ಅಯೋಧ್ಯೆ ವಿವಾದ : ಸುಪ್ರೀಂಕೋರ್ಟ್‌ ತೀರ್ಪಿನ 5 ಪ್ರಮುಖ ಅಂಶಗಳು

ಬೆಂಗಳೂರು, ಮಾರ್ಚ್ 08 : ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಿ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಆದೇಶ ನೀಡಿದೆ. ಸಂಧಾನಕ್ಕಾಗಿ ಸಮಿತಿಯೊಂದನ್ನು ನ್ಯಾಯಾಲಯ ರಚನೆ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಾಯ್ ನೇತೃತ್ವದ ಐವರು ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನಿಕ ಪೀಠ ಶುಕ್ರವಾರ ಅರ್ಜಿಯ ತೀರ್ಪನ್ನು ಪ್ರಕಟಿಸಿದೆ. ಸಂಧಾನದ ಮೂಲಕ ಶಾಶ್ವತ ಪರಿಹಾರ ಕೊಂಡುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಸುಪ್ರೀಂಕೋರ್ಟ್ ರಚನೆ ಮಾಡಿರುವ ಸಮಿತಿಗೆ ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ಅವರು ಅಧ್ಯಕ್ಷರಾಗಿದ್ದಾರೆ. ಶ್ರೀ ರವಿಶಂಕರ್ ಗುರೂಜಿ, ಹಿರಿಯ ವಕೀಲ ಶ್ರೀರಾಮ್ ಪಂಚು ಅವರು ಸಹ ಸಮಿತಿಯಲ್ಲಿರಬೇಕು ಎಂದು ಕೋರ್ಟ್ ಹೇಳಿದೆ.

ಸಂಧಾನ ಪ್ರಕ್ರಿಯೆ ಫೈಜಾಬಾದ್‌ನಲ್ಲಿ ನಡೆಯಬೇಕು. ಇದರ ಸಂಪೂರ್ಣ ವಿಡಿಯೋ ಚಿತ್ರೀಕರಣವಾಗಬೇಕು. ನಾಲ್ಕು ವಾರಗಳವೊಳಗೆ ಸಮಿತಿ ಮೊದಲ ವರದಿಯನ್ನು ಸಲ್ಲಿಸಬೇಕು. ಉತ್ತರ ಪ್ರದೇಶ ಸರ್ಕಾರ ಸಂಧಾನಕಾರರಿಗೆ ಎಲ್ಲಾ ಸೌಲಭ್ಯ ಒದಗಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶದಲ್ಲಿ ಸೂಚನೆ ನೀಡಿದೆ...

ಸುಪ್ರೀಂಕೋರ್ಟ್ ಆದೇಶ

ಸುಪ್ರೀಂಕೋರ್ಟ್ ಆದೇಶ

ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಿ ಎಂದು ಸುಪ್ರೀಂಕೋರ್ಟ್ ಹೇಳಿದೆ. ಸಂಧಾನದ ಸಮಿತಿಗೆ ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ಅವರು ಅಧ್ಯಕ್ಷರಾಗಿದ್ದಾರೆ. ಶ್ರೀ ರವಿಶಂಕರ್ ಗುರೂಜಿ, ಹಿರಿಯ ವಕೀಲ ಶ್ರೀರಾಮ್ ಪಂಚು ಅವರು ಸದಸ್ಯರು.

8 ವಾರದದಲ್ಲಿ ಪ್ರಕ್ರಿಯೆ ಮುಗಿಸಿ

8 ವಾರದದಲ್ಲಿ ಪ್ರಕ್ರಿಯೆ ಮುಗಿಸಿ

ಸಂಧಾನ ಸಮಿತಿ 8 ವಾರಗಳಲ್ಲಿ ಸಂಧಾನ ಪ್ರಕ್ರಿಯೆ ಮುಗಿಸಬೇಕು ಎಂದು ಕೋರ್ಟ್ ಹೇಳಿದೆ. ಮಾರ್ಚ್ 15 ರಿಂದ ಮೇ 15ರೊಳಗೆ ಸಂಧಾನ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ದೇಶ ಲೋಕಸಭಾ ಚುನಾವಣೆ ಫಲಿತಾಂಶ ಎದುರು ನೋಡುತ್ತಿರುವಾಗ ಈ ವಿವಾದ ಸಂಧಾನವೂ ಪೂರ್ಣಗೊಳ್ಳಲಿದೆ.

4 ವಾರದಲ್ಲಿ ಮೊದಲ ವರದಿ

4 ವಾರದಲ್ಲಿ ಮೊದಲ ವರದಿ

ಸುಪ್ರೀಂಕೋರ್ಟ್ ರಚನೆ ಮಾಡಿರುವ ಸಂಧಾನ ಸಮಿತಿ ನಾಲ್ಕು ವಾರದಲ್ಲಿ ಮೊದಲ ವರದಿಯನ್ನು ಸಲ್ಲಿಸಬೇಕಾಗಿದೆ. ಉತ್ತರ ಪ್ರದೇಶ ಸರ್ಕಾರ ಸಂಧಾನಕಾರರಿಗೆ ಎಲ್ಲಾ ಸೌಲಭ್ಯ ಒದಗಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶದಲ್ಲಿ ಸೂಚನೆ ಕೊಟ್ಟಿದೆ.

ಸಂಧಾನ ಎಲ್ಲಿ ನಡೆಯಬೇಕು

ಸಂಧಾನ ಎಲ್ಲಿ ನಡೆಯಬೇಕು

ಸಂಧಾನ ಪ್ರಕ್ರಿಯೆಯನ್ನು ಉತ್ತರ ಪ್ರದೇಶದ ಫೈಜಾಬಾದ್‌ನಲ್ಲಿ ನಡೆಸಬೇಕು ಎಂದು ಕೋರ್ಟ್ ಹೇಳಿದೆ. ಸಂಧಾನ ಪ್ರಕ್ರಿಯೆಯ ಸಂಪೂರ್ಣ ವಿಡಿಯೋ ಚಿತ್ರೀಕರಣವಾಗಬೇಕು ಎಂದು ಸೂಚನೆ ನೀಡಲಾಗಿದೆ.

ಮಾಧ್ಯಮಗಳಿಗೆ ಪ್ರವೇಶವಿಲ್ಲ

ಮಾಧ್ಯಮಗಳಿಗೆ ಪ್ರವೇಶವಿಲ್ಲ

ಗೌಪ್ಯತೆಯನ್ನು ಕಾಪಾಡುವ ಉದ್ದೇಶದಿಂದ ಸಂಧಾನ ಪ್ರಕ್ರಿಯೆ ನಡೆಯುವಾದ ವರದಿಯನ್ನು ಮಾಡದಂತೆ ಮಾಧ್ಯಮಗಳಿಗೆ ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+