ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರಿಂದ ಪೇಜಾವರ ಶ್ರೀ ವಿರುದ್ಧ ಪ್ರತಿಭಟನೆ
ಹುಬ್ಬಳ್ಳಿ, ಜುಲೈ 2: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಆಯೋಜಿಸಿದ್ದ ನಮಾಜ್ ಹಾಗೂ ಇಫ್ತಾರ್ ಕೂಟ ಖಂಡಿಸಿ ಶ್ರೀ ರಾಮ ಸೇನೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿತು.
ವಿಶ್ವೇಶ ತೀರ್ಥ ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

"ಗೋಹತ್ಯೆ ಮಾಡುವ ಗೋಭಕ್ಷಕರಿಗೆ ಔದಾರ್ಯ ನೀಡಿರುವುದು ಖಂಡನೀಯ. ಹಿಂದೂಗಳಲ್ಲಿಯೂ ಗೋಮಾಂಸ ತಿನ್ನುವರಿದ್ದಾರೆ ಎಂದು ಹೇಳಿರುವ ಪೇಜಾವರ ಶ್ರೀಗಳು ಕೂಡಲೇ ಕ್ಷಮೆಯಾಚಿಸಬೇಕು," ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

"ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಮುದಾಯದವರಿಗೆ ಆತಿಥ್ಯ ನೀಡಿರುವುದು ಖಂಡನೀಯ," ಎಂದು ಪ್ರತಿಭಟನಾಕಾರರು ಹೇಳಿದರು.
ಇದೇ ವೇಳೆ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಮುಸ್ಲಿಂ ಭಾಂದವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications