ಕ್ರಿಶ್ಚಿಯನ್ ನಿಂದ ಕುಟುಂಬಕ್ಕೆ ಹಣ ಸಂದಾಯ! ಆ 'ಕುಟುಂಬ' ಯಾವುದು?
ಬೆಂಗಳೂರು, ಡಿಸೆಂಬರ್ 06 : ಅಗಸ್ಟಾವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಬಂಧಿತನಾಗಿರುವ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಭಾರತದ 'ಕುಟುಂಬ'ಕ್ಕೆ 22,000 ಯುರೋಗಳನ್ನು ಎರಡು ಕಂತಿನಲ್ಲಿ ಸಂದಾಯ ಮಾಡಿರುವ ದಾಖಲೆಗಳು ದಕ್ಕಿವೆ.
57 ವರ್ಷದ ಬ್ರಿಟನ್ ಮೂಲದ ದಲ್ಲಾಳಿ ಕ್ರಿಶ್ಚಿಯನ್ ಮೈಕೆಲ್ ನನ್ನು ದುಬೈನಿಂದ ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಆತನನ್ನು ಸಿಬಿಐನ ವಶಕ್ಕೆ ವಿಚಾರಣೆಗೆಂದು ದೆಹಲಿಯ ವಿಶೇಷ ಸಿಬಿಐ ನ್ಯಾಯಾಲಯ ನೀಡಿದೆ. ವಿಚಾರಣೆ ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ರಹಸ್ಯಗಳು ಬಯಲಾಗುವ ಸಾಧ್ಯತೆಗಳಿವೆ.
ವಿವಿಐಪಿ ಹೆಲಿಕಾಪ್ಟರ್ ಗಳನ್ನು ತಯಾರಿಸುವ ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯಿಂದ 12 ಹೆಲಿಕಾಪ್ಟರ್ ಕೊಳ್ಳಲೆಂದು ಭಾರತದ ವಾಯುಸೇನೆ ಜೊತೆ 2010ರಲ್ಲಿ ಒಪ್ಪಂದವಾಗಿತ್ತು. ಈ ಡೀಲ್ ಕುದುರಿಸಲೆಂದು ಭಾರತದ ರಾಜಕಾರಣಿ ಮತ್ತು ಅಧಿಕಾರಿಗಳಿಗೆ ಲಂಚ ನೀಡಲೆಂದು ಮೈಕೆಲ್ ಗೆ ಅಗಸ್ಟಾ ವೆಸ್ಟ್ ಲ್ಯಾಂಗ್ 225 ಕೋಟಿ ರುಪಾಯಿ ಲಂಚ ನೀಡಿತ್ತು ಎಂಬುದು ಆರೋಪ.
36,000 ಕೋಟಿ ರುಪಾಯಿ ಹಗರಣದಲ್ಲಿ ಇಟಲಿ ಮೂಲದ ರಾಜಕೀಯ ಮುಖಂಡರೊಬ್ಬರ ಹೆಸರು ತಳಕುಹಾಕಿಕೊಂಡಿದೆ. ಅವರು ಯಾರು, ಅವರಿಗೂ ಈ ಹಗರಣಕ್ಕೂ ಏನು ಸಂಬಂಧ? ಒಂದು ಮೂಲದ ಪ್ರಕಾರ, ಬಂಧಿತನಾಗಿರುವ ಕ್ರಿಶ್ಚಿಯನ್ ಮೈಕೆಲ್ ಅವರ ತಂದೆ ಭಾರತದ ಪುರಾತನ ರಾಜಕೀಯ ಕುಟುಂಬದೊಡನೆ ಅತ್ಯಂತ ಸಾಮೀಪ್ಯದ ಸಂಬಂಧ ಹೊಂದಿದ್ದರು. ಅವರು ಯಾರು? ತೀರ್ಪು ಬರುವವರೆಗೆ ಕಾದು ನೋಡೋಣ.

