ಪಾಕ್ ಗೆ ಭಾರತೀಯ ಸೇನೆಯ ಮಾಹಿತಿ ನೀಡುತ್ತಿದ್ದೆ: ಬಂಧಿತ ಗೂಢಚಾರಿ

Posted By:
Subscribe to Oneindia Kannada

ಜೋಧಪುರ, ಫೆಬ್ರವರಿ 15: ಇತ್ತೀಚೆಗೆ ರಾಜಸ್ಥಾನದಲ್ಲಿರುವ ಭಾರತ- ಪಾಕಿಸ್ತಾನ ಗಡಿಯ ಬಳಿ ಸಿಕ್ಕಿಬಿದ್ದಿದ್ದ ಹಾಜಿ ಖಾನ್ ಎಂಬ ಪಾಕಿಸ್ತಾನ ಮೂಲದ ಗೂಢಚಾರಿ, ಕಳೆದ ಮೂರು ವರ್ಷಗಳಿಂದ ಭಾರತೀಯ ಸೇನೆಯ ಕೆಲವಾರು ಮಹತ್ವದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದುದಾಗಿ ಒಪ್ಪಿಕೊಂಡಿದ್ದಾನೆ.

ಬಂಧನವಾದ ದಿನದಿಂದಲೇ ಆತನನ್ನು ಗುಪ್ತಚರ ಇಲಾಖೆ ಅಧಿಕಾರಿಗಳು ತೀವ್ರವಾದ ವಿಚಾರಣೆಗೊಳಪಡಿಸಲಾಗಿತ್ತು. ಈ ವಿಚಾರಣೆ ವೇಳೆ, ಆತ ಕಳೆದ ಮೂರು ವರ್ಷಗಳಿಂದಲೂ ಪಾಕಿಸ್ತಾನಕ್ಕಾಗಿ ಗೂಢಚರ್ಯೆ ಮಾಡುತ್ತಿದ್ದುದಾಗಿ ತಿಳಿಸಿದ್ದಾನೆ. ಅಲ್ಲದೆ, ಥಾರ್ ಎಕ್ಸ್ ಪ್ರೆಸ್ ರೈಲಿನ ಮೂಲಕ ಪಾಕಿಸ್ತಾನಕ್ಕೂ ಹೋಗಿ ಬಂದಿದ್ದಾಗಿ ತಿಳಿಸಿದ್ದಾನೆ.[ಜೈಪುರದ ಬಳಿ ಪಾಕಿಸ್ತಾನದ ಶಂಕಿತ ಗೂಢಚಾರಿ ಬಂಧನ]

Arrested Pak spy was passing Indian military info to Pak ISI for 3 yrs

ಅಂದಹಾಗೆ, ಖಾನ್ ಅವರ ಪತ್ನಿ ಪಾಕಿಸ್ತಾನದ ರಹೀಂಮ್ಯಾರ್ ಖಾನ್ ನಲ್ಲಿ ಇದ್ದಾಳೆಂದು ಆತ ಹೇಳಿಕೊಂಡಿದ್ದು, ಭಾರತೀಯ ಸೇನೆಯ ಬಗೆಗಿನ ಮಾಹಿತಿಗಳನ್ನು ರವಾನಿಸುವುದಕ್ಕಾಗಿ ಪಾಕಿಸ್ತಾನದ ಐಎಸ್ಐ, ಆಕೆಯ ಬ್ಯಾಂಕ್ ಅಕೌಂಟ್ ಗೆ 15 ಲಕ್ಷ ರು. ಹಾಕುತ್ತಿದ್ದುದಾಗಿಯೂ ಆತ ಬಾಯಿಬಿಟ್ಟಿದ್ದಾನೆ.[ಚೆನ್ನೈ: ಶ್ರೀಲಂಕಾ ಮೂಲದ ಪಾಕ್ ಗೂಢಚಾರಿ ಬಂಧನ]

ಕಳೆದ ಮೂರು ವರ್ಷಗಳಲ್ಲಿ ಆತ ಭಾರತೀಯ ಸೇನೆಯ ಬಗೆಗಿನ ಮಾಹಿತಿಗಳನ್ನು ಮಾತ್ರವಲ್ಲದೆ, ವಾಯು ಸೇನೆ, ರಾಜಸ್ಥಾನದ ಜೈಸ್ಮಲೇರ್, ಜೋಧ್ ಪುರದಲ್ಲಿರುವ ಭಾರತೀಯ ಗಡಿ ರಕ್ಷಣಾ ಪಡೆ, ಬಾರ್ಮರ್ ನಲ್ಲಿರುವ ಉತಾರ್ ಲಾಯ್ ಏರ್ ಬೇಸ್ ಹಾಗೂ ಗುಜರಾತ್ ನ ರಾಜಧಾನಿ ಗಾಂಧಿನಗರದ ಕೆಲವಾರು ಮಾಹಿತಿಗಳನ್ನೂ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Suspected Pakistan spy Haji Khan had been passing on defense - related information to the ISI and two other agencies for the past three years, his interrogators said on Tuesday.
Please Wait while comments are loading...