'ನಟಿ ಮೇಲೆ ನಡೆದಿದ್ದು ವ್ಯವಸ್ಥಿತವಾದ ಹಲ್ಲೆ'
ನಟಿ ಮೇಲೆ ಹಲ್ಲೆ ನಡೆದಿರುವುದರ ಹಿಂದೆ ವ್ಯವಸ್ಥಿತವಾದ ಸಂಚಿದೆ. ಆದರೆ, ಪೊಲೀಸರ ತನಿಖೆ ಬಗ್ಗೆ ನಂಬಿಕೆ ಇದೆ ಎಂದು ನಟಿ ಮಂಜು ವಾರಿಯರ್ ಪ್ರತಿಕ್ರಿಯಿಸಿದ್ದಾರೆ.
ತಿರುವನಂತಪುರಂ, ಫೆಬ್ರವರಿ 24: ನಟಿ ಮೇಲೆ ಹಲ್ಲೆ ನಡೆದಿರುವುದರ ಹಿಂದೆ ವ್ಯವಸ್ಥಿತವಾದ ಸಂಚಿದೆ. ಆದರೆ, ಪೊಲೀಸರ ತನಿಖೆ ಬಗ್ಗೆ ನಂಬಿಕೆ ಇದೆ ಎಂದು ನಟಿ ಮಂಜು ವಾರಿಯರ್ ಪ್ರತಿಕ್ರಿಯಿಸಿದ್ದಾರೆ.
ಯುವನಟಿಯ ಮೇಲಿನ ಹಲ್ಲೆ ಪ್ರಕರಣಕ್ಕ್ ಸಂಬಂಧಿಸಿದಂತೆ ನನ್ನದೇನೂ ತಪ್ಪಿಲ್ಲ ಎಂದು ಜನಪ್ರಿಯ ಸ್ಟಾರ್ ನಟ ದಿಲೀಪ್ ಹೇಳಿಕೆ ನೀಡಿದ ಬಳಿಕ ಅವರ ಮಾಜಿ ಪತ್ನಿ ಮಂಜು ಪ್ರತಿಕ್ರಿಯಿಸಿದ್ದಾರೆ.
ಹಲ್ಲೆ ಹಿಂದಿನ ವ್ಯಕ್ತಿಗಳು, ಪಿತೂರಿ ಎಲ್ಲವೂ ಬಹಿರಂಗವಾಗಲಿ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ಮಂಜು ವಾರಿಯರ್ ಹೇಳಿದ್ದಾರೆ.[ನಟಿ ಮೇಲೆ ಕಿರುಕುಳ, ನನ್ನ ಪಾತ್ರವಿಲ್ಲ ಎಂದ ಸ್ಟಾರ್ ನಟ]

ದಿಲೀಪ್ ಹೇಳಿಕೆ: ನನ್ನ ಮನಗೆ ವಿಚಾರಣೆಗಾಗಿ ಪೊಲೀಸರು ಬಂದಿಲ್ಲ. ನಾನು ಕೂಡಾ ಠಾಣೆಗೆ ಹೋಗಿಲ್ಲ. ಈ ಕೇಸಿನಲ್ಲಿ ನಾನು ಆರೋಪಿಯಾಗಿದ್ದರೂ ಪೊಲೀಸರು ನನ್ನನ್ನು ವಿಚಾರಣೆ ಒಳಪಡಿಸಲ್ಲ ಎಂಬ ಆಧಾರ ರಹಿತ ಸುದ್ದಿಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಡಲಾಗುತ್ತಿದೆ. ಇದೊಂದು ವ್ಯವಸ್ಥಿತ ಸಂಚು ಎಂದು ದಿಲೀಪ್ ಹೇಳಿದ್ದರು. [ಮಲಯಾಳಿ ನಟಿ ಮೇಲೆ ದೌರ್ಜನ್ಯ : ಆರೋಪಿ ನಂ.1 ಪಲ್ಸರ್ ಸುನಿ ಅರೆಸ್ಟ್]
ನಟಿ ಮಂಜು ವಾರಿಯರ್ ಹಾಗೂ ದಿಲೀಪ್ ನಡುವಿನ ವಿವಾಹ ಬಂಧನ ಮುರಿದು ನಂತರ ದಿಲೀಪ್ ಅವರು ಇತ್ತೀಚೆಗೆ ನಟಿ ಕಾವ್ಯ ಮಾಧವನ್ ಅವರನ್ನು ಮದುವೆಯಾಗಿದ್ದು ಗೊತ್ತಿರಬಹುದು. ಆದರೆ, ಮಂಜು ವಾರಿಯರ್ ಅವರೊಂದಿಗೆ ವಿವಾಹ ವಿಚ್ಛೇದನ ಪಡೆಯುವ ಸಂದರ್ಭದಲ್ಲಿ ಈಗ ಹಲ್ಲೆಗೊಳಲಾಗಿರುವ ನಟಿ ಅವರು ಮಂಜು ಪರ ನಿಂತಿದ್ದರು. ಇದರಿಂದ ದಿಲೀಪ್ ಹಾಗೂ ನಟಿ ನಡುವೆ ಕಂದಕ ಏರ್ಪಟ್ಟಿತ್ತು ಎಂಬ ಸುದ್ದಿಯಿತ್ತು.
ಈಗ ಹಲ್ಲೆಗೊಳಗಾದ ನಟಿ ಮೇಲೆ ಚಿತ್ರರಂಗ ನಿಷೇಧ, ನಿರ್ಬಂಧ ಹೇರಲು ಪರೋಕ್ಷವಾಗಿ ಕಾರಣರಾಗಿದ್ದರು ಎಂಬ ಸುದ್ದಿ ಹಬ್ಬಿತ್ತು. ಆದರೆ, ಮಂಜು ಇದಕ್ಕೆಲ್ಲ ಸ್ಪಷ್ಟನೆ ನೀಡಿದ್ದರು. [ಮಲಯಾಳಂ ನಟಿ ದೌರ್ಜನ್ಯದ ಹಿಂದೆ ಕೊಟೇಷನ್ ಮಾಫಿಯಾ?]












Click it and Unblock the Notifications