39 ಹೆಂಡತಿಯರು, 64 ಮಕ್ಕಳು, 14 ಸೊಸೆಯಂದಿರು, 40ಕ್ಕೂ ಹೆಚ್ಚು ಮೊಮ್ಮಕ್ಕಳನ್ನೊಂದಿದ ಭಾರತದ ಈ ವ್ಯಕ್ತಿ
ಇಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಕಂಡುಬರುವುದು ತೀರಾ ಕಡಿಮೆ. ಏನಿಲ್ಲ ಅಂದರೂ ಒಂದು ಕುಟುಂಬದಲ್ಲಿ 4-5 ಜನ ವಾಸ ಮಾಡುತ್ತಾರೆ. ಅದರು ಗರಿಷ್ಠ 6 ಜನ ಆಗಿರುತ್ತಾರೆ. ಆದರೆ ಭಾರತದ ಈಶಾನ್ಯ ರಾಜ್ಯವಾದ ಮಿಜೋರಾಂನಲ್ಲಿರುವ ಬಕ್ತಾಂಗ್ ಎಂಬ ಗ್ರಾಮದಲ್ಲಿ ಒಂದೇ ಕುಟುಂದಲ್ಲಿ ಒಟ್ಟು 181 ಸದಸ್ಯರು ಇದ್ದಾರೆ. ಇದು ವಿಶ್ವದಲ್ಲೇ ಅತಿ ದೊಡ್ಡ ಕುಟುಂಬವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹಾಗಾದರೆ ಈ ಕುಟುಂಬದ ಯಜಮಾನರು ಯಾರು ಹಾಗೂ ಸಂಪೂರ್ಣ ಹಿನ್ನೆಲೆ ಏನು ಎಂದು ಇಲ್ಲಿ ತಿಳಿಯಿರಿ.
ಈ ಅತಿ ದೊಡ್ಡ ಕುಟುಂಬದ ಜವಾಬ್ದಾರಿಯನ್ನು ಜಿಯೋನಾ ಚಾನಾ ಎಂಬುವರು ಹೊತ್ತಿದ್ದರು. ಈ ಚಾನ ಕ್ರಿಶ್ಚಿಯನ್ ಧರ್ಮದ ಒಂದು ಪಂಗಡದ ನಾಯಕ. ಇದು ಪುರುಷರಿಗೆ ಬಹುಪತ್ನಿತ್ವವನ್ನು ಅಭ್ಯಾಸ ಮಾಡಲು ಅವಕಾಶ ನೀಡುತ್ತದೆ. ಹೀಗಾಗಿ ಇವರ ಕುಟುಂಬವೂ ಕೂಡ ದೊಡ್ಡದಾಗಿ ಬೆಳೆದಿತ್ತು.

ಇನ್ನು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳಿಂದಾಗಿ ಜಿಯೋನಾ ಚಾನಾ 2011ರಲ್ಲಿ 76ನೇ ವಯಸ್ಸಿನಲ್ಲಿ ನಿಧನರಾದರು. ಮಾಹಿತಿಯ ಪ್ರಕಾರ, ಇದೀಗ ಚಾನಾ ನಾಲ್ಕು ಅಂತಸ್ತಿನ ಮನೆಯಲ್ಲಿ ತನ್ನ 39 ಹೆಂಡತಿಯರು, 64 ಮಕ್ಕಳು ಮತ್ತು 14 ಸೊಸೆಯಂದಿರು ಮತ್ತು 40ಕ್ಕೂ ಅಧಿಕ ಮೊಮ್ಮಕ್ಕಳೊಂದಿಗೆ 181 ಸದಸ್ಯರೊಂದಿಗೆ ಕುಟುಂಬವು ಒಟ್ಟಾಗಿ ವಾಸಿಸುತ್ತಿದೆ.
ಇಲ್ಲಿಯವರೆಗೆ, ಚಾನಾ ಅವರ ಕುಟುಂಬವು ಒಟ್ಟಿಗೆ ವಾಸಿಸುತ್ತಿದೆ. ಸುಮಾರು 100 ಕೊಠಡಿಗಳಿರುವ ನಾಲ್ಕು ಅಂತಸ್ತಿನ ಮನೆಯಲ್ಲಿ ಈ ಅತೀ ದೊಡ್ಡ ಕುಟುಂಬ ವಾಸಿಸುತ್ತಿದೆ. ಕಾಲಾನಂತರದಲ್ಲಿ, ಚಾನಾ ಅವರ ಮನೆ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಝಿಯೋನಾ ಚಾನಾ 1942ರಲ್ಲಿ ಜಿಯೋನಾ ತಂದೆಯಿಂದ ಸ್ಥಾಪಿಸಲ್ಪಟ್ಟ "ಚಾನಾ" ಎಂಬ ಹೆಸರಿನ ಪಂಥಕ್ಕೆ ಸೇರಿದವರು ಮತ್ತು ನೂರಾರು ಕುಟುಂಬಗಳ ಸದಸ್ಯತ್ವವನ್ನು ಹೊಂದಿದ್ದಾರೆ.
ಜಿಯೋನಾ ಚಾನಾ ತನ್ನ ಮೊದಲ ಹೆಂಡತಿಯನ್ನು ಮದುವೆಯಾದಾಗ ಅವರಿಗೆ ಕೇವಲ 17 ವರ್ಷ. ಚನಾ ಒಮ್ಮೆ ಒಂದು ವರ್ಷದಲ್ಲಿ 10 ಮಹಿಳೆಯರನ್ನು ಮದುವೆಯಾಗಿದ್ದರಂತೆ. ವರದಿಯ ಪ್ರಕಾರ, ಪತ್ನಿಯರು ಚಾನಾ ಅವರ ಮಲಗುವ ಕೋಣೆಯ ಬಳಿ ವಸತಿ ನಿಲಯವನ್ನು ಹಂಚಿಕೊಳ್ಳುತ್ತಿದ್ದರು. ಈ ದೊಡ್ಡ ಕುಟುಂಬವು ತಮ್ಮ ದೊಡ್ಡ ಡೈನಿಂಗ್ ಹಾಲ್‌ನಲ್ಲಿ ಊಟವನ್ನು ಮಾಡಲು ಒಟ್ಟಿಗೆ ಕುಳಿತುಕೊಳ್ಳುತ್ತಿದ್ದರು.
ಅವರ ಕುಟುಂಬವು 2011ರಲ್ಲಿ ವರ್ಲ್ಡ್ ರೆಕಾರ್ಡ್ ಅಕಾಡೆಮಿ ಮತ್ತು ನಂತರ 2019ರಲ್ಲಿ ಲಂಡನ್ ವರ್ಲ್ಡ್ ರೆಕಾರ್ಡ್ಸ್‌ನಿಂದ ವಿಶ್ವದ 'ದೊಡ್ಡ ಕುಟುಂಬ' ಎಂದು ಪ್ರಖ್ಯಾತಿ ಪಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ.












Click it and Unblock the Notifications