7th Pay Commission: ಹಬ್ಬಕ್ಕೂ ಮುನ್ನ 23ಲಕ್ಷ ಸರ್ಕಾರಿ ನೌಕರರಿಗೆ 4% ತುಟ್ಟಿಭತ್ಯೆ ಹೆಚ್ಚಳ ಘೋಷಣೆ
ದೇಶದಲ್ಲಿ ಸದ್ಯಕ್ಕೆ 7ನೇ ವೇತನ ಆಯೋಗದಡಿ ಸರ್ಕಾರಿ ನೌಕರರ ತುಟ್ಟಿಭತ್ಯೆ (DA Hike) ಮತ್ತು ತುಟ್ಟಿ ಪರಿಹಾರ(DR hike), ಮೂಲ ವೇತನ ಹೆಚ್ಚಳ ಕುರಿತು ಲೆಕ್ಕಾಚಾರಗಳು ಶುರುವಾಗಿದೆ. ಕೇಂದ್ರ ಸರ್ಕಾರಿ ನೌಕರರು ವೇತನ ಪರಿಷ್ಕರಣೆ ನಿರ್ಧಾರ ಘೋಷಣೆ ನೀರಿಕ್ಷೆಯಲ್ಲಿದ್ದಾರೆ. ಈ ಮಧ್ಯೆ ರಾಜ್ಯ ಸರ್ಕಾರ ತನ್ನ ಒಟ್ಟು 23 ಲಕ್ಷ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.
ಹೌದು, 15 ಲಕ್ಷ ರಾಜ್ಯ ಸರ್ಕಾರಿ ನೌಕರರಿಗೆ ಮತ್ತು 8 ಲಕ್ಷ ಪಿಂಚಣಿದಾರರಿಗೆ ದೀಪಾವಳಿ ಹಬ್ಬಕ್ಕು ಮೊದಲೇ ತುಟ್ಟಿಭತ್ಯೆ (ಡಿಎ) ಅನ್ನು ಶೇಕಡಾ 4 ಪ್ರತಿಶತದಷ್ಟು ಹೆಚ್ಚಳ ಮಾಡಲಿದೆ. ಈ ಕುರಿತು ಹಬ್ಬದ ಮೊದಲೇ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.

ಅಷ್ಟಕ್ಕೂ ಈ ತುಟ್ಟಿಭತ್ಯೆ ಹೆಚ್ಚಳ ಘೋಷಣೆ ಆಗಲಿರುವುದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ರಾಜ್ಯ ಸರ್ಕಾರದಿಂದ ಎಂಬುದು ಮತ್ತೊಂದು ವಿಶೇಷ. ಏಳನೇ ವೇತನ ಆಯೋಗದಡಿ ಸರ್ಕಾರಿ ನೌಕರರಿಗೆ ಬಂಪರ್ ನೀಡಲು UP ಸರ್ಕಾರ ನಿರ್ಧರಿಸಿದೆ.
ಶೇ.4ರಷ್ಟು ಡಿಎ ಹೆಚ್ಚಳ ಘೋಷಣೆ ಸಾಧ್ಯತೆ
ರಾಜ್ಯ ಗೆಜೆಟೆಡ್ ಅಲ್ಲದ ಉದ್ಯೋಗಿಗಳಿಗೆ ಬೋನಸ್ ನೀಡಬಹುದೆಂದು ಊಹಿಸಲಾಗಿದೆ. ತುಟ್ಟಿಭತ್ಯೆ (ಡಿಎ) ಪರಿಷ್ಕರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಘೋಷಣೆ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಲಿದೆ. ಕೇಂದ್ರವು ಅಕ್ಟೋಬರ್ ಮೊದಲ ವಾರ ತನ್ನ ನಿರ್ಧಾರ ಪ್ರಕಟಿಸಲಿದೆ. ನಂತರವೇ ಯೋಗಿ ಆದಿತ್ಯನಾಥ್ ಸರ್ಕಾರ ಶೇ.4ರಷ್ಟು ಡಿಎ ಹೆಚ್ಚಳ ಘೋಷಿಸುವ ನಿರೀಕ್ಷೆ ಇದೆ.

