Air India: ಏರ್ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ
Air India: ಏರ್ ಇಂಡಿಯಾ ವಿಮಾನವು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಇದೀಗ ಏರ್ ಇಂಡಿಯಾ ವಿಮಾನದಲ್ಲಿ ಭಾರತೀಯ ಪ್ರಯಾಣಕರೊಬ್ಬರು ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಇಂದು (ಏಪ್ರಿಲ್ 9) ನಡೆದಿದೆ. ಹಾಗಾದ್ರೆ ಮುಂದೇನಾಯ್ತು ಎಂದು ಇಲ್ಲಿ ತಿಳಿಯಿರಿ.
ನವದೆಹಲಿಯಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಭಾರತೀಯ ಪ್ರಜೆಯೊಬ್ಬ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಬಗ್ಗೆ ಇಂದು ವರದಿ ಆಗಿದೆ.

ದೆಹಲಿಯಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಸಂಖ್ಯೆ AI2336ನಲ್ಲಿ ಈ ಘಟನೆ ನಡೆದಿದೆ. ಇನ್ನು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಸಿಎ ತನಿಖೆಗೆ ಆದೇಶಿಸಿದೆ. ಮಾಹಿತಿ ಪ್ರಕಾರ, AI 2336 ವಿಮಾನದಲ್ಲಿ ಪ್ರಯಾಣದ ವೇಳೆ ಪ್ರಯಾಣಿಕನೋರ್ವ ಕುಡಿದ ಅಮಲಿನಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಅಧಿಕಾರಿಗಳಿಗೆ ವರದಿ ಮಾಡಲಾಗಿದ್ದು, ಏರ್ ಇಂಡಿಯಾ ಬ್ಯಾಂಕಾಕ್‌ನಲ್ಲಿ ಸಹ ಪ್ರಯಾಣಿಕನಿಗೆ ಸಹಾಯ ಮಾಡಲು ಮುಂದಾಗಿದೆ. ಅಲ್ಲದೆ, ಈ ಬಗ್ಗೆ ಏರ್ ಇಂಡಿಯಾ ವಿಮಾನಯಾನ ಕಂಪನಿಯು ಡಿಜಿಸಿಎ ವರದಿ ನೀಡಿದೆ ಎಂದು ಎಂದು ತಿಳಿಸಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಈ ಬಗ್ಗೆ ಮಾತನಾಡಿದ್ದು, ಈ ಕುರಿತು ವಿಮಾನಯಾನ ಕಂಪನಿ ಜೊತೆಗೆ ಸಚಿವಾಲಯವು ಚರ್ಚೆ ನಡೆಸಲಿದೆ. ಕೃತ್ಯ ಎಸಗಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಈ ರೀತಿಯ ಘಟನೆಗಳು ಸಂಭವಿಸಿದ ಸಂದರ್ಭಗಳಲ್ಲಿ ಸಚಿವಾಲಯವು ಸೂಕ್ತ ಕ್ರಮ ಕೈಗೊಂಡಿದೆ. ಹಾಗೆಯೇ ಇದೀಗ ತಪ್ಪು ನಡೆದಿದ್ದರೆ ಈ ವ್ಯಕ್ತಿ ವಿರುದ್ಧವೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಯಾಣಿಕನ ವಿರುದ್ಧ ಕಠಿಣ ಕ್ರಮ: ಇದೇ ವೇಳೆ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿ ಅಶಿಸ್ತಿನಿಂದ ವರ್ತಿಸಿದ ಪ್ರಯಾಣಿಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಏರ್ ಇಂಡಿಯಾ ಸಂಸ್ಥೆ ಘೋಷಣೆ ಮಾಡಿದೆ.
ಅಲ್ಲದೆ, ಘಟನೆಯನ್ನು ನಿರ್ಣಯಿಸಲು ಮತ್ತು ಅಶಿಸ್ತಿನ ಪ್ರಯಾಣಿಕನ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮವನ್ನು ನಿರ್ಧರಿಸಲು ಸ್ಥಾಯಿ ಸ್ವತಂತ್ರ ಸಮಿತಿಯನ್ನು ಕರೆಯಲಾಗುವುದು. ಅಂತಹ ವಿಷಯಗಳಲ್ಲಿ ಡಿಜಿಸಿಎ ನಿಗದಿಪಡಿಸಿದ ಎಸ್‌ಒಪಿಗಳನ್ನು ಏರ್ ಇಂಡಿಯಾ ಅನುಸರಿಸುವುದನ್ನು ಮುಂದುವರೆಸಿದೆ ಎಂದು ಏರ್ ಇಂಡಿಯಾ ಹೇಳಿದೆ.












Click it and Unblock the Notifications