ಕುಟುಂಬಕ್ಕೆ ಎರಡು ಕಂತಿನಲ್ಲಿ ಹಣ ಸಂದಾಯ
'ಕುಟಂಬ'ಕ್ಕೆ ಹಣ ಸಂದಾಯವಾಗಿರುವುದು ಇಟಲಿಯ ಮಿಲಾನ್ ಕೋರ್ಟ್ ಆಫ್ ಅಪೀಲ್ಸ್ ನೀಡಿರುವ ತೀರ್ಪಿನಲ್ಲಿ ದಾಖಲಾಗಿದೆ. ಸ್ವಿಸ್ ಅಧಿಕಾರಿಗಳು ಕಾನೂನಾತ್ಮಕವಾಗಿ ತರಿಸಿಕೊಂಡಿರುವ ಆ ದಾಖಲೆ ಪ್ರಕಾರ, 'ಕುಟುಂಬ'ಕ್ಕೆ ಎರಡು ತಿಂಗಳಲ್ಲಿ 11,000 ಯುರೋಗಳಂತೆ ಎರಡು ಕಂತಿನಲ್ಲಿ ಹಣ ಸಂದಾಯವಾಗಿದೆ. ಇದು ನಿಜವೇ ಆಗಿದ್ದಲ್ಲಿ ವಿಚಾರಣೆಯಲ್ಲಿ ಈ ಬಗ್ಗೆ ಸಿಬಿಐ ಕ್ರಿಶ್ಚಿಯನ್ ಮೈಕೇಲ್ ನಿಂದ ಸತ್ಯ ಸಂಗತಿ ಬಗೆದು ಹಾಕಲಿದೆ. ಆದರೆ, ಯಾವ ಕಾರಣಕ್ಕೆ ಹಣ ಸಂದಾಯವಾಗಿದೆ ಎಂಬುದರ ಬಗ್ಗೆ ಅದರಲ್ಲಿ ವಿವರಣೆಗಳಿಲ್ಲ.

ಮಿಲಿಯನ್ ಡಾಲರ್ ಪ್ರಶ್ನೆ
ಆ ಕುಟುಂಬ ಯಾವುದು? ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ಆ ಕುಟುಂಬಕ್ಕೂ ಈ ಹಗರಣಕ್ಕೂ ಅಥವಾ ದಲ್ಲಾಳಿಗೂ ಏನು ಸಂಬಂಧ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಈ ಕಾರಣದಿಂದಾಗಿಯೇ ರಾಜಸ್ಥಾನದಲ್ಲಿ, ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರದ ಅಂತಿಮ ದಿನ, ಭಾಷಣ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಈ ದಲ್ಲಾಳಿ ಅನೇಕ ರಹಸ್ಯ ಸಂಗತಿಗಳನ್ನು ಹೊರಹಾಕಲಿದ್ದಾನೆ, ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದಿದ್ದರು. ಇದಕ್ಕೆ ಪ್ರತಿಯಾಗಿ, ಮೋದಿಯವರೇ ಈ ಹಗರಣದಲ್ಲಿ ಲಾಭ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಪರಿಹಾರ ರೂಪವಾಗಿ ಕುಟುಂಬಕ್ಕೆ ಹಣ
ಈ ಹಗರಣಕ್ಕೆ ಸಂಬಂಧಿಸದಂತೆ ದಕ್ಕಿರುವ ಮೊದಲ ದಾಖಲೆ ಮಿಲಾನ್ ಕೋರ್ಟ್ ತೀರ್ಪು. ಅದರಲ್ಲಿ ಸಂಕೇತ ರೂಪದಲ್ಲಿ 'ಕುಟುಂಬ'ಕ್ಕೆ ಹಣ ನೀಡಿರುವುದಾಗಿ ನಮೂದಿಸಲಾಗಿದೆ. ಕ್ರಿಶ್ಚಿಯನ್ ಮೈಕೆಲ್ ಒಂದು ಪತ್ರವನ್ನು ಮತ್ತೊಬ್ಬ ದಲ್ಲಾಳಿ ಗುಯ್ಡೋ ಹಶ್ಕೆ ಎಂಬುವವರಿಗೆ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ 'ಪರಿಹಾರ' ರೂಪವಾಗಿ 'ಕುಟುಂಬ'ಕ್ಕೆ ಹಣ ಸಂದಾಯವಾಗಿದೆ ಎಂದು ಬರೆದಿರುವುದಾಗಿ ಕೋರ್ಟ್ ದಾಖಲೆ ತಿಳಿಸಿದೆ. ಏನಿದು ಪರಿಹಾರ? ಆದರೆ, ಇಡೀ ತೀರ್ಪಿನಲ್ಲಿ ಆ 'ಕುಟುಂಬ' ಯಾವುದು ಎಂಬ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂಬುದೇ ಕುತೂಹಲಕರ ಮತ್ತು ರೋಚಕ ಸಂಗತಿ.