3,000 ಕೋಟಿ ಸರ್ಕಾರಕ್ಕೆ ಹೆಚ್ಚುವರಿ ಹೊರೆ
ಉತ್ತರ ಪ್ರದೇಶ ಸರ್ಕಾರದ ತುಟ್ಟಿಭತ್ಯೆ ಹೆಚ್ಚಳ ನಿರ್ಧಾರದಿಂದ 08 ಲಕ್ಷ ಸರ್ಕಾರಿ ನೌಕರರಿಗೆ ಪ್ರಯೋಜನ ಸಿಗಲಿದೆ. ಇವರೆಲ್ಲ ಹಣದುಬ್ಬರ ಸಮಸ್ಯೆ ನೀಗಿಸಲಿದ್ದಾರೆ. ಶೇಕಡಾ 4ರಷ್ಟು ಪರಿಷ್ಕರಣೆಯಿಂದಾಗಿ ಯುಪಿ ಸರ್ಕಾರದ ಬೊಕ್ಕಸಕ್ಕೆ 3,000 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಆಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಗೆಜೆಟೆಡ್ ಅಲ್ಲದ ನೌಕರರಿಗೆ ಮೂಲ ವೇತನ ಮತ್ತು ಡಿಎ ಅಂಶಗಳ ಆಧಾರದಲ್ಲಿ ಬೋನಸ್ ನೀಡುವ ಸಾಧ್ಯತೆಗಳು ಇವೆ. ಕಳೆದ ವರ್ಷ ಉದ್ಯೋಗಿಗಳಿಗೆ ಸುಮಾರು 7,000 ರೂ. ಮೊತ್ತದ ಬೋನಸ್ ಘೋಷಿಸಲಾಗಿತ್ತು. ಈ ವರ್ಷವು ಬೋನಸ್‌ನಲ್ಲಿ ತುಸು ಏರಿಕೆ ಕಂಡು ಬರಲಿದೆ.
ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಡಿಎ ಮತ್ತು ಡಿಆರ್ ಅನ್ನು ಶೇಕಡಾ 3ರಷ್ಟು ಹೆಚ್ಚಿಸಬಹುದು. ಇದನ್ನು ಸೆಪ್ಟಂಬರ್ ಅಂತ್ಯಕ್ಕೆ ಇಲ್ಲವೇ ಅಕ್ಟೋಬರ್ ಮೊದಲ ವಾರ ಪ್ರಕಟಿಸುವ ಸಾಧ್ಯತೆ ಇದೆ. ಎಲ್ಲವು ಅಂದುಕೊಂಡಂತಾದರೆ, ಕೇಂದ್ರ ಸರ್ಕಾರಿ ನೌಕರರು ಈ ವರ್ಷದ ಎರಡನೇ (ಜುಲೈ) ತುಟ್ಟಿಭತ್ಯೆ ಸ್ವೀಕರಿಸಲಿದ್ದಾರೆ. ಇದು ಘೋಷಣೆ ಆಗುತ್ತಿದ್ದ ಯುಪಿ ಸರ್ಕಾರ ನಿರ್ಧಾರ ಪ್ರಕಟಿಸಲಿದೆ..
8ನೇ ವೇತನ ಆಯೋಗ ಅಪ್ಡೇಟ್ ಮಾಹಿತಿ ಇಲ್ಲಿದೆ
ಕೇಂದ್ರ ಸರ್ಕಾರವು 2016ರಲ್ಲಿ ಜಾರಿಗೆ ತಂದಿರುವ 7ನೇ ವೇತನ ಆಯೋಗವು ಕೊನೆಗೊಳ್ಳಲು ಹಲವು ತಿಂಗಳು ಬಾಕಿ ಇದೆ. ಹೀಗಾಗಿ ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೋಗ ಯಾವಾಗ ಅನುಷ್ಠಾನಕ್ಕೆ ಬರಲಿದೆ ಎಂದು ಕಾಯುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ನೌಕರರು ಶಿಫಾರಸುಗಳನ್ನು ಸಹ ಮಾಡಿದ್ದಾರೆ. ತಮ್ಮ ಬೇಡಿಕೆಗಳ ಪತ್ರವನ್ನು ಕೇಂದ್ರಕ್ಕೆ ನೀಡಿದ್ದಾರೆ..
