ಬೆಂಗಳೂರಲ್ಲಿ ರಸ್ತೆ ದಾಟುವಾಗ ಸಂಭವಿಸಿದ ಅಪಘಾತಗಳು: 4 ವರ್ಷದಲ್ಲಿ 907 ಪಾದಚಾರಿಗಳು ಸಾವು

ಬೆಂಗಳೂರು ಜನವರಿ 14: ಬೆಂಗಳೂರಿನಲ್ಲಿ ಟ್ರಾಫಿಕ್, ಹಾಳಾದ ರಸ್ತೆಗಳು, ವೇಗದ ವಾಹನ ಸಂಚಾರ, ಅವ್ಯವಸ್ಥಿತ ಕಾಮಗಾರಿಗಳಿಂದಾಗಿ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಇದರಿಂದ ಅನೇಕ ಸಾವು ನೋವುಗಳು ಸಂಭವಿಸಿವೆ ಮತ್ತು ಸಂಭವಿಸುತ್ತಲೇ ಇವೆ. ಇದು ಪಾದಚಾರಿಗಳ ಸಾವಿಗೂ ಕಾರಣವಾಗಿರುವುದಿದೆ. ನಾಲ್ಕು ವರ್ಷಗಳಲ್ಲಿ (2017-2020) ಬೆಂಗಳೂರಿನಲ್ಲಿ 907 ಪಾದಚಾರಿಗಳು ಸಾವನ್ನಪ್ಪಿರುವುದು ತಿಳಿದು ಬಂದಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಇದನ್ನು ವಿಶ್ವ ಸಂಪನ್ಮೂಲ ಸಂಸ್ಥೆ (ಡಬ್ಲ್ಯುಆರ್‌ಐ) ಇಂಡಿಯಾ, ಎನ್‌ಜಿಒ ನಡೆಸಿದ ವಿಶ್ಲೇಷಣೆ ತಿಳಿಸಿದೆ. ಕಳೆದ ಮೂರು ನಾಲ್ಕು ವರ್ಷಗಳಿಗೆ ಹೋಲಿಸಿದರೆ ನಗರದಲ್ಲಿ ಪಾದಚಾರಿಗಳ ಸಾವಿನ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಇಳಿಕೆಯಾಗಿದೆ. 2017 ರಲ್ಲಿ 276 ಪಾದಚಾರಿಗಳು ಸಾವನ್ನಪ್ಪಿದ್ದರೆ, 2018 ರಲ್ಲಿ 276, 2019 ರಲ್ಲಿ 257 ಮತ್ತು 2020 ರಲ್ಲಿ 98 (ಲಾಕ್‌ಡೌನ್ ವರ್ಷ) ಜನ ಪಾದಚಾರಿಗಳು ಸಾವನ್ನಪ್ಪಿರುವುದು ವರದಿಯಾಗಿದೆ. ವರದಿಯಲ್ಲಿ ಸಾವಿನ ಕಾರಣವನ್ನೂ ವಿವರಿಸುವ ಮೂಲಕ ಸಾವಿನ ಸಂಖ್ಯೆಯನ್ನು ವಿಂಗಡಿಸಲಾಗಿದೆ.

