ಕರ್ನಾಟಕ ಸೇರಿ 5 ರಾಜ್ಯದಲ್ಲಿ ಸಕ್ರಿಯ ಕೋವಿಡ್ ಪ್ರಕರಣ ಏರಿಕೆ

ನವದೆಹಲಿ, ಜನವರಿ 07; ಭಾರತದಲ್ಲಿ ಹೊಸ ಕೋವಿಡ್ ಪ್ರಕರಣದಲ್ಲಿ ಭಾರೀ ಏರಿಕೆಯಾಗಿದೆ. ಗುರುವಾರ 90,000 ಹೊಸ ಪ್ರಕರಣ ದಾಖಲಾಗಿದೆ. ಪ್ರಮುಖವಾಗಿ ದೇಶದ ಆರು ರಾಜ್ಯಗಳಲ್ಲಿ ಕಳೆದ ವಾರದಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ನವದೆಹಲಿ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಕ್ರಿಯ ಪ್ರಕರಣದಲ್ಲಿ ಭಾರೀ ಏರಿಕೆಯಾಗಿದೆ. ಶುಕ್ರವಾರ ದೇಶದಲ್ಲಿನ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 1 ಲಕ್ಷದ ಗಡಿ ದಾಟಲಿದೆ.

ಈ ಆರು ರಾಜ್ಯಗಳಲ್ಲಿ ಪ್ರತಿದಿನ ಸುಮಾರು 10 ಸಾವಿರ ಹೊಸ ಪ್ರಕರಣ ದಾಖಲಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯದ ಪರಿಸ್ಥಿತಿ ಬಗ್ಗೆ ತೀವ್ರವಾದ ನಿಗಾವಹಿಸಿದೆ. ಅಗತ್ಯವಿದ್ದರೆ ಕೇಂದ್ರದ ತಂಡವನ್ನು ಕಳಿಸಿಕೊಡಲು ಚಿಂತನೆ ನಡೆಸಿದೆ.

6 States Reports Massive Spike In Active Covid Cases

ಸಕ್ರಿಯ ಪ್ರಕರಣ ಏರಿಕೆ; ಮಹಾರಾಷ್ಟ್ರದಲ್ಲಿ 15 ದಿನಗಳ ಹಿಂದೆ ಸಕ್ರಿಯ ಪ್ರಕರಣಗಳ ಸಂಖ್ಯೆ 15,179. ಜನವರಿ 5ರಂದು ಈ ಸಂಖ್ಯೆ 70,005ಕ್ಕೆ ಏರಿಕೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ 7,457 ಇದ್ದ ಸಕ್ರಿಯ ಪ್ರಕರಣ ಏಳು ದಿನದಲ್ಲಿ 25,475ಕ್ಕೆ ಏರಿದೆ.

ಇನ್ನು ದೆಹಲಿಯಲ್ಲಿ ಕಳೆದ ವಾರ 1,612 ಇದ್ದ ಸಕ್ರಿಯ ಪ್ರಕರಣ ಈಗ 14,889ಕ್ಕೆ ಏರಿದೆ. ಕರ್ನಾಟಕದಲ್ಲಿ 7,485 ರಿಂದ 13,561 ಮತ್ತು ತಮಿಳುನಾಡಿನಲ್ಲಿ 6,537 ರಿಂದ 12,412ಕ್ಕೆ ಸಕ್ರಿಯ ಪ್ರಕರಣ ಏರಿಕೆ ಕಂಡಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ 6 ರಾಜ್ಯಗಳು 10 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣ ದಾಖಲಾಗಿರುವ ರಾಜ್ಯಗಳಿಂದ ದೇಶದಲ್ಲಿನ ಹೊಸ ಪ್ರಕರಣ, ಸಕ್ರಿಯ ಪ್ರಕರಣಗಳು ಏರಿಕೆಯಾಗುತ್ತಿವೆ.

ದೇಶದ 28 ಜಿಲ್ಲೆಗಳಲ್ಲಿ ವಾರದ ಪಾಸಿಟಿವಿಟಿ ದರ ಶೇ 10ರಷ್ಟು ಇದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. 6 ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಏರಿಕೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ವಾರದ ಪಾಸಿಟಿವಿ ದರ ಶೇ 10ರಷ್ಟಿರುವ 28 ಜಿಲ್ಲೆಗಳ ಪೈಕಿ ಮಿಜೋರಾಂನ 8 ಮತ್ತು ಪಶ್ಚಿಮ ಬಂಗಾಳದ 6 ಜಿಲ್ಲೆಗಳು ಸೇರಿವೆ. ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಮತ್ತು ಗೋವಾದ 4 ಜಿಲ್ಲೆಗಳು ಸೇರಿವೆ.

ದೇಶದ 43 ಜಿಲ್ಲೆಗಳಲ್ಲಿ ವಾರದ ಪಾಸಿಟಿವಿಟಿ ದರ ಶೇ 5 ರಿಂದ 10ರಷ್ಟಿದೆ. ಕಳೆದ 10 ದಿನಗಳಲ್ಲಿ ದೇಶದಲ್ಲಿ ಶೇ 6.3ರಷ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಡಿಸೆಂಬರ್ 29ರಂದು 0.79 ಇದ್ದ ಪಾಸಿಟಿವಿಟಿ ದರ ಜನವರಿ 5ಕ್ಕೆ ಶೇ 5.03 ಆಗಿದೆ.

ಗುರುವಾರ ದೇಶದ ಹೊಸ ಕೋವಿಡ್ ಪ್ರಕರಣ, ಸಕ್ರಿಯ ಪ್ರಕರಣದಲ್ಲಿ ಭಾರೀ ಏರಿಕೆಯಾಗಿತ್ತು. 90,928 ಹೊಸ ಪ್ರಕರಣ ದಾಖಲಾದರೆ, ಸಕ್ರಿಯ ಪ್ರಕರಣಗಳು 2,85,401ಕ್ಕೆ ತಲುಪಿತ್ತು.

ದೇಶದಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 2630 ಆಗಿದೆ. ಇವರಲ್ಲಿ 995 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ದೇಶದ 26 ರಾಜ್ಯಗಳಲ್ಲಿ ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ.

ಶುಕ್ರವಾರದ ಹೆಲ್ತ್ ಬುಲೆಟಿನ್ 1,16,836 ಹೊಸ ಕೋವಿಡ್ ಪ್ರಕರಣಗಳು ದೇಶದಲ್ಲಿ ದಾಖಲಾಗಿದೆ. 200 ದಿನಗಳ ಬಳಿಕ ಮೊದಲ ಬಾರಿಗೆ ಹೊಸ ಕೋವಿಡ್ ಪ್ರಕರಣದಲ್ಲಿ ಏರಿಕೆಯಾಗಿದೆ. ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 3,52,25,699 ಆಗಿದೆ.

ಏಳು ತಿಂಗಳ ಬಳಿಕ ಹೊಸ ಪ್ರಕರಣಗಳ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. 2021ರ ಜೂನ್ 6ರಂದು ದೇಶದಲ್ಲಿ 1,01,209 ಹೊಸ ಕೋವಿಡ್ ಪ್ರಕರಣ ದಾಖಲಾಗಿತ್ತು. ಗುರುವಾರ ಮಹಾರಾಷ್ಟ್ರದಲ್ಲಿ 36,265, ಪಶ್ಚಿಮ ಬಂಗಾಳದಲ್ಲಿ 15,421 ಮತ್ತು ನವದೆಹಲಿಯಲ್ಲಿ 15,097 ಪ್ರಕರಣಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+