ಈ ಹಿಂದೆ ಆಯೋಗವು ಶಿಫಾರಸು ಮಂಡಿಸಿ ಏಳನೇ ವೇತನ ಆಯೋಗವನ್ನು ಜಾರಿಗೆ ತಂದಿತ್ತು. ಈಗಲೂ ಅದೇ ರೀತಿ ಶಿಫಾರಸು ಮಂಡಿಸಿ 2026ರ ಜನವರಿಯಿಂದ 8ನೇ ವೇತನ ಆಯೋಗ ಜಾರಿಗೆ ತರುವ ಸಾಧ್ಯತೆ ಇದೆ. ಈ ಆಯೋಗ ಜಾರಿಯಾದರೆ ಮೂಲವೇತನ, ತುಟ್ಟಿಭತ್ಯೆ, ತುಟ್ಟಿಪರಿಹಾರ, ಮನೆ ಬಾಡಿಗೆ ಭತ್ಯೆ ಸೇರಿದಂತೆ ವಿವಿಧ ವೇತನಗಳು ಗಮನಾರ್ಹವಾಗಿ ಹೆಚ್ಚಾಗಲಿವೆ ಎಂಬುದು ಕೇಂದ್ರ ಸರ್ಕಾರಿ ನೌಕರರ ನಿರೀಕ್ಷೆ ಹೊಂದಿದ್ದಾರೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಮಾತ್ರ ಯಾವುದೇ ಮಾಹಿತಿ ಅಧಿಕೃತವಾಗಿ ನೀಡಿಲ್ಲ.
ನೌಕರರಿಗೆ ಆರ್ಥಿಕ ಭರವಸೆ
ಭವಿಷ್ಯದಲ್ಲಿ 8 ನೇ ವೇತನ ಆಯೋಗದಡಿ ಶೇಕಡಾ 20 ರಿಂದ 35 ರಷ್ಟು ವೇತನ ಹೆಚ್ಚಾಗಬಹುದು. ಹಂತ 1ರಡಿಯಲ್ಲಿ ವೇತನ ಅಂದಾಜು 34,560 ರೂಗೆ ಏರಿಕೆ ಆಗಬಹುದು. ಆಗ ಫಿಟ್‌ಮೆಂಟ್ ಅಂಶ 1.92 ರಷ್ಟು ಪರಿಗಣಿಸಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಒಟ್ಟಾರೆ ನೌಕರರು ಮತ್ತು ಪಿಂಚಣಿದಾರರಿಗೆ ಮಹತ್ವದ ಆರ್ಥಿಕ ಭರವಸೆ ದೊರೆಯಲಿದೆ. ಸದ್ಯ ಕೇಂದ್ರ ಸರ್ಕಾರಿ ನೌಕರರು ಈ ವರ್ಷದ ಜುಲೈ ತುಟ್ಟಿಭತ್ಯೆ, ತುಟ್ಟಿ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.
ಸದ್ಯ ಏಳನೇ ವೇತನ ಆಯೋಗದಡಿ ಕೇಂದ್ರ ಸರ್ಕಾರಿ ನೌಕರರಿಗೆ ಈ ವರ್ಷದ ಎರಡನೇ ಜುಲೈ ತುಟ್ಟಿಭತ್ಯೆ (ಡಿಎ) ಶೇಡಕಾ 3ರಿಂದ 4ರಷ್ಟು ಏರಿಕೆ ಘೋಷಣೆ ಅಕ್ಟೋಬರ್ ಮೊದಲ ವಾರ ಘೋಷಣೆ ಆಗುವ ಸಾಧ್ಯತೆ ಇದೆ.
{document1}












Click it and Unblock the Notifications