ಬೆಂಗಳೂರಿನಲ್ಲಿ 907 ಪಾದಚಾರಿಗಳು ಸಾವು

ಬೆಂಗಳೂರಿನಲ್ಲಿ 907 ಪಾದಚಾರಿಗಳು ಸಾವು

ಜನರು ರಸ್ತೆ ದಾಟಲು ಪ್ರಯತ್ನಿಸುತ್ತಿರುವಾಗ ಸುಮಾರು 60% (544/907) ಪಾದಚಾರಿ ಸಾವುಗಳು ಸಂಭವಿಸಿವೆ. ಇದೇ ಕಾರಣದಿಂದಾಗಿ 2017 ರಲ್ಲಿ 169, 2018 ರಲ್ಲಿ 164, 2019 ರಲ್ಲಿ 153 ಮತ್ತು 2020 ರಲ್ಲಿ 58 ಜನ ಪಾದಚಾರಿಗಳು ಸಾವನ್ನಪ್ಪಿದ್ದಾರೆ. ಹಾಗೆಯೇ, ಇದರಲ್ಲಿ ಒಟ್ಟು 185 ಸಾವುಗಳು ಹಿರಿಯ ನಾಗರಿಕರದ್ದಾಗಿದೆ (60 ವರ್ಷಕ್ಕಿಂತ ಹೆಚ್ಚು) ಎಂದು ವರದಿಯಾಗಿದೆ. ನಂತರ 46-60 ವರ್ಷ ವಯಸ್ಸಿನವರಲ್ಲಿ 128 ಸಾವುಗಳು ಸಂಭವಿಸಿವೆ. ಅಲ್ಲದೆ, ಕ್ರಾಸಿಂಗ್‌ಗಳಲ್ಲಿ 88% ಪಾದಚಾರಿ ಸಾವುಗಳು ಅತಿವೇಗದ ವಾಹನಗಳಿಂದ ಸಂಭವಿಸಿವೆ ಎಂದು ವಿಶ್ಲೇಷಣೆ ಹೇಳಿದೆ ಮತ್ತು ಈ ಸಾವುಗಳಲ್ಲಿ 28.4% 7pm ಮತ್ತು 10pm ನಡುವೆ ಸಂಭವಿಸಿದೆ.

ಈ ಸ್ಥಳಗಳಲ್ಲಿ ಪಾದಚಾರಿಗಳ ಸಾವಿನ ಸಂಖ್ಯೆ ಹೆಚ್ಚು

ಈ ಸ್ಥಳಗಳಲ್ಲಿ ಪಾದಚಾರಿಗಳ ಸಾವಿನ ಸಂಖ್ಯೆ ಹೆಚ್ಚು

ಮೆಜೆಸ್ಟಿಕ್ ಟರ್ಮಿನಲ್, ಕೆಆರ್ ಮಾರುಕಟ್ಟೆ, ಹೊರ ವರ್ತುಲ ರಸ್ತೆ, ಬಳ್ಳಾರಿ ರಸ್ತೆ ಮತ್ತು ಹೊಸೂರು ರಸ್ತೆಗಳಲ್ಲಿ ಪಾದಚಾರಿಗಳ ಸಾವು ಸಂಭವಿಸುವ ಕೆಲವು ಹಾಟ್‌ಸ್ಪಾಟ್‌ಗಳು ಸೇರಿವೆ. ಇವುಗಳಲ್ಲಿ ಅತೀ ಹೆಚ್ಚು ಸಾವುಗಳು ಮೆಜೆಸ್ಟಿಕ್ ಮತ್ತು ಕೆಆರ್ ಮಾರ್ಕೆಟ್ ನಗರದ ಪ್ರಮುಖ ಬಸ್ ಟರ್ಮಿನಲ್‌ಗಳಲ್ಲಿ ಸಂಭವಿಸಿದ್ದು, ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ರಸ್ತೆಗಳನ್ನು ದಾಟುವ ಬಸ್ ಬಳಕೆದಾರರೇ ಆಗಿದ್ದಾರೆ.

WRI ಭಾರತ 2017-2020ರ ನಡುವಿನ ಕ್ರ್ಯಾಶ್ ಡೇಟಾವನ್ನು ವಿಶ್ಲೇಷಿಸಿದೆ. ಎಲ್ಲಿ ಮತ್ತು ಯಾವಾಗ ಕ್ರ್ಯಾಶ್‌ಗಳು ಸಂಭವಿಸುತ್ತವೆ ಮತ್ತು ಯಾವ ವಯಸ್ಸಿನ ಗುಂಪುಗಳು ಹೆಚ್ಚು ದುರ್ಬಲವಾಗಿವೆ ಎಂಬುದನ್ನು ಕಂಡುಹಿಡಿಯಲು ಎಫ್‌ಐಆರ್‌ಗಳನ್ನು ಸಂಗ್ರಹಿಸಲಾಗಿದೆ.