ಕುಟುಂಬವೆಂದರೆ ಎಸ್ಪಿ ತ್ಯಾಗಿ ಕುಟುಂಬವೆ?
ಈ ಪ್ರಕರಣದಲ್ಲಿ ಅಂದು ವಾಯುಸೇನೆ ಚೀಫ್ ಆಗಿದ್ದ ಎಸ್ಪಿ ತ್ಯಾಗಿ, ಅವರ ಸಂಬಂಧಿಗಳಾದ ಸಂದೀಪ್, ಜೂಲಿ ಮತ್ತು ತೋಸ್ಕಾ ತ್ಯಾಗಿ ಎಂಬುವವರ ಹೆಸರುಗಳು ಕೂಡ ಕೇಳಿಬಂದಿವೆ. ಈ 'ಕುಟುಂಬ'ದ ಶಿಫಾರಸಿನ ಮೇರೆಗೇ ಅಗಸ್ಟಾ ವೆಸ್ಟ್ ಲ್ಯಾಂಗ್ ಡೀಲ್ ಅಂತಿಮವಾಗಿತು ಎಂಬ ವಾದವೂ ಇದೆ. ಆದರೆ, ಈ ದಾಖಲೆಯಲ್ಲಿ ಎಪಿ ಎಂದು ಸಂಕೇತಾಕ್ಷರ ನಮೂದಿಸಲಾಗಿದ್ದು, ಈಗಾಗಲೆ ಇದು ಅಹ್ಮದ್ ಪಟೇಲ್ ಇರಬಹುದಾ ಎಂದು ಬಿಜೆಪಿ ಹೆಸರನ್ನು ಗಾಳಿಯಲ್ಲಿ ತೂರಿಬಿಟ್ಟಿದೆ. ಆದರೆ, ಇದನ್ನು ಅಹ್ಮದ್ ಪಟೇಲ್ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ಆರೋಪ ಸಾಬೀತು ಮಾಡುವಲ್ಲಿ ಸಿಬಿಐ ಯಶಸ್ವಿಯಾಗುವುದೆ?
ತಮಾಷೆಯ ಸಂಗತಿಯೆಂದರೆ, ಕ್ರಿಶ್ಚಿಯನ್ ಮೈಕೆಲ್ ಮತ್ತು ಇತರ ಆರೋಪಿಗಳ ವಿರುದ್ಧ ಯಾವುದೇ ಆರೋಪ ಸಾಬೀತಾಗದ ಕಾರಣ ಎಲ್ಲರನ್ನೂ ದೋಷಮುಕ್ತ ಮಾಡಿ ಜನವರಿಯಲ್ಲಿ ಇಟಲಿಯ ಮಿಲಾನ್ ಕೋರ್ಟ್ ಆಫ್ ಅಪೀಲ್ ತೀರ್ಪು ನೀಡಿದೆ. ಕ್ರಿಶ್ಚಿಯನ್ ಮೈಕೆಲ್ ವಿರುದ್ಧ ಮಾಡಲಾಗಿರುವ ಭ್ರಷ್ಟಾಚಾರದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಇಟಲಿಯ ಕೋರ್ಟ್ ತೀರ್ಪು ನೀಡಿದೆ. ಆದರೆ, ಈಗ ಚಾಲೆಂಜ್ ಇರುವುದೇ ಸಿಬಿಐ ಮತ್ತು ತನಿಖೆ ನಡೆಸುತ್ತಿರುವ ಇನ್ನೊಂದು ಸಂಸ್ಥೆ ಜಾರಿ ನಿರ್ದೇಶನಾಲಯದ ಮೇಲೆ. ಇಟಲಿ ಕೋರ್ಟ್ ಅಲ್ಲಗಳೆದ ಆರೋಪವನ್ನು ಸಿಬಿಐ ಮತ್ತು ಇಡಿಗಳು ಹೇಗೆ ಸಾಬೀತುಪಡಿಸಲಿವೆ?
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications