.

Take a Poll

ದೇಶದಲ್ಲಿ ಬ್ಯಾಂಕ್ ರಜಾದಿನಗಳಲ್ಲಿ ರಾಷ್ಟ್ರೀಯ ರಜಾದಿನಗಳು (ಗೆಜೆಟೆಡ್ ರಜಾದಿನಗಳು) ಹಾಗೂ ಸರ್ಕಾರಿ ರಜಾದಿನಗಳು ಸೇರಿದಂತೆ ಪಟ್ಟಿ ಸಿದ್ಧಪಡಿಸಲಾಗಿರುತ್ತದೆ. ಎಲ್ಲ ರಾಜ್ಯಗಳಲ್ಲಿ ಬ್ಯಾಂಕ್ ರಜೆಗಳು ಒಂದೇ ರೀತಿಯಾಗಿರುವುದಿಲ್ಲ. ಅಲ್ಲಿನ ಹಬ್ಬ ಹರಿದಿನ, ಆಚರಣೆ ನೋಡಿಕೊಂಡು ರಜೆ ಇರುತ್ತವೆ. ರಾಷ್ಟ್ರೀಯ ರಜೆಗಳು ಎಲ್ಲ ಬ್ಯಾಂಕ್‌ಗಳಿಗೆ ಅನ್ವಯಿಸುತ್ತವೆ. ಪ್ರಾದೇಶಿಕ ಬ್ಯಾಂಕ್ ರಜೆಗಳು ಆಯಾ ರಾಜ್ಯಗಳಿಗೆ ಬಿಟ್ಟದ್ದಾಗಿರುತ್ತದೆ. 09 ದಿನಗಳ ಬ್ಯಾಂಕ್ ರಜೆ ಪಟ್ಟಿ ವಿವರ ಹೀಗಿದೆ.

Bank Holidays in 9 Days from April 26 to May 12th Public To Visit Before Closing

ಬ್ಯಾಂಕ್ ಏಪ್ರಿಲ್-ಮೇ ರಜಾ ದಿನ ಪಟ್ಟಿ

ಏಪ್ರಿಲ್ 26 : 4ನೇ ಶನಿವಾರ

ಏಪ್ರಿಲ್ 27: ಭಾನುವಾರ

ಏಪ್ರಿಲ್ 29: ಪರಶುರಾಮ ಜಯಂತಿ (ಶಿಮ್ಲಾ)

ಏಪ್ರಿಲ್ 30: ಅಕ್ಷಯ ತೃತೀಯ (ಬೆಂಗಳೂರು)

ಮೇ 4: ಭಾನುವಾರ

ಮೇ 7 : ಗುರು ರವೀಂದ್ರನಾಥ ಟ್ಯಾಗೋರ್ ಜಯಂತಿ

ಮೇ 10 : 2ನೇ ಶನಿವಾರ

ಮೇ 11: ಭಾನುವಾರ

ಮೇ 12 ಬುದ್ಧ ಪೂರ್ಣಿಮಾ

ಈ ಮೇಲಿನ ರಜೆ ದಿನಗಳಂತೆ ಸಾರ್ವಜನಿಕರು ನೀವು ಆನ್‌ಲೈನ್ ಸೇವೆಗಳನ್ನು ಪಡೆಯಬಹುದಾಗಿದೆ. ಎಂದಿನಂತೆ ಯುಪಿಐ, ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್‌ ಸೇರಿ ಡಿಜಿಟಲ್ ಎಲ್ಲ ಸೇವೆ ಇರುತ್ತದೆ. ನೀವು ಹಣ ವರ್ಗಾವಣೆಗೆ, ಇತರರಿಂದ ಹಣ ಜಮೆ ಮಾಡಿಸಿಕೊಳ್ಳಲು ಯುಪಿಐ ಆಧಾರಿತ ಹಣಕಾಸು ಆಪ್ ಬಳಸಬೇಕಿರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+