ಆರಾಮದಾಯಕ ಮಾರ್ಗಗಳ ಬಳಕೆ

ಆರಾಮದಾಯಕ ಮಾರ್ಗಗಳ ಬಳಕೆ

WRI ಇಂಡಿಯಾದ ವ್ಯವಸ್ಥಾಪಕ (ಸುಸ್ಥಿರ ನಗರಗಳು ಮತ್ತು ಸಾರಿಗೆ) ಪ್ರಿಯಾಂಕಾ ಸುಲ್ಖ್ಲಾನ್ ಮಾತನಾಡಿ- "ಪಾದಚಾರಿ ದಾಟುವಿಕೆಗಳು (ಸ್ಕೈ ವಾಕರ್) ನಗರದಲ್ಲಿ ಪ್ರಮುಖ ಕನೆಕ್ಟರ್‌ಗಳಾಗಿವೆ. ಎಲ್ಲಾ ರಸ್ತೆ ಬಳಕೆದಾರರಿಗೆ ಸುಸ್ಥಿರ ಚಲನಶೀಲತೆ ಮತ್ತು ಸುರಕ್ಷತೆಯನ್ನು ಉತ್ತೇಜಿಸಲು ಅವು ಸಹಾಯ ಮಾಡುತ್ತವೆ. ಪಾದಚಾರಿಗಳು ರಸ್ತೆ ದಾಟುವುದನ್ನು ಕಡಿಮೆ ಮಾಡಿ ಮತ್ತು ಆರಾಮದಾಯಕ ಮಾರ್ಗವನ್ನು ನೀಡುತ್ತವೆ.

ಹದಗೆಟ್ಟ ಪಾದಚಾರಿ ಮಾರ್ಗಗಳು

ಹದಗೆಟ್ಟ ಪಾದಚಾರಿ ಮಾರ್ಗಗಳು

ಪಾದಚಾರಿಗಳ ಸಾವಿಗೆ ಹಾಳಾದ ಅಂಡರ್‌ಪಾಸ್‌ಗಳು ಸ್ಕೈ ವಾಕರ್‌ಗಳು ಕಾರಣವಾಗುತ್ತವೆ. ಇವುಗಳ ಬಳಕೆಗೆ ಹೆಚ್ಚು ಸಮಯ ತೆಗೆದುಕೊಳ್ಳುವ ಕಾರಣ ಪಾದಚಾರಿಗಳು ರಸ್ತೆಗಳಲ್ಲಿ ದಾಟಲು ಪ್ರಯತ್ನ ಮಾಡುತ್ತಾರೆ. ಈ ಬಗ್ಗೆ ಮಾತನಾಡಿದ ಪ್ರಿಯಾಂಕಾ ಸುಲ್ಖ್ಲಾನ್ ಅವರು, "ಫುಟ್-ಓವರ್ ಬ್ರಿಡ್ಜ್‌ಗಳು (ಎಫ್‌ಒಬಿಗಳು) ಮತ್ತು ಅಂಡರ್‌ಪಾಸ್‌ಗಳು ಹಾಳಾಗಿವೆ. ಇದು ಅಡ್ಡಾದಿಡ್ಡಿ ದಾಟುವಿಕೆಗಳು ಮತ್ತು ಬಹು ಸಂಘರ್ಷಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿಯೇ ಸುರಕ್ಷಿತ ದರ್ಜೆಯ ಕ್ರಾಸಿಂಗ್‌ಗಳಿಗೆ ಆದ್ಯತೆ ನೀಡಬೇಕು" ಎಂದು ಅವರು ಹೇಳಿದರು. WRI ಹಾಟ್‌ಸ್ಪಾಟ್‌ಗಳಿಂದ ಚಿತ್ರಗಳು ಮತ್ತು ವಿಡಿಯೊಗಳನ್ನು ಸಂಗ್ರಹಿಸಿದೆ (ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಿನ ಪಾದಚಾರಿ ಅಪಘಾತಗಳು ದಾಖಲಾಗಿವೆ) ಇದು ಪಾದಚಾರಿ ಮೂಲಸೌಕರ್ಯದ ಸ್ಪಷ್ಟ ಅನುಪಸ್ಥಿತಿಯನ್ನು ಸ್ಪಷ್ಟವಾಗಿ ಗುರುತಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+