ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಸ್ಫೋಟಕ ಆರೋಪ!
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯುವಲ್ಲಿ 5 ಗ್ಯಾರಂಟಿ ಯೋಜನೆಗಳ ಆಶ್ವಾಸನೆ ದೊಡ್ಡ ಪಾತ್ರ ವಹಿಸಿತ್ತು. ಇದೇ ಕಾರಣಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಯುದ್ಧವೂ ನಡೆಯುತ್ತಿದೆ. ಅದರಲ್ಲೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನೇ ಬಿಜೆಪಿ ಅಸ್ತ್ರ ಮಾಡ್ಕೊಂಡು ನಿತ್ಯ ವಾಗ್ದಾಳಿ ನಡೆಸುತ್ತಿದ್ದು, ಈ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಸ್ಫೋಟಕ ಆರೋಪ ಮಾಡಿದ್ದಾರೆ.
ಅಂದಹಾಗೆ ಕಾಂಗ್ರೆಸ್ ಪಕ್ಷ ಚುನಾವಣೆ ಸಮಯದಲ್ಲಿ ನೀಡಿದ್ದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ ಸೇರಿದಂತೆ ಪಂಚ ಗ್ಯಾರಂಟಿ ಕುರಿತಾಗಿ ಬಿಜೆಪಿ ಗಂಭೀರ ಆರೋಪ ಮಾಡಿತ್ತು. ಅದ್ರಲ್ಲೂ ಈ ಯೋಜನೆಗಳಿಂದ ಕರ್ನಾಟಕ ಆರ್ಥಿಕವಾಗಿ ದಿವಾಳಿ ಆಗಲಿದೆ, ಹಾಗೇ ಕರ್ನಾಟಕ ರಾಜ್ಯ ಸಾಲದ ಸುಳಿಗೆ ಸಿಲುಕಲಿದೆ ಅಂತಾ ಬಿಜೆಪಿ ನಾಯಕರು ಆರೋಪಿಸಿದ್ದರು. ಆದರೆ ಇದೀಗ ಪಂಚರಾಜ್ಯಗಳ ಚುನಾವಣೆಯಲ್ಲಿ ಖುದ್ದಾಗಿ ಬಿಜೆಪಿ ಪಕ್ಷವೇ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಕಾಪಿ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಖರ್ಗೆ ಆರೋಪಿಸಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿ ಕಾಪಿ ಮಾಡ್ತಾ ಬಿಜೆಪಿ?
ಮಲ್ಲಿಕಾರ್ಜುನ ಖರ್ಗೆ ಅವ್ರು ಹೇಳಿದಂತೆ, ಕಾಂಗ್ರೆಸ್ ಗ್ಯಾರಂಟಿ ನಕಲು ಮಾಡುತ್ತಾ ಬಿಜೆಪಿ ಚುನಾವಣೆ ಪ್ರಣಾಳಿಕೆಯಲ್ಲಿ ಸೇರಿಸಿದೆ ಅನ್ನೊ ಆರೋಪ ಮಾಡಿದ್ದಾರೆ. ಈ ಕುರಿತಾಗಿ ಖರ್ಗೆ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ಅಂದ್ರೆ 'X' ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇದೇ ಪೋಸ್ಟ್‌ನಲ್ಲಿ ವಾಗ್ದಾಳಿ ನಡೆಸಿರುವ ಮಲ್ಲಿಕಾರ್ಜುನ ಖರ್ಗೆ ಅವರು, ಇದರ ಜೊತೆಗೆ ಗಂಭೀರ ಆರೋಪ ಮಾಡಿದ್ದಾರೆ.
आज राजस्थान के वैर विधानसभा, ज़िला भरतपुर और तिजारा में चुनावी सभाओं को संबोधित करूंगा।
— Mallikarjun Kharge (@kharge) November 18, 2023
भाजपा के पास न नीयत है, ना नीति है !
कांग्रेस ने राजस्थान व अन्य राज्यों में गारंटी के प्रारूप में जन-कल्याण के लिए ठोस कार्यक्रम दिए हैं।
मोदी जी और भाजपा ने काफ़ी प्रयासों के बाद हमारी… pic.twitter.com/6lJbBkhJG3
ಗ್ಯಾರಂಟಿಗಳ ನಕಲು ಮಾಡುವುದು...
ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ ಖರ್ಗೆ ಅವರು, 'ಜನಗಳ ಕಲ್ಯಾಣಕ್ಕೆ ಕಾಂಗ್ರೆಸ್ ಗ್ಯಾರಂಟಿ ಯೋಜನೆ ರೂಪದಲ್ಲಿ ಬಲವಾದ ಕಾರ್ಯಕ್ರಮ ನೀಡುತ್ತಿದೆ. ಚುನಾವಣೆಯಲ್ಲಿ ಗೆಲ್ಲಲು ಪ್ರಧಾನಿ ಮೋದಿ & ಬಿಜೆಪಿ ಹಲವು ಪ್ರಯತ್ನಗಳ ನಡೆಸಿದ ನಂತರ, ಕಾಂಗ್ರೆಸ್ ನೀಡಿದ ಗ್ಯಾರಂಟಿಗಳ ನಕಲು ಮಾಡುವುದು ಉತ್ತಮ ಎಂದು ಭಾವಿಸಿದಂತೆ ಇದೀಗ ಕಾಣುತ್ತಿದೆ. ಅಲ್ಲದೆ ಚುನಾವಣೆ ಮೊದಲು ಬಿಜೆಪಿ ತನ್ನ ಕಾರ್ಯಸೂಚಿಗಳನ್ನು ಅವಸರದಲ್ಲಿ ಪೂರೈಸುವ ವಿಫಲ ಯತ್ನ ಮಾಡಿದೆ' ಎಂದು ಕೂಡ ಖರ್ಗೆ ಅವರು ಆರೋಪಿಸಿದ್ದಾರೆ.

ಒಟ್ನಲ್ಲಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಗ್ಯಾರಂಟಿ ವಾರ್ ಇದೀಗ ದೇಶದ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ಪಂಚರಾಜ್ಯ ಚುನಾವಣೆಗಾಗಿ ಬಿಜೆಪಿ ಹಲವು ಕೊಡುಗೆಗಳ ನೀಡಲು ಮುಂದಾಗಿದೆ. ಇದು ಕಾಂಗ್ರೆಸ್ ನಾಯಕರಿಗು ಅಸ್ತ್ರ ಕೊಟ್ಟಂತಾಗಿದೆ.
ಹೀಗಾಗಿಯೇ ಬಿಜೆಪಿ ಈಗ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಕಾಪಿ ಮಾಡುತ್ತಿದೆ ಅಂತಾ ಖರ್ಗೆ ಅವ್ರು ಆರೋಪ ಮಾಡಿದ್ದಾರೆ. ಆದ್ರೆ ಈ ಬಗ್ಗೆ ಬಿಜೆಪಿ ಕೇಂದ್ರ ನಾಯಕರು ಯಾವ ರೀತಿ ರಿಯಾಕ್ಷನ್ ಕೊಡ್ತಾರೆ? ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications