7ನೇ ವೇತನ ಆಯೋಗ: ಮೋದಿ ಪ್ರವೇಶದಿಂದ ತ್ವರಿತಗೊಂಡ ಪ್ರಕ್ರಿಯೆ!
ನವದೆಹಲಿ, ಮೇ 29: 7ನೇ ವೇತನ ಆಯೋಗ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಿದ್ದಾರೆ. ಸರ್ಕಾರಿ ಸಂಬಳ ಏರಿಕೆ, ವೇತನ ಶ್ರೇಣಿ ಬಗ್ಗೆ ಮೋದಿ ಅವರು ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ. ಹೀಗಾಗಿ, ಪ್ರಕ್ರಿಯೆ ತ್ವರಿತಗೊಂಡಿದೆ.
ಈ ಪ್ರಕ್ರಿಯೆಯ ಮೊದಲ ಭಾಗವಾಗಿ ದೀರ್ಘಾವಧಿ ಕರ್ತವ್ಯ ನಿರ್ವಹಿಸಿರುವ ಸಿಬ್ಬಂದಿಗಳಿಗೆ ಭತ್ಯೆ ಘೋಷಿಸಲಾಗುವುದು, ಸಂಬಳ ಏರಿಕೆ ಪ್ರಮಾಣದ ಬಗ್ಗೆ ಚರ್ಚೆ ಜಾರಿಯಲ್ಲಿದೆ. ಎಲ್ಲಾ ಸಾರ್ವಜನಿಕ ವಲಯದ ಸಂಸ್ಥೆ(PSU) ಗಳಲ್ಲಿನ ಬಡ್ತಿ, ಉತ್ತಮ ಕಾರ್ಯಕ್ಷಮತೆ ಹೊಂದಿರುವವರಿಗೆ ಭತ್ಯೆ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಮೋದಿ ಅವರು ಕರೆ ನೀಡಿದ್ದಾರೆ.
ತ್ವರಿತ ಗತಿಯಲ್ಲಿ ಈ ಪ್ರಕ್ರಿಯೆ ನಡೆಸಲು ಪ್ರತ್ಯೇಕ ಆಯೋಗ ರಚಿಸುವಂತೆ ಮೋದಿ ಸೂಚಿಸಿದ್ದಾರೆ. ಒಟ್ಟಾರೆ, ಮೂರು ತಿಂಗಳಲ್ಲಿ ಈ ಎಲ್ಲಾ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕಿದೆ.

ಆಯೋಗ ಈ ಬಗ್ಗೆ ವರದಿಯನ್ನು ಪ್ರಧಾನಿ ಮೋದಿ ಅವರಿಗೆ ನೇರವಾಗಿ ಸಲ್ಲಿಸಲಿದೆ. ಜೂನ್ 04ರಂದು ಆಯೋಗದ ಜತೆಗೆ ಮೋದಿ ಅವರು ಸಭೆ ನಡೆಸಲಿದ್ದಾರೆ. ಆಯಿಲ್ ಇಂಡಿಯಾ, ಬಿಎಚ್ ಇಎಲ್ ಹಾಗೂ ಎನ್ ಟಿ ಪಿಸಿ ಸಂಸ್ಥೆಯ ಸದಸ್ಯರು ಆಯೋಗದಲ್ಲಿದ್ದಾರೆ.
7ನೇ ವೇತನ ಆಯೋಗದ ಶಿಫಾರಸುಗಳಲ್ಲದೆ ಹೆಚ್ಚಿನ ಪ್ರಮಾಣದ ಸಂಬಳ ಏರಿಕೆಯನ್ನು ಸರ್ಕಾರಿ ಸಿಬ್ಬಂದಿಗಳು ಪಡೆಯಬಹುದು ಎಂಬ ಭರವಸೆ ಸಿಕ್ಕಿದೆ.












Click it and Unblock the